ಅಕ್ರಮ ಒತ್ತುವರಿ ಮಾಡಿಕೊಂಡರೆ ‌ಬಿಡುವುದಿಲ್ಲ

ಜಿಲ್ಲಾ ಸುದ್ದಿ

ಯಾವುದೇ ಕಾರಣಕ್ಕೂ ಸರ್ಕಾರಿ ಭೂಮಿಯನ್ನ ಒತ್ತುವರಿಗೆ ಅವಕಾಶ ನೀಡುವುದಿಲ್ಲ ಅಕ್ರಮ ಮಾಡಿಕೊಂಡರೆ ಬಿಡುವುದಿಲ್ಲ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ಹೊರವಲಯದ ಅಭಿಷೇಕ್ ನಗರಕ್ಕೆ ತೆರಳುವ ರಸ್ತೆಯ ಪಕ್ಕದ ಸರ್ಕಾರಿ 102 ಸರ್ವೆ ನಂಬರ್ ನ 17 ಎಕರೆ ಸರ್ಕಾರಿ ಜಮೀನಿದ್ದು ಇಲ್ಲಿ ಅಭಿಷೇಕ್ ಎನ್ನುವ ಹೊಸ ಬಡಾವಣೆಯನ್ನು ನಿರ್ಮಾಣ ಮಾಡಲಾಗಿದ್ದು ಅಭಿಷೇಕ ನಗರದಲ್ಲಿ ವಾಸ ಮಾಡುವಂತಹ ನಿವಾಸಿಗಳಿಗೆ ಬಡಾವಣೆಗೆ ತೆರಳುವ ಬೇಕಾದರೆ ಸುತ್ತಿ ಬಳಸಿ ಹೋಗುವುದರಿಂದ ಮಳೆ ಬಂದಾಗ ಹಳ್ಳ ಬರುವುದರಿಂದ ಸಂಚರಿಸುವಂತಹ ನಿವಾಸಿಗಳಿಗೆ ಶಾಲೆ ಮಕ್ಕಳಿಗೆ ಸಮಸ್ಯೆ ಉಂಟಾಗುತ್ತಿತ್ತು ಇಲ್ಲಿನ ನಿವಾಸಿಗಳು ಮನವಿ ನೀಡಿದರು ಹಾಗೂ ಮನವಿ ಮೇರೆಗೆ ಇಂದು ಕಂದಾಯ ಅಧಿಕಾರಿಗಳು ಹಾಗೂ ನಗರಸಭೆ ಅಧಿಕಾರಿಗಳೊಳಗೊಂಡು ಇಲ್ಲಿಗೆ ಬಂದು ಪರಿಶೀಲನೆ ನಡೆಸಿ ಸರ್ಕಾರಿ ಜಮೀನು ಸ್ವಲ್ಪ ಒತ್ತುವರಿಯಾಗಿದ್ದು ರಸ್ತೆ ನಿರ್ಮಾಣದ ವೇಳೆ ಸರ್ಕಾರಿ ಒತ್ತುವರಿ ಜಾಗವನ್ನು ಬಳಸಿ ರಸ್ತೆ ನಿರ್ಮಾಣ ಮಾಡಲು ಸೂಚನೆ ನೀಡಲಾಗಿದೆ. ಹಾಗೂ ಸರ್ಕಾರಿ ಜಾಗವನ್ನು ಯಾರು ಅಡ್ಡಿಪಡಿಸುವುದಿಲ್ಲ ಯಾರು ಅಡ್ಡಿಪಡಿಸಕೂಡದು ಯಾಕಂದರೆ ಸರ್ಕಾರಿ ಜಾಗವು ಅಕ್ರಮಿಸಿಕೊಂಡರೆ ಮುಂದಿನ ದಿನಗಳಲ್ಲಿ ನಿವಾಸಿಗಳು ಕಷ್ಟ ಅನುಭವಿಸುವಂಥಾಗುತ್ತದೆ. ಸಾರ್ವಜನಿಕರು ಯಾರೇ ಆಗಲಿ ಸರ್ಕಾರಿ ಸ್ವತ್ತುಗಳಾದ ಕೆರೆ ಹಳ್ಳ ಗೋಮಾಳ ಒತ್ತೋರಿ ಮಾಡಕೊಡದು ಹಾಗೇನಾದರೂ ಸರ್ಕಾರಿ ಜಮೀನನ್ನು ಕಬ್ಜಾ ಮಾಡಿಕೊಂಡಿದ್ದರೆ ತಕ್ಷಣವೇ ಬಿಟ್ಟುಬಿಡಿ ಇಲ್ಲವಾದರೆ ಭೂ ಕಂದಾಯ. ಕಾಯ್ದೆ ನಿಯಮ ಕಬ್ಜಾ ಮಾಡಿಕೊಂಡು ಯಾವುದೇ ದಾಖಲಾತಿ ಇಲ್ಲದೆ ನಕಲಿ ದಾಖಲಾತಿಗಳನ್ನು ಸೃಷ್ಟಿ ಮಾಡಿಕೊಂಡು ಜಮೀನು ಹೊಂದಿದ್ದು ನಿಶ್ಚಿತವಾಗಿ ಇಂಥವರ ವಿರುದ್ಧ ಮುಖದೊಮ್ಮೆ ಉಡಲಾಗುವುದು ಎಂದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಮಲ್ಲಿಕಾರ್ಜುನ ನಗರಸಭೆ ಪೌರಹಿತರಾದ
ಚಂದ್ರಯ್ಯ ಮುಖಂಡ ಹೊನ್ನೂರಪ್ಪ ಇಂಜಿನಿಯರ್ ಲೋಕೇಶ್ ಕಸಬ ಆರ್ ಐ ಲಿಂಗೇಗೌಡ ವಿಎ ಪ್ರಕಾಶ್ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ನಗರಸಭೆ ಅಧಿಕಾರಿಗಳು ಈ ಸಂದರ್ಭದಲ್ಲಿ.

 

 

 

Leave a Reply

Your email address will not be published. Required fields are marked *