ಎಮ್ಮೆ ಹಟ್ಟಿ ಕೆರೆ ನೀರಿಗೆ ಅಡ್ಡ ಮಣ್ಣು ಹಾಕಿದ್ದರೆ ತೆರವುಗೊಳಿಸಿ: ತಹಶೀಲ್ದಾರ್ ಹೆಚ್ . ಜಿ. ಸತ್ಯನಾರಾಯಣ

ಜಿಲ್ಲಾ ಸುದ್ದಿ

ಎಮ್ಮೆ ಹಟ್ಟಿ‌ ನೀರು ಸುಗಮವಾಗಿ ಹರಿಯಲು ಎಲ್ಲಾ ರೀತಿಯ ಸಮಸ್ಯೆಯನ್ನು ಶೀಘ್ರದಲ್ಲಿ‌ ಮಾಡಲಾಗುವುದು ಎಂದು ಚಿತ್ರದುರ್ಗ ತಹಶೀಲ್ದಾರ್ ಜಿ.ಹೆಚ್
ಸತ್ಯನಾರಾಯಣ ಹೇಳಿದರು.
ಅವರು ಇಂದು‌ ತಾಲೂಕು ಕಚೇರಿಯಲ್ಲಿ‌ ನಡೆದ ಸಭೆಯಲ್ಲಿ‌ ಮಾತನಾಡಿದರು. ಎಮ್ಮೆ ಹಟ್ಟಿ ಕೆರೆ ನೀರು ಹರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಇಂಜಿನಿಯರ್ ಗಳು ಹಾಗೂ ಗ್ರಾಮಸ್ಥರ ಸಭೆಯನ್ನು‌ ಕರೆದಿದ್ದರು. ಸಭೆಯಲ್ಲಿ ಗ್ರಾಮಸ್ಥರು ಮಾತನಾಡಿ, ಎಮ್ಮೆ ಹಟ್ಟಿ‌‌ ಕೆರೆಗೆ ನೀರು ತುಂಬಿದ್ದು, ನೀರು ಹರಿದು ಹೋಗಲು ಜಾಗವಿಲ್ಲದೆ ನೀರು ಜಮೀನುಗಳಲ್ಲಿ‌ ನಿಂತಿದೆ. ರಸ್ತೆಗೆ ಅಡ್ಡವಾಗಿ ರಾಷ್ಟ್ರೀಯ ಹೆದ್ದಾರಿಯವರು ಮಣ್ಣು ಹಾಕಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು. ಆದರೆ ಹೆದ್ದಾರಿ‌ ನಿರ್ವಹಣೆ ಮಾಡುತ್ತಿರುವ ರಾಷ್ಟ್ರೀಯ ಹೆದ್ದಾರಿ‌ ಇಂಜಿನಿಯರ್ ಗಳು ನಾವು ಆ ರೀತಿ‌ಮಾಡಿಲ್ಲ ಎಂದು ಹೇಳಿದರು. ಇದರ ಮಧ್ಯೆ ಪ್ರವೇಶಿಸಿದ ತಹಶೀಲ್ದಾರ್ ಅವರು ಯಾರಿಗೂ ತೊಂದರೆ ಆಗದಂತೆ ಪರಿಹರಿಸಬೇಕು, ಇದರಿಂದ ಮಣ್ಣು ಹಾಕಿದ್ದರೆ ಕೂಡಲೇ ತೆರವು ಮಾಡಬೇಕು ಎಂದು ಸೂಚಿಸಿದರು. ಹೆದ್ದಾರಿಯವರು ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿಕೊಡುತ್ತೇವೆ ಎಂದು ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಒಪ್ಪಿಕೊಂಡರು. ಇದರಿಂದ ಗ್ರಾಮಸ್ಥರು ಮತ್ತು ಹೆದ್ದಾರಿಯವರು ನಡುವಿನ ಸಮಸ್ಯೆಯನ್ನು ಪರಿಹರಿಸುವಲ್ಲಿ ಯಶಸ್ವಿಯಾದರು. ಸಭೆಯಲ್ಲಿ ಹೆದ್ದಾರಿ ಇಂಜಿನಿಯರ್ ಗಳು ಪಿಆರ್ ಇಡಿ ಇಂಜಿನಿಯರ್ ಪಾತಪ್ಪ, ಮತ್ತಿತರರು ಇದ್ದರು

 

 

 

Leave a Reply

Your email address will not be published. Required fields are marked *