ರಾಜಕೀಯ ಮಾಡಿ ಅರ್ಹ ಬಡವರಿಗೆ ಮನೆ ಕೈ ತಪ್ಪಬಾರದು

ಜಿಲ್ಲಾ ಸುದ್ದಿ

 ನನ್ನ ಕ್ಷೇತ್ರದ ಎಲ್ಲಾ 22 ಗ್ರಾಮ ಪಂಚಾಯತಿಗಳಲ್ಲಿ  ಮನೆಯ  ಗ್ರಾಮಸಭೆಯನ್ನು ಸ್ವತಃ ನಾನೇ ಮಾಡುವ ಮೂಲಕ ಫಲಾನುಭವಿಗಳ ಆಯ್ಕೆ ಮಾಡಿದ್ದೇನೆ ಎಂದು ಶಾಸಕ‌ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ತಾಲೂಕಿನ ಸೊಂಡೇಕೊಳ, ಅನ್ನೇಹಾಳ್, ಗೊಡಬನಾಳ್  ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಸವ ಮತ್ತು ಅಂಬೇಡ್ಕರ್ ವಸತಿ ಯೋಜನೆಯಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮತ್ತು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ‌ ಮಾತನಾಡಿದರು.
ನನ್ನ ವಿಧಾನ ಸಭಾ ಕ್ಷೇತ್ರದ 22 ಗ್ರಾಮ ಪಂಚಾಯತಿಗಳಿಗೆ ನಾನೇ ಖುದ್ದು ಆದ್ಯತೆ ಆಧಾರದ ಮೇಲೆ ಎಲ್ಲಾ ಜಾತಿಯ  ಬಡವರಿಗೆ ಮನೆಯನ್ನು ಆಯ್ಕೆ ಮಾಡಿದ್ದೇನೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ  ರಾಜಕೀಯ ಮಾಡಿ ಅರ್ಹ ಬಡವರಿಗೆ ಮನೆ ಕೈ ತಪ್ಪಬಾರದು ಎಂದು ನಾನೇ ಹಂಚಿಕೆ ಮಾಡಿದ್ದು ಇಂದಿಗೆ ಎಲ್ಲಾ ಗ್ರಾಮ ಸಭೆಗಳು‌ ಮುಕ್ತಾಯವಾಗಿವೆ ಎಂದರು.
ನಾನು ಆಯ್ಕೆ ಮಾಡಿದ ಎಲ್ಲಾರೂ ಕಾಲಮಿತಿ ಒಳಗೆ ಮನೆಗಳನ್ನು ನಿರ್ಮಿಸಿಕೊಳ್ಳುವ ಜೊತೆಗೆ ಪಿಡಿಓ ಕಡೆ ಎಲ್ಲಾ ದಾಖಲಾತಿ ಕೊಟ್ಟು ಪರೀಕ್ಷಿಸಿಕೊಳ್ಳಿ ಎಂದರು. ಯಾವುದೇ ಗ್ರಾಮ ಪಂಚಾಯಿತಿಗೆ  ಮನೆಗಳ ಕಡಿಮೆ ಬಂದರೆ ಉಳಿಕೆ ಇರುವ ಕಡೆಯಿಂದ ವರ್ಗಾವಣೆ ಮಾಡಿ ಕೊಡುತ್ತೇನೆ ಎಂದು ತಿಳಿಸಿದರು.
ಸೊಂಡೇಕೊಳ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ- 50, ಪರಿಶಿಷ್ಟ ಪಂಗಡ-15, ಸಾಮಾನ್ಯ-30, ಅನ್ನೇಹಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ-60   ,ಪರಿಶಿಷ್ಟ ಪಂಗಡ-50, ಸಾಮಾನ್ಯ-50, ಗೊಡಬನಾಳ್ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ-45  ,ಪರಿಶಿಷ್ಟ ಪಂಗಡ-20  ,ಸಾಮಾನ್ಯ- 30 ಮನೆಗಳನ್ನು ನೀಡದ್ದೇನೆ.
ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ
ತಾಲೂಕಿನ ತಾಲೂಕಿನ ಗಂಜಿಗಟ್ಟೆ ಗ್ರಾಮದಲ್ಲಿ 25 ಲಕ್ಷ, ಉಪ್ಪನಾಯಕನಹಳ್ಳಿ 60 ಲಕ್ಷ, ಗೊಡಬನಾಳ್ 65 ಲಕ್ಷ, ಅನ್ನೇಹಾಳ್ 40 ಲಕ್ಷ, ಮಹದೇವನಕಟ್ಟೆ-40 ಲಕ್ಷ  ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಿದ್ದು  ಒಂದು ತಿಂಗಳಲ್ಲಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸಲು ತಿಳಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ  ತಾಲೂಕು ಪಂಚಾಯತ ಇಓ ಹನುಮಂತಪ್ಪ,ತಾಲೂಕು ಪಂಚಾಯತ  ಎಡಿ ಧನಂಜಯ್ , ಸೊಂಡೇಕೊಳ ಗ್ರಾಮ ಪಂಚಾಯತಿ ಅಧ್ಯಕ್ಷ ಭಾರತಿ, ಅನ್ನೇಹಾಳ್ ಗ್ರಾ.ಪಂ.ಅಧ್ಯಕ್ಷ ನಿರಂಜನ್, ಗೊಡಬನಾಳ್  ಗ್ರಾ.ಪಂ.ಅಧ್ಯಕ್ಷ ಎಂ.ಜಿ.ಮಾಲಾ ಮತ್ತು ಗ್ರಾಮ ಪಂಚಾಯತಿ ಸದಸ್ತರು ಮತ್ತು ಮುಖಂಡರು , ಫಲಾನುಭವಿಗಳು ಇದ್ದರು.

 

 

 

Leave a Reply

Your email address will not be published. Required fields are marked *