ಯುವಕರು ಸ್ವ ಪರಿಶ್ರಮದಿಂದ ಆಯಾಕಟ್ಟಿನ ಸ್ಥಾನಗಳನ್ನು ಅಲಂಕರಿಸಿ

ಜಿಲ್ಲಾ ಸುದ್ದಿ

ಶೋಷಿತ ವರ್ಗದ ಯುವಕರು ಮೀಸಲಾತಿಗೆ ಊರುಗೋಲಾಗಬಾರದು ಮೀಸಲಾತಿ ಹೊರತಾಗಿಯೂ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ ಅಧ್ಯಯನ ಮಾಡಿ ಗುರಿ ಸಾಧಿಸಬೇಕು ಇದರ ಮುಖಾಂತರ ಸರ್ಕಾರದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಬೇಕೆಂದು ತಾಶಿಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಚಳ್ಳಕೆರೆ ಸಮೀಪದ ರಂಗಮ್ಮನಹಳ್ಳಿ ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವವನ್ನು ಉದ್ಘಾಟನೆ ಮಾಡಿ ಮಾತನಾಡಿ ರಾಮಾಯಣ ಮಹಾ ಕಾವ್ಯವನ್ನು ಬರೆದಂತ ಮಹಾಕವಿ ವಾಲ್ಮೀಕಿಯು ನಾಯಕ ಜನಾಂಗಕ್ಕೆ ಆದರ್ಶ ಪುರುಷ ರಾಮಾಯಣ ಮಹಾ ಕಾವ್ಯದಲ್ಲಿ ಬರುವಂತಹ ಶ್ರೀರಾಮಚಂದ್ರ ಮೂರ್ತಿ ದರ್ಶನಿಕ ಪುರುಷ ಏಕ ಪತ್ನಿ ರಥಸ್ತ ಇಡೀ ಮನುಕುಲಕ್ಕೆ ರಾಮಾಯಣ ಮಹಾಕಾವ್ಯ ದಾರಿ ದೀಪವಾಗಿದೆ ಹಿಂಸೆ ಅಹಿಂಸೆ ಸತ್ಯ ಅಸತ್ಯ ಮತ್ತು ಧರ್ಮ ಅಧರ್ಮದ ಉರುಳನ್ನು ಈ ಮಹಾಕಾವ್ಯದಲ್ಲಿ ಸಾರಲಾಗಿದೆ ಈ ಮಹಾಕಾವ್ಯದಲ್ಲಿ ಬರುವಂತಹ ಪ್ರತಿಯೊಂದು ವ್ಯಕ್ತಿಗಳು ಜೀವನಕ್ಕೆ ಉತ್ಕರ್ಷವನ್ನು ನೀಡುವಂತಹ ಪುರುಷರಾಗಿದ್ದಾರೆ ಈ ರಾಮಾಯಣ ಮಹಾ ಕಾವ್ಯದ ಆದರ್ಶಗಳನ್ನ ಉಪದೇಶಗಳನ್ನು ತತ್ವಗಳನ್ನು ಜೀವಂತವಾಗಿಡುವುದು ಮತ್ತು ಆಚರಿಸುವುದು ಈ ಜನಾಂಗದ ಎಲ್ಲರ ಕರ್ತವ್ಯವಾಗಿದೆ ಅಹಿಂಸೆ ಸತ್ಯ ಮತ್ತು ಧರ್ಮದ ದಾರಿಯಲ್ಲಿ ಈ ಜನಾಂಗದ ಎಲ್ಲರೂ ನಡೆಯಬೇಕು ಪ್ರತಿಯೊಂದು ಮನೆಯಲ್ಲಿನ ಮಕ್ಕಳನ್ನು ಉನ್ನತ ಮತ್ತು ಆಧ್ಯಾತ್ಮಿಕ ಶಿಕ್ಷಣ ದೊರೆಯುವ ನಿಟ್ಟಿನಲ್ಲಿ ನೋಡಿಕೊಳ್ಳಬೇಕು ಸಮಾಜದಲ್ಲಿ ಸಾಮರಸ್ಯ ಮತ್ತು ಸಹ ಬಾಳ್ವಿಗೆ ಪೂರಕವಾದಂತ ನಡವಳಿಕೆಯಂದಿರಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು ಇದೇ ಸಂದರ್ಭದಲ್ಲಿ ಸಮಾಜದ ಮುಖ್ಯಸ್ಥರಾದಂತಹ ಶಾಂತಣ್ಣ ಹನುಮಂತರಾಯಪ್ಪ ಸುದರ್ಶನ್ ರೆಡ್ಡಿ ಹನುಮಂತು ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *