ಡಿಕೆಶಿ ರಕ್ಷಣೆಗೆ ಕಾಂಗ್ರೆಸ್ ಕಾನೂನು ಉಲ್ಲಂಘಿಸಿದೆ: ಆರ್ ಅಶೋಕ್

ರಾಜ್ಯ

ಡಿಕೆ ಶಿವಕುಮಾರ್ ಮಾಡಿದ್ದು ಅಪರಾಧ, ಆಧಾಯ ಜಾಸ್ತಿ ಆಗಿರುವುದು ಗಮನಿಸಿ ಸಿಬಿಐಗೆ ನೀಡಿದ್ದೇವು, ಸಿಬಿಐ 70% ತನಿಖೆ ಮುಗಿಸಿದೆ. ಸುಪ್ರೀಂ ಕೋರ್ಟ್ ಕೂಡ ಹೈ ಕೋರ್ಟ್ ನಲ್ಲಿ ಮುಗಿಸಿಕೊಳ್ಳಿ ಎಂದು ಹೇಳಿದೆ ಎಂದು ವಿರೋಧ ಪಕ್ಷದ ನಾಯಕ ಆರ್ . ಆಶೋಕ್ ಹೇಳಿದರು. ಅವರು ಚಿತ್ರದುರ್ಗದಲ್ಲಿ ಮಾಧ್ಯಮಳೊಂದಿಗೆ ಮಾತಾಡಿದರು. ಹೈಕೋರ್ಟ್ 3 ತಿಂಗಳೊಳಗೆ ಚಾರ್ಜ್ ಶೀಟ್ ಹಾಕಲು ತಿಳಿಸಿತ್ತು.ಡಿಕೆಶಿ ಪರ ವಕೀಲರು ಕೇಸ್ ಮುಂದೂಡಿದ್ದಾರೆ. ಇನ್ನು ಅಕ್ರಮವಾಗಿ ಡಿಕೆಶಿ ರಕ್ಷಣೆಗಾಗಿ ವಿಶೇಷ ಕ್ಯಾಬಿನೆಟ್ ಕರೆದಿದ್ದಾರೆ. ಅಭಿವೃದ್ದಿ ಯೋಜನೆಗಳ ಒಪ್ಪಿಗೆಗೆ ಕ್ಯಾಬಿನೆಟ್ ಕರೆಯುತ್ತಾರೆ. ಆದರೆ ಇದನ್ನು ಮುಚ್ಚಿಟ್ಟುಕೊಂಡು ಕ್ಯಾಬಿನೆಟ್ ಕರೆದಿದ್ದಾರೆ. ಚಾರ್ಜ್ ಶೀಟ್ ಹಾಕಿದ ಬಳಿಕ ನ್ಯಾಯಾಂಗಕ್ಕೆ ಮಣ್ಣೆರೆಚುತ್ತಿದ್ದಾರೆ. ಕೋರ್ಟ್ ನಲ್ಲಿ ಕೇಸ್ ಇರುವಾಗ ಅವರ ಪರ ತೀರ್ಮಾನ ಕೈಗೊಂಡಿದ್ದಾರೆ. ಇದು ಕಾನೂನಿನ ಉಲ್ಲಂಘನೆಯಾಗಿದೆ. ಕೋರ್ಟ್ ಛೀಮಾರಿ ಹಾಕಿದರೆ ಕ್ಯಾಬಿನೆಟ್ ಗೆ ಕಪ್ಪು ಚುಕ್ಕೆಯಾಗುತ್ತದೆ. ಕೇಂದ್ರದ ಒತ್ತಡಕ್ಕೆ ಸಿದ್ದರಾಮಯ್ಯ ಮಣಿದಿದ್ದಾರೆ. ಅಡ್ವೊಕೇಟ್ ಜನರಲ್ ಕೂಡ ಸಿಬಿಐ ತನಿಖೆ ಮಾಡಬೇಕು ಎಂದು ಅಭಿಪ್ರಾಯ ತಿಳಿಸಿದ್ದಾರೆ. ಕಾಂಗ್ರೆಸ್ ನವರು ಮಾಡಿರುವುದು ನ್ಯಾಯಾಂಗದ ಇತಿಹಾಸದಲ್ಲೆ ಒಂದು ಕಪ್ಪು ಚುಕ್ಕೆ,ಇವರಿಗೆ ಇಷ್ಟು ವರ್ಷ ಸ್ಪೀಕರ್ ಅನುಮತಿ ಇಲ್ಲ ಎಂಬ ಜ್ಞಾನ ಇರಲಿಲ್ವಾ? ಕೇಸ್ ವಜಾ ಮಾಡಿ ಎಂದು ಕೋರ್ಟ್ ಗೆ ಹೋಗುವ ಚಾಪೆ ಕೆಳಗೆ ತೂರಲು ಹೋಗಿದ್ದಾರೆ. ಇದು ಸರ್ಕಾರ ನಗೆ ಪಾಟಿಲಿನ ಪರಿಸ್ಥಿತಿಗೆ ಬಂದಿದೆ ಎಂದರು.ಇದರ ಶಿಕ್ಷೆಯನ್ನು ಇವರು ಅನುಭವಿಸುತ್ತಾರೆ. ಇನ್ನು ಆರ್ ಬಿ ತಿಮ್ಮಾಪುರ್ ಬೆಳಗಾವಿ ಮನೆ ಸೋರುತ್ತಿದೆ.ಬೆಳಗಾವಿಯಿಂದ ಅವರು ದುಬೈಗೆ ಹೋಗಿದ್ದಾರೆ.ಮೊದಲು ಅವರನ್ನು ಕರೆದುಕೊಂಡು ಬನ್ನಿ ನಂತರ ನಮ್ಮ ಪಕ್ಷದ ಬಗ್ಗೆ ಮಾತಾಡಲಿ ಎಂದು ವ್ಯಂಗ್ಯವಾಡಿದರು. ಡಿಕೆಶಿ ಸಿಎಂ ಎಂದು ಎಂಎಲ್ ಎ ಗಳು ಅನೌನ್ಸ್ ಮಾಡ್ತಿದ್ದಾರೆ ಮೊದಲು ಅದನ್ನು ತಿಮ್ಮಾಪುರ್ ನೋಡಿಕೊಳ್ಳಲಿ. ನಾನು ವಿಜಯೇಂದ್ರ ಪಕ್ಷ ಕಟ್ಟುವ ಕೆಲಸ ಮಾಡುತ್ತೇವೆ. ನನಗೂ 2 ಕಡೆ ಸ್ಪರ್ಧಿಸಲು ಹೇಳಿದ್ದರು.ಸೋಮಣ್ಣ ಹಿರಿಯರು ಮಾತಾಡ್ತಿದ್ದಾರೆ. ನನಗನಿಸುತ್ತದೆ ಎಲ್ಲವೂ ಸರಿ ಹೋಗುತ್ತದೆ. 2% ಮಾತ್ರ ಸರಿ ಇಲ್ಲ ಅದನ್ನು ಸರಿ ಮಾಡ್ತಿವಿ.ಸಿದ್ದರಾಮಯ್ಯ 135 ಸೀಟ್ ಬಂದ ಮೇಲೆ 3 ದಿನ ದೆಹಲಿಯಲ್ಲಿದ್ದರು. ಡಿಕೆಶಿ ಸಿದ್ದರಾಮಯ್ಯ ಸಿಎಂ ಆದರೆ ಹೊರಗೆ ಹೋಗುವೆ ಎಂದಿದ್ದರು. ಪ್ರಜಾ ಪ್ರಭುತ್ವದಲ್ಲಿ ಇದೆಲ್ಲವೂ ಸಾಮಾನ್ಯ.ರಾಜ್ಯದಲ್ಲಿ ಬರ ಇದ್ದರೂ ಮಿನಿಸ್ಟರ್ ಎಂ ಎಲ್ ಎ ಗಳು ತೆಲಂಗಾಣದಲ್ಲಿದ್ದಾರೆ. ಜಮೀರ್ ವಿರುದ್ಧ ಅಧಿವೇಶನದಲ್ಲಿ ಹೋರಾಡ್ತಿವಿ ಎಂದು ಆಶೋಕ್ ಹೇಳಿದರು.

 

 

 

Leave a Reply

Your email address will not be published. Required fields are marked *