Chitradurga matadhisharu samajamukhiyagi kelasa madbekuu

ದಂಡಾಧಿಕಾರಿ‌ ಗ್ರಾಮದಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು‌ಮುಂದೆ ಬಾರದ ಜನರು ಅದು ಯಾವ ಗ್ರಾಮ

ಜಿಲ್ಲಾ ಸುದ್ದಿ ರಾಜಕೀಯ

ಚಿತ್ರದುರ್ಗ,: ಒಬ್ಬ ದಂಡಾಧಿಕಾರಿಗಳ ಸ್ವಂತ ಗ್ರಾಮದಲ್ಲಿ ವ್ಯಾಕ್ಸಿನ್ ಹಾಗೂ ಕೋವಿಡ್ ಟೆಸ್ಟ್ ಮಾಡಿಸಲು ಬರುವುದಿಲ್ಲ ಎಂದು ಜನರು ಹೇಳಿದರೆ ನಾವಿನ್ನು ಸರಿಯಾಗಿ ಜಾಗೃತಿ ಮೂಡಿಸಿಲ್ಲ ಎಂದು ಸಂಸದ ನಾರಾಯಣಸ್ವಾಮಿ ಜಿಲ್ಲಾಡಳಿತದ ಮೇಲೆ ಅಸಮಾಧಾನ ವ್ಯಕ್ತಪಡಿಸಿದರು.

Chitradurga one of da Tasildar own college people has not come forward to vaccine

 

 

 

 

ಅವರು ಚಿತ್ರದುರ್ಗ ದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.

ಒಂದು ವಾರದಿಂದ ನಾನು ಚಳ್ಳಕೆರೆ ಹಾಗೂ ಮೊಳಕಾಲ್ಮೂರು ಭಾಗದಲ್ಲಿ ಸುತ್ತುತ್ತಿದ್ದೇನೆ. ಆದರೆ ಕೆಲವು ಕಡೆಗಳಲ್ಲಿ‌ ಜನರು ನಾವು ಸತ್ತರೂ ಪರವಾಗಿಲ್ಲ ನಾವು ವ್ಯಾಕ್ಸಿನ್ ಹಾಕಿಸಿಕೊಳ್ಳೊಲ್ಲ, ಟೆಸ್ಟ್ ಮಾಡಿಸೊಲ್ಲ ಎಂದು‌ಹೇಳುತ್ತಿದ್ದಾರೆ. ಇದರಿಂದ ನಮಗೆ ಅರ್ಥವಾಗುತ್ತದೆ. ಸ್ಥಳೀಯ ಸರ್ಕಾರಗಳಾಗಲಿ ಸರ್ಕಾರವಾಗಲಿ ಜನರಲ್ಲಿ, ಕಾಲೋನಿಗಳಲ್ಲಿ ವ್ಯಾಕ್ಸಿನ್ ಹಾಗೂ ಟೆಸ್ಟ್ ಬಗ್ಗೆ ಜಾಗೃತಿ‌ ಮೂಢಿಸುವ ಕೆಲಸ ಸರಿಯಾಗಿಲ್ಲ ಮಾಡಿಲ್ಲ ಎಂದು. ಚಳ್ಳಕೆರೆ ದಂಡಾಧಿಕಾರಿಯ ಸ್ವಂತ ಗ್ರಾಮವಾಗಿರುವ. ಹಿರೇಹಳ್ಳಿ ಗ್ರಾಮದ ದಲಿತ ಕಾಲೋನಿಗಳಲ್ಲಿ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹಾಗೂ ಟೆಸ್ಟ್ ಮಾಡಿಸಲು ಮುಂದೆ ಬರುತ್ತಿಲ್ಲ. ಇಲ್ಲಿ ಪ್ರಜ್ಞಾವಂತರು ಮಾತ್ರ ಮುಂದೆ ಬರುತ್ತಿದ್ದಾರೆ. ಇಲ್ಲಿ‌ ನಾವು ತಪ್ಪು‌ಮಾಡುತ್ತಿದ್ದೇವೆ ಎಂದು‌ ಅನಿಸುತ್ತಿದೆ. ಯಾರೂ ವ್ಯಾಕ್ಸಿನ್ ಹಾಗೂ ಕೋವಿಡ್ ಟೆಸ್ಟ್ ಗೆ ವಿರೋಧಿಸುತ್ತಿದ್ದಾರೆ ಅಂತವರ ಮನೆಗಳ ಬಾಗಿಲಿಗರ ಹೋಗಿ ಅವರ ಮನ ಪರಿವರ್ತನೆ ಮಾಡಬೇಕಾಗಿದೆ. ಅವರಿಗೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಹಾಗೂ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಹೇಳಬೇಕಾಗಿದೆ. ಈಗ ಹೇಗೋ ಮುಗಿಯುತ್ತದೆ ಆದರೆ ಮೂರನೇ ಮತ್ತು ನಾಲ್ಕನೆ ಅಲೆಗಳು ಬಂದಾಗ ಜನರು ನಿಜವಾಗಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *