ಪ್ರಾಣ ಪಣಕ್ಕಿಟ್ಟು ಅಂತರರಾಜ್ಯ ಡಾಕಾಯಿತರ ಬಂಧಿಸಿದ ಪೋಲಿಸರು

ಜಿಲ್ಲಾ ಸುದ್ದಿ

 

ಚಿತ್ರದುರ್ಗ: ಕೋಟೆ ನಾಡಿನ ಗ್ರಾಮಾಂತರ ಠಾಣೆಯ ಪೋಲಿಸರು ಭರ್ಜರಿ ಭೇಟೆಯಾಡಿ ಮೂವರು ಅಂತರರಾಜ್ಯ ಡಾಕಕಾಯಿತರನ್ನು ಬಂಧಿಸಿ 1 ಕೋಟಿ 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

 

 

 

Chitradurga inter state docoits attest

ಕೋಟೆ ನಾಡು ಚಿತ್ರದುರ್ಗದ ಭೀಮ ಸಮುದ್ರದ ಅಡಿಕೆ ಮಂಡಿಯ ರಂಗನಾಥ ಟ್ರೇಡರ್ಸ್ ನಿಂದ 340 ಅಡಿಕೆ ಚೀಲಗಳನ್ನು ತುಂಬಿಕೊಂಡು ದೆಹಲಿಗೆ ಹೋಗುತ್ತಿದ್ದ ವೇಳಯಲ್ಲಿ ಎರ್ಟಿಗಾ ಕಾರಿನಲ್ಲಿ ಹಿಂಬಾಲಿಸಿದ 12 ಜನ ಡಕಾಯಿತರ ತಂಡ ಕೂಡ್ಲಿಗಿ ಬಳಿ ಲಾರಿ ಅಡ್ಡಗಟ್ಟಿ ಚಾಲಕ ಬೂಪ್ ಸಿಂಗ್ ನ ಕಣ್ಣಿಗೆ ಖಾರದ ಪುಡಿ ಎರಚಿ ಬೆದರಿಸಿ ಲಾರಿ‌ ಸಮೇತ ಅಡಿಕೆ ಡಕಾಯಿತಿ ಮಾಡಿಕೊಂಡು ಹೋಗಿದ್ದರು ಎಂದು ಚಾಲಕ ಬೂಪ್ ಸಿಂಗ್ ಹೇಳುತ್ತಾನೆ.ಘಟನೆಯ ಬಗ್ಗೆ ರಂಗನಾಥ್ ಟ್ರೇಡರ್ಸ್ ಮಾಲೀಕರು ಗ್ರಾಮಾಂತರ ಠಾಣೆಯಲ್ಲಿ ಚಾಲಕ ಭೂಪ್ ಸಿಂಗದ ಮೇಲೆ ಅನುಮಾನಿಸಿ ಪ್ರಕರಣ ದಾಖಲಿಸುತ್ತಾರೆ. ಇದರ ಬೆನ್ನು ಹತ್ತಿದ್ದ ಪೋಲಿಸರು ಸತತವಾಗಿ ಭೂಪ್ ಸಿಂಗ್ ವಿಚಾರಣೆ ನಡೆಸಿ ನಂತರ ಅವನ ಪಾತ್ರವಿಲ್ಲ ಎಂದು ಖಾತರಿಪಡಿಸಿಕೊಂಡ ಮೇಲೆ ಕಾರ್ಯಾಚರಣೆ ಆರಂಭಿಸುತ್ತಾರೆ. ಆಗ 12 ಜನರ ತಂಡದ ಮಾಹಿತಿ ಸಿಗುತ್ತದೆ. ಅದರಲ್ಲಿ ಮೂರು ತಂಡಗಳನ್ನಾಗಿ ಮಾಡಿಕೊಂಡು ಡಕಾಯಿತಿ ಮಾಡಿರುವುದು ಬೆಳಕಿಗೆ ಬಂದಿದ್ದು, ಅವರಲ್ಲಿ ಚಿಕ್ಕಮಗಳೂರಿನ ರಿಜ್ವಾನ್, ಚನ್ನಗಿರಿ ಮೂಲದ ಸಲ್ಮಾನ್ ಹಾಗೂ ಅಜ್ಜಂಪುರ ಮೂಲದ ಲಿಂಗರಾಜು ಎಂಬ ಮೂರು ಬಂಧಿಸಿದ್ದಾರೆ. ಇದರಲ್ಲಿ ಪ್ರಮುಖ ಆರೋಪಿ ಆಶ್ರಫ್ ಆಲಿ ಯನ್ನು ಬಂಧಿಸಲು ಹೋದಾಗ ಚಿಕ್ಕ ಮಗಳೂರಿನಲ್ಲಿ ಕಾರ್ಯಾಚರಣೆ ನೇತೃತ್ವ ವಹಿಸಿರುವ ಸಿಪಿಐ ಬಾಲಚಂದ್ರನಾಯ್ಕ್ ಸೇರಿದಂತೆ ಪೋಲಿಸರ ಮೇಲೆ ಮರಣಾಂತಿಕ ಹಲ್ಲೆ ನಡೆಸಿದ್ದು, ಅದರ ಬಗ್ಗೆ ಚಿಕ್ಕ‌ಮಗಳೂರಿನಲ್ಲಿ ಪ್ರಕರಣ ದಾಖಲಾಗಿದೆ. ಇನ್ನು 9 ಜನರ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದ್ದು, ಎಸ್ಪಿ ರಾಧಿಕಾ ಪೋಲಿಸರ ಈ ಕಾರ್ಯಕ್ಕೆ ಶ್ಲಾಘೀಸಿದ್ದಾರೆ.ಪೋಲಿಸರು ಪ್ರಾಣದ ಹಂಗು ತೊರೆದು ಅಡಿಕೆ ಕೃತ್ಯಕ್ಕೆ ಬಳಸಿದ ಕಾರುಗಳು ಮತ್ತು ಅಡಿಕೆ ಸಾಗಿಸುತ್ತಿದ್ದ ಲಾರಿಯನ್ನು ವಶಪಡಿಸಿದ್ದು ಈ ಕಾರ್ಯಾಚರಣೆಗೆ ಎಸ್ಪಿ ರಾಧಿಕಾ ಪೋಲಿಸರಿಗೆ ಶ್ಲಾಘಿಸಿದ್ದು ಬಹುಮಾನವನ್ನು ಘೋಷಿಸಿದ್ದಾರೆ

ಸಂಯುಕ್ತವಾಣಿ

Leave a Reply

Your email address will not be published. Required fields are marked *