ಯುವಕರು ಸಮಾಜಕ್ಕೆ ತಮ್ಮನ್ನು ಅರ್ಪಿಸಿಕೊಳ್ಳಬೇಕು

ಜಿಲ್ಲಾ ಸುದ್ದಿ

ಎಲ್ಲಾ ರಂಗಗಳಲ್ಲಿ ಬದಲಾವಣೆ ಆಗಬೇಕಾದರೆ ಇಂದಿನ ಯುವಕರು ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ಸಮಾಜಕ್ಕೋಸ್ಕರ ಸಮರ್ಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಅವರು ಚಳ್ಳಕೆರೆ ನಗರದಲ್ಲಿ ರಸ್ತೆ ಸುರಕ್ಷತಾ ಸಪ್ತಾಹ ಹಾಗೂ ಜಾಗ್ರತೆ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಾವು ಸಮಾಜಕ್ಕೋಸ್ಕರ ಬದುಕಿದರೆ ನಮ್ಮ ಕಾಲದ ನಂತರವೂ ಸಮಾಜ ನಮ್ಮನ್ನು ಜೀವಂತವಾಗಿಡುತ್ತದೆ ನಮ್ಮ ಬದುಕನ್ನು ನಮಗೋಸ್ಕರ ಸೀಮಿತಗೊಳಿಸಿದರೆ ಸಮಾಜದ ನಮ್ಮನ್ನು ಶಾಶ್ವತವಾಗಿ ಮರೆಯುತ್ತದೆ, ಇದಕ್ಕೆ ಹಲವಾರು ಮಹಾನಿಯರ ನಿದರ್ಶನಗಳಿವೆ ಎಂದು ಹೇಳಿದರು.
ಚಳ್ಳಕೆರೆ ತಾಲೂಕಿನಲ್ಲಿ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ಆಯೋಜಿಸಿರುವಂತಹ ಈ ಕಾರ್ಯಕ್ರಮ ಸಮಾಜಕ್ಕೆ ಅತ್ಯಂತ ಉಪಯುಕ್ತವಾಗಿದೆ ಇದರ ಮುಖಾಂತರ ದಿನ ಪ್ರತಿ ನಡೆಯುತ್ತಿರುವ ಅಪಘಾತಗಳನ್ನು ನಿಯಂತ್ರಿಸಬಹುದು, ಯುವಕರಿಗೆ ಹೆಚ್ಚು ಹೆಚ್ಚು ಜಾಗೃತೆ ಮೂಡಿಸಬಹುದು ಹಾಗೆಯೇ ಎಲ್ಲಾ ಯುವಕರು ಕೂಡ ಒಂದು ಸಂಕಲ್ಪ ಮಾಡಿ ಜೀವನದಲ್ಲಿ ಸಾರ್ಥಕತೆಯನ್ನು ಕಂಡುಕೊಳ್ಳಬೇಕು.ಈ ಸಂಕಲ್ಪದ ಮುಖಾಂತರ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಅಪಘಾತಗಳು ಸಂಭವಿಸದ ರೀತಿಯಲ್ಲಿ ನಾವು ನಮ್ಮ ಕುಟುಂಬ ಮತ್ತು ನಮ್ಮ ನೆರೆಹೊರೆಯವರಿಗೂ ಕೂಡ ಜಾಗೃತಿಯನ್ನು ಮೂಡಿಸುತ್ತೇವೆಂಬ ದೀಕ್ಷೆಯನ್ನು ಪಡೆಯೋಣ ಎಂದರು. ಸಮಾರಂಭದಲ್ಲಿ ಉಪಸ್ಥಿತರಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ ದಿನಂಪ್ರತಿ ಅದೇಷ್ಟು ಅಪಘಾತಗಳು ಸಂಭವಿಸುತ್ತವೆ ಇದಕ್ಕೆ ಜಾಗ್ರತೆ ಇಲ್ಲದೆ ಇರುವುದು ಕಾರಣವಾಗಿದೆ ಯುವಕರು ಹೆಚ್ಚು ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನ ಆಯೋಜಿಸುವ ಮುಖಾಂತರ ಸಮಾಜಸೇವೆಯನ್ನು ಮೆರೆಯಬೇಕು ಎಂದು ಹೇಳಿದರು.

 

 

 

ಇದೇ ಸಂದರ್ಭದಲ್ಲಿ ಸಂಜೀವಿನಿ ಟ್ರಸ್ಟ್ ನ ರಾಜ್ಯ ಪ್ರದಾನ ಕಾರ್ಯದರ್ಶಿ ಸೌಮ್ಯ ಮಂಜುನಾಥ್ ಜಿಲ್ಲಾಧ್ಯಕ್ಷರ ರಂಗಸ್ವಾಮಿ ಟ್ರಸ್ಟ್ ನ ಎಲ್ಲ ಪದಾಧಿಕಾರಿಗಳು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಟಿಜೆ ತಿಪ್ಪೇಸ್ವಾಮಿ ತಾಲೂಕ್ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು

 

Leave a Reply

Your email address will not be published. Required fields are marked *