ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ದ ಹೊತ್ತಿ‌ ಉರಿದ ಮಾದಿಗ ಸಮುದಾಯದ ಕಿಚ್ಚು

ರಾಜ್ಯ

ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ‌ ಅವರು ಕಳೆದೆರಡು ದಿನಗಳ ಹಿಂದೆ ಬಿಜೆಪಿ ಸೋಲಲು ಎ.‌ನಾರಾಯಣಸ್ವಾಮಿ ಮತ್ತು ಗೋವಿಂದ ಕಾರಜೋಳ ಕಾರಣ ಎಂದು ಬಹಿರಂಗ ಸಭೆಯಲ್ಲಿ ಆರೋಪ‌ ಮಾಡಿದ್ದರು. ಇಂತಹ ಮಾತುಗಳು ಮಾದಿಗ ಸಮುದಾಯದಲ್ಲಿ ಕಿಚ್ಚನ್ನು ಹೊತ್ತಿಸಿತ್ತು. ಇದರ ವಿರುದ್ಧ ಮಾದಿಗ ಸಮುದಾಯದ ಹಲವು ಸಂಘಟನೆಗಳು ಒಟ್ಟಾಗಿ ಸೇರಿ ಬೃಹತ್ ಪ್ರತಿಭಟನೆಯನ್ನು ನಡೆಸಿತು.
ಪ್ರತಿಭಟನೆಯಲ್ಲಿ ಮಾತನಾಡಿದ, ದಲಿತ ಮುಖಂಡ ಕೆಂಗುಂಟೆ ಜಯಣ್ಣ, ಮಾದಿಗರ ಮಧ್ಯೆ ಯಾವುದೇ ಒಡಕು‌ ಇಲ್ಲದಂಗೆ ಒಂದು‌ಮಾಡಿದ ಕೀರ್ತೀ‌ ನಿಮಗೆ ಸೇರುತ್ತದೆ ಚಂದ್ರಪ್ಪನವರೇ, ಇನ್ನು‌ ಮೇಲೆ ನಿಮ್ಮ ಯಾವುದೇ ಸಭೆಗಳಲ್ಲಿ‌ನೀವು‌ ಮಾತನಾಡುವ ಮಾತುಗಳ‌ ಮೇಲೆ ನಮ್ಮ‌ ನಿಗಾ ಇರುತ್ತದೆ. ನೀವು ಮಾತನಾಡುವ ಸಭೆಯಲ್ಲಿ‌ ಅಲ್ಲಿಯೇ ಬಂದು‌ ಘೇರಾವ್ ಮಾಡುತ್ತೇವೆ ನೆನಪಿಡಬೇಕು. ನಾವು ಸ್ವಾಭಿಮಾನಿ‌ ಸಮುದಾಯ ವಿನಾ‌ಕಾರಣ ನಮಗೆ ತೊಂದರೆ ಕೊಟ್ಟಿದ್ದೇ ಆದರೆ ನಾವು ಬಿಡುವುದಿಲ್ಲ, ಭವಿಷ್ಯದಲ್ಲಿ ಮಗನನ್ನು ಎಂಪಿ‌ಮಾಡುವ ಆಸೆಯನ್ನಿಟ್ಟುಕೊಂಡಿದ್ದೀಯಾ, ಅವನಿಗು ಅಂಹಕಾರವಿದೆ.ಈ ಸಮುದಾಯ ನಿಮಗೆ ದೊಡ್ಡ ಪಾಠವನ್ನು‌ ಕಲಿಸುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ನಿರ್ಣಾಯಕ‌ ಸಮುದಾಯವಾಗಿದೆ, ನಾಲ್ಕು‌ಲಕ್ಷ ಜನರಿರುವ ಸಮುದಾಯ, ಇಂತಹ ಸಮುದಾಯದ ಬಗ್ಗೆ ತುಚ್ಛವಾಗಿ‌ಮಾತನಾಡುತ್ತಿಯಾ ಎಂದು‌ ಆಕ್ರೋಶ ವ್ಯಕ್ತಪಡಿಸಿದರು. ಒಳ ಮೀಸಲಾತಿ ಬಗ್ಗೆ ಮಾತನಾಡೋ ಯಾವುದೇ ಯೋಗ್ಯತೆಯೂ ಇಲ್ಲ, ಯಾವುದೇ ಪಕ್ಷದ ‍ ಮಾದಿಗ ಸಮುದಾಯದ ನಾಯಕರ ಬಗ್ಗೆ ಮಾತನಾಡಬಾರದು, ಇಂದನಿಂದ ನಿಮ್ಮನ್ನು ಘೇರಾವ್ ಮಾಡುವ ಕ್ಷಣ ಗಣನೆ ಆರಂಭವಾಗಿದೆ. ಹೊಳಲ್ಕೆರೆ ತಾಲೂಕಿನಲ್ಲಿ ಮಾದಿಗ ಸಮುದಾಯವನ್ನು‌ ಬಲಿಷ್ಠವಾಗಿ‌ ಕಟ್ಟುವುದಕ್ಕೆ ನೀನೇ ಕಾರಣರಾಗಿದ್ದೀರಾ, ಹೊಳಲ್ಕೆರೆ ತಾಲೂಕಿನಲ್ಲಿ‌ನಿಮ್ಮ ಸಾಧನೆ ಭ್ರಷ್ಠಾಚಾರ ಅಷ್ಟೆ, ಇದರಿಂದ ಕೋಮುಗಳ ಮಧ್ಯೆ ಧ್ವೇಷ ಭಾವನೆ ಬಿತ್ತಿರುವುದು ‌ಬಿಟ್ಟರೆ ಬೇರೆ ಏನೂ‌ ಇಲ್ಲ, ಮರಳು ದಂಧೆ, ಜೂಜಾಟ ಆಡಿಸಿರೋದು‌ ನಿಮ್ಮ ಸಾಧನೆ, ಅಕ್ರಮ‌ ಗಣಿಗಾರಿಕೆ ಮಾಡಿಸಿದ್ದು, ಇವುಗಳನ್ನು ಹತೋಟಿಗೆ ತರುವ ಕೆಲಸವನ್ನು ನಾವು ಮಾಡುತ್ತೇವೆ. ಇನ್ನು‌ ಮುಂದೆ ಆಡುವ ಪ್ರತೀ‌ ಮಾತು ಎಚ್ಚರಿಕೆಯಿಂದಿರಬೇಕು. ಈ ಸಮುದಾಯ ನಿಮ್ಮನ್ನು ದಿಕ್ಕರಿಸುತ್ತದೆ ಎಂದು‌ ಎಚ್ಚರಿಕೆ‌ ನೀಡಿದರು. ಪ್ರತಿಭಟನೆಯಲ್ಲಿ‌ವಿವಿಧ ಸಂಘಟನೆಗಳ‌ಮುಖಂಡರು ಪಾಲ್ಗೊಡಿದ್ದರು.

 

 

 

Leave a Reply

Your email address will not be published. Required fields are marked *