ಹೆಲ್ಮೆಟ್ ಇಲ್ಲದೆ ಬಂದ್ರೆ ದಂಡ ಬಿಳೋದು ಗ್ಯಾರಂಟಿ

ಜಿಲ್ಲಾ ಸುದ್ದಿ

ಚಿತ್ರದುರ್ಗ ಪೋಲಿಸ್ ಇಲಾಖೆಯೂ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಇನ್ನು ಮುಂದೆ ಹೆಲ್ಮೆಟ್ ಧರಿಸದೆ ಹೊರಗೆ ಬಂದರೆ ದಂಡ ಬೀಳುವುದು ಗ್ಯಾರಂಟಿ
ರಸ್ತೆ ಸಂಚಾರವು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಾಗೂ ದ್ವಿ ಚಕ್ರ ವಾಹನಗಳ ಅಪಘಾತ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯೂ ಹೆಲ್ಮೆಟ್ ಧರಿಸುವುದನ್ನು‌ ಕಡ್ಡಾಯಗೊಳಿಸಿ ಆದೇಶ ಮಾಡಿದೆ.

 

 

 

ನಗರದ ಹೊರ ವಲಯದಲ್ಲಿ ಅವೈಜ್ಞಾನಿಕ ರಸ್ತೆ ತಿರುವುಗಳಿದ್ದು, ಅಪಘಾತಗಳು ಹೆಚ್ಚಾಗುತ್ತಿವೆ.ಈ ಹಿ‌ನ್ನೆಲೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಮೂರು ದಿನಗಳ ಕಾಲ ಚಿತ್ರದುರ್ಗದ ಸಂಚಾರ ವಿಭಾಗದ ಪೋಲಿಸರು ಸಾರ್ವಜನಿಕರಿಗೆ ಹಾಗು ದ್ವಿ ಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಹಾಕುವಂತೆ ಹಾಗೂ ಕಡ್ಡಾಯ ಮಾಡಿರುವುದರ ಬಗ್ಗೆ ಅರಿವು ಮೂಡಿಸುತ್ತಾ ಬಂದಿದ್ದರು. ಇಂದಿನಿಂದ ದಂಡ ವಿಧಿಸುತ್ತಿದ್ದಾರೆ. ನೀವೆನಾದ್ರೂ ಹೆಲ್ಮೆಟ್ ಧರಿಸದೆ ಹೊರಗೆ ದ್ವಿ ಚಕ್ರ ವಾಹನಗಳನ್ನು ತೆಗೆದುಕೊಂಡು ಬಂದರೆ ಸಂಚಾರಿ ಪೋಲಿಸರು ಕಾದು ದಂಡವನ್ನು ವಿಧಿಸುತ್ತಾರೆ.

Leave a Reply

Your email address will not be published. Required fields are marked *