ವಿದ್ಯಾರ್ಥಿನಿಯರ ಹೇಳಿಕೆಗೆ ಬಾಲ‌ ಮಂದಿರಕ್ಕೆ ಆಗಮಿಸಿದ ತನಿಖಾ ತಂಡ

ರಾಜ್ಯ

ಚಿತ್ರದುರ್ಗದ ಮುರುಘಾ ಶರಣರ ಲೈಂಗಿಕ‌ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಇಬ್ಬರು ವಿದ್ಯಾರ್ಥಿ ಗಳನ್ನು ಈಗಾಗಲೇ ಸಿಡಬ್ಲಿಯೂಸಿ ವಶಕ್ಕೆ ನೀಡಲಾಗಿದ್ದು, ವಿದ್ಯಾರ್ಥಿಗಳನ್ನು ಚಿತ್ರದುರ್ಗದ ಬಾಲ‌ ಮಂದಿರದಲ್ಲಿ ಪೋಲಿಸ್ ಭದ್ರತೆಯಲ್ಲಿ‌ ಇರಿಸಲಾಗಿದೆ. ಅವರನ್ನು ಒಡನಾಡಿ ಸಂಸ್ಥೆಯ ಇಬ್ಬರು ಪ್ರತಿನಿಧಿಗಳ ಜೊತೆ ಬಾಲಕಿಯರು ಆಗಮಿಸಿದ್ದಾರೆ. ಅವರ ಹೇಳಿಕೆ ಪಡೆದು ನಂತರ ನ್ಯಾಯಾಧೀಶರ ಮುಂದೆ ಹೇಳಿಕೆಗೆ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುತ್ತದೆ.

 

 

 

ನಂತರ ಜಿಲ್ಲಾಸ್ಪತ್ರೆಯಲ್ಲಿ‌ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ, ಮುರುಘಾ ಶರಣರಿಗೆ ಇಂದು ವಾರೆಂಟ್ ಜಾರಿಯಾಗುವ ಸಾಧ್ಯತೆ ಇದ್ದು, ಇವದೆಲ್ಲವೂ ಬಾರಿ ಕೂತೂಹಲವನ್ನು ಕೆರಳಿಸಿದ್ದು ಇದೀಗ ವರ್ಗಾವಣೆಗೊಂಡಿರುವ ಪ್ರಕರಣದ ತನಿಖೆಗಾಗಿ ಚಿತ್ರದುರ್ಗ ಡಿವೈಎಸ್ಪಿ ಪೊಲೀಸ್ ನೇತೃತ್ವದ ತನಿಖಾ ತಂಡ ವಿಚಾರಣೆಗಾಗಿ ಬಾಲ ಮಂದಿರಕ್ಕೆ ಆಗಮಿಸಿದೆ.ತನಿಖೆಯು ಮುಂದುವರೆದಿದೆ. ತನಿಖಾ ತಂಡದಲ್ಲಿ ಡಿವೈಎಸ್ಪಿ ಅನಿಲ್ ಕುಮಾರ್ ತನಿಖಾಧಿಕಾರಿಯಾಗಿದ್ದು, ನಗರಠಾಣೆ ಪಿಎಸ್ ಐ ದೀಪಾ,  ಸಹಾಯಕ ಜಾಕೀರ್  ಇನ್ನಿತರೆಯವರು ಇದ್ದಾರೆ.

Leave a Reply

Your email address will not be published. Required fields are marked *