ಹತ್ತು ಸಾವಿರ ಕಂಠಗಳಿಂದ ಮೊಳಗಿದ ಕೋಟಿ ಕಂಠ ಗಾಯನ

ರಾಜ್ಯ

10000 ವಿದ್ಯಾರ್ಥಿಗಳೊಂದಿಗೆ ಇಂದು ಚಳ್ಳಕೆರೆ ನಗರದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮ ತಹಶೀಲ್ದಾರ್ ಎನ್. ರಘುಮೂರ್ತಿ ಇವರ ನೇತೃತ್ವದಲ್ಲಿ ಅದ್ದೂರಿ ಮತ್ತು ವೈಭವ ಪ್ರೇರಿತವಾಗಿ ನಡೆಯಿತು. ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ವಾಸ್ತವಿಕವಾಗಿ ಮಾತನಾಡಿದ ತಹಶೀಲ್ದಾರ್ ಎನ್ ರಘುಮೂರ್ತಿ ಸರ್ಕಾರದ ಆದೇಶದಂತೆ ಕರ್ನಾಟಕದ ಏಕೀಕರಣಕ್ಕೆ ದುಡಿದಿರುವಂತಹ ಆಲೂರು ವೆಂಕಟರಾಯರು ಒಳಗೊಂಡಂತೆ ಎಲ್ಲಾ ಸಾಹಿತಿಗಳ ನಾಡಿನ ಪರಂಪರೆಯ ಪ್ರತೀಕವಾದಂತ ಬೇಲೂರು ಹಳೇಬೀಡು, ಶ್ರವಣಬೆಳಗೊಳ ಬಾದಾಮಿ ಐಹೊಳೆ ಪಟ್ಟದಕಲ್ಲು ಮುಂತಾದ ಸ್ಥಳದಲ್ಲಿರುವಂತಹ ಶಿಲ್ಪ ಕಲೆಗಳು ರನ್ನ ಪಂಪ ಕುಮಾರವ್ಯಾಸ ಕುವೆಂಪು ಬೇಂದ್ರೆ ಮಾಸ್ತಿ ಮುಂತಾದ ಕವಿಗಳ ಕನ್ನಡದ ಕಾವ್ಯಗಳು ಹಾಗೂ ಪರಂಪರೆಗೆ ಇನ್ನೊಂದು ಪ್ರತೀಕವಾದಂತ ಕನ್ನಡ ನಾಡನ್ನು ಪಾವನ ಮಾಡಿದಂತ ಕೃಷ್ಣೆ ಕಾವೇರಿ ಗೋದಾವರಿ ನರ್ಮದಾ ಕಪಿಲ ಭದ್ರೆ ತುಂಗೆ ಮುಂತಾದ ನದಿಗಳು ನಮ್ಮ ಕನ್ನಡ ನಾಡಿನ ಹೆಮ್ಮೆ ಕನ್ನಡ ರಾಜ್ಯೋತ್ಸವದ ಪೂರ್ವಭಾವಿಯಾಗಿ ಸರ್ಕಾರದ ನಿರ್ದೇಶನದಂತೆ ಕೋಟಿ ಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಇದರ ಮುಖಾಂತರ ನಮ್ಮ ನಾಡಿನ ಕನ್ನಡ ನುಡಿ ಜಲ ಎಲ್ಲವುಗಳನ್ನು ಸಂರಕ್ಷಿಸಬೇಕಿದೆ ಕನ್ನಡ ಭಾಷೆಯನ್ನು ವೈಭವಿಕರಿಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡಯ್ಯಬೇಕಿದೆ ಈ ನಿಟ್ಟಿನಲ್ಲಿ ಇಂದು ಇದರ ಬಗ್ಗೆ ಒಂದು ದೀಕ್ಷೆ ಪಡೆಯೋಣವೆಂದು ಹೇಳಿದರು. ಆಯ್ದ 5 ಗೀತೆಗಳು ಹತ್ತು ಜನ ಗಾಯಕರು ಆಡಿ ಮನರಂಜಿಸಿದರು ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಗೀತೆಗೆ ವಿದ್ಯಾರ್ಥಿಗಳು ಹುಚ್ಚೆದ್ದು ಕುಣಿದರು.  ಒಳಗೊಂಡಂತೆ ಗಾಯಕರುಗಳೊಂದಿಗೆ ಕನ್ನಡ ಗೀತೆಗಳನ್ನು ಹಾಡಿ ಜನರಿಗೆ ಮನರಂಜನೆ ನೀಡಿದರು ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದಂತಹ ನರಸಿಂಹಮೂರ್ತಿ ರೈತ ಸಂಘದ ಅಧ್ಯಕ್ಷ ಕೆಪಿ ಭೂತಯ್ಯ ದೈಹಿಕ ಶಿಕ್ಷಣಾಧಿಕಾರಿ ಶಿವಮೂರ್ತಿ ಕರ್ನಾಟಕ ರಕ್ಷಣಾ ವೇದಿಕೆ ವೆಂಕಟೇಶ್ ಕುಮ್ಮಿ( ಚೇತನ್ ಕುಮಾರ್ ) ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪ್ರಿನ್ಸಿಪಾಲರುಗಳು ಶಿಕ್ಷಕರುಗಳು ಉಪಸ್ಥಿತರಿದ್ದರು

 

 

 

Leave a Reply

Your email address will not be published. Required fields are marked *