ಅಭಿವೃದ್ದಿ ಪರಿಶೀಲನಾ ಸಭೆಯಲ್ಲಿ ಜಟಾಪಟಿಗೆ ಬಿದ್ದ ಶಾಸಕ ಹಾಗೂ ತಹಶೀಲ್ದಾರ್

ಜಿಲ್ಲಾ ಸುದ್ದಿ

ಅಧಿಕಾರಿಗಳು ಅಭಿವೃದ್ಧಿಯಲ್ಲಿ ಶಾಸಕರ ಜೊತೆ ಕೈಜೋಡಿಸುವುದು ಅಧಿಕಾರಿಗಳ ಕರ್ತವ್ಯ, ಆದರೆ ಅಧಿಕಾರಿಗಳೇ ರಾಜಕಾರಣಿಗಳಂತೆ ವರ್ತನೆ ಮಾಡುವುದು ಸರಿಯೇ, ಅಧಿಕಾರಿಯೊಬ್ಬರು ನಾನು ರಾಜಕಾರಣಿ ಗಿಂತ ಏನೂ ಕಡಿಮೆಯಿಲ್ಲ ಎಂಬಂತೆ ಶಾಸಕರ ವಿರುದ್ದವೇ ತಿರುಗಿ ಬಿದ್ದಿರುವ ಘಟನೆ ಈಗ ಚರ್ಚೆಗೆ ಗ್ರಾಸವಾಗಿದೆ. ಚಳ್ಳಕೆರೆ ತಹಶೀಲ್ದಾರ್ ಈಗ ಚರ್ಚೆಗೆ ವಿವಾದದ ಅಧಿಕಾರಿಯಾಗಿದ್ದಾರೆ.
ಹೌದು ಇದು ಚಳ್ಳಕೆರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸ್ಮಶಾನ ಅಭಿವೃದ್ದಿ,ಆಶ್ರಯ,ಕುಡಿಯುವ ನೀರು ಸೇರಿದಂತೆ ವಿವಿಧ ಇಲಾಖೆಗಳಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನಾಸಭೆಯಲ್ಲಿ ಶಾಸಕ ರಘುಮೂರ್ತಿ ಹಾಗೂ ತಹಶೀಲ್ದಾರ್ ರಘುಮೂರ್ತಿ ನಡುವೆ ಮಾತಿನ ಚಕಮಕಿ ನಡೆದ ಪ್ರಸಂಗ ಜರುಗಿತು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ, ಗ್ರಾಮವಾಸ್ತವ್ಯ, ಜನಸಂಪರ್ಕ ಸಭೆಗಳಲ್ಲಿ ಗ್ರಾಮೀಣ ಜನರ ಕುಂದು ಕೊರತೆಗೆಳ ಬಗ್ಗೆ ಅರ್ಜಿ ಸ್ವೀಕರಿಸಿ ಸಮಸ್ಯೆ ಬಗೆಹರಿಸುವ ಬದಲು ಎತ್ತಿನ ಗಾಡಿ ವಾದ್ಯಗಳೊಂದಿಗೆ ಮೆರೆವಣಿಗೆಗೆ ಮಾತ್ರ ಸೀಮಿತವಾಗಿದ್ದು, ಗ್ರಾಮೀಣ ಜನರ ಕುಂದು ಕೊರೆತೆಗಳನ್ನು ಬಗೆಹರಿಸದೆ ಕಾಟಾಚರಕ್ಕೆ ಗ್ರಾಮವಾಸ್ತವ್ಯವಾಗಿದೆ ಎಂದು ಅಧಿಕಾರಿಗಳ ವಿರುದ್ದ ಶಾಸಕರು ಗುಡುಗಿದರು.
ತಾಲೂಕಿನ ಟಿ.ಎನ್.ಕೋಟೆ ಗ್ರಾಮದಲ್ಲಿ ಸರಕಾರಿ ಶಾಲೆ ಹಾಗೂ ಸ್ಮಶಾನ ಭೂಮಿ ಒತ್ತುವರಿಯಾಗಿ ಎರಡು ವರ್ಷಗಳು ಕಳೆದರೂ ಬಗೆಹರಿಸಿಲ್ಲ. ನಾನು ಶಾಸಕ ನಾಗಿ ಹತ್ತು ವರ್ಷಗಳು ಕಳೆಯಲು ಬಂದಿದ್ದು ಯಾವ ಸಮುದಾಯ ಅಥವಾ ಸಂಘ ಸಂಸ್ಥೆಯವರು ನಿವೇಶ, ಭೂಮಿ ಕೊಡಿ ಎಂದು ಅರ್ಜಿಸಲ್ಲಿಸಿಲ್ಲ ನೀವು ಅಧಿಕಾರಕ್ಕೆ ಬಂದಾಗಿನಿಂದ ಖಾಸಗಿಯವರಿಂದ ಹೆಚ್ಚು ಅರ್ಜಿಗಳು ಬರುತ್ತಿವೆ. ನಾನು ಮಂಜೂರಾತಿ ಮಾಡಲು ಸಿದ್ದನಿದ್ದೇನೆ ಆದರೆ ಶಾಸರು ಅಡ್ಡಿ ಪಡಿಸುತ್ತಿದ್ದಾರೆ ಎಂದು ವಿವಿಧ ಸಮುದಾಯಗಳು ನನ್ನ ಬಗ್ಗೆ ಸುಳ್ಳು ವದಂತಿಗಳು ಹರಡುತ್ತಿವೆ. ಇದಕ್ಕೆ ಸರಿಯಾಗಿ ಸ್ಪಷ್ಟನೆ ನೀಡುವಂತೆ ತಹಶೀಲ್ದಾರ್ ಗೆ ತಿಳಿಸಿದರು.
ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ನಾನು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದೇನೆ ನಾನು ಯಾವುದೇ ಕಳಂಕ ಮಾಡಿಲ್ಲ ನಾನೇ ಜನರಿಗೆ ಹೇಳಿದ್ದೇನೆ ಎಂದು ಸಾಬೀತು ಪಡಿಸಿ ನಾನು ಅವರ ವಿರುದ್ದ ಕೇಸು ಹಾಕುತ್ತೇನೆ ಎಂದು ಶಾಸಕರ ವಿರುದ್ದ ಅಕ್ರೋಶ ಹೊರ ಹಾಕಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ನೀವು ಸಭೆ ಸಮಾರಂಭಗಳಿಗೆ ಹೋದಲ್ಲಿ ರಾಜಕಾರಣಿ ಗಳಂತೆ ಭರವಸೆ ಕೊಡುವುದನ್ನು ಬಿಟ್ಟು ಒಬ್ಬ ತಾಲೂಕು ದಂಡಾಧಿಕಾರಿಯಾಗಿ ಕೆಲಸ ಸಮಾಡಿದರೆ ಯಾವುದೇ ಸಮಸ್ಯೆ ಬರುವುದಿಲ್ಲ ಎಂದು ತಹಶೀಲ್ದಾರ್‌ಗೆ ತಿರುಗೇಟು ನೀಡಿದರು.
ತಹಶೀಲ್ದಾರ್ ಎನ್.ರಘುಮೂರ್ತಿ ಸಭೆಯ ವೇದಿಕೆಯ ಟೇಬಲ್ ಕುಟ್ಟಿ ನಾನು ನೋಡುತ್ತಿದ್ದೇನೆ ನನ್ನನ್ನೇ ಟಾರ್ಗೇಟ್ ಮಾಡಿ ಬಯ್ಯುತ್ತಿರುವುದು ಎಷ್ಟು ಸರಿ? ಒಬ್ಬ ನಿಷ್ಟಾವಂತ ಅಧಿಕಾರಿ ವಿರುದ್ದ ತೇಜೋವಧೆ ಮಾಡುವುದು ಸರಿಯಲ್ಲ ನಿಮ್ಮ ಮನಸ್ಸಿನಲ್ಲಿ ಏನೋನೋ ಇಟ್ಟು ಕೊಂಡು ಮಾತನಾಡುವುದು ಸರಿಯಲ್ಲ ನನ್ನೇನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದು ಶಾಸಕರ ವಿರುದ್ದ ತಿರುಗಿ ಬಿದ್ದು ಸಭೆಯ ವೇದಿಕೆಯಿಂದ ಕೆಳಗಿಳಿದು ಸಭತ್ಯಾಗ ಮಾಡಿದರು. ಶಾಸಕ ಟಿ.ರಘುಮೂರ್ತಿ ಮಾತನಾಡಿ, ವಿವಿಧ ಇಲಾಖೆ ಅಧಿಕಾರಿಗಳು ಸರಕಾರಿ ವಾಹನವನ್ನ ಬಳಕೆ ಮಾಡಿರುವ ಬಗ್ಗೆ ಎಲ್ಲೆಲ್ಲಿ ಹೋಗಿದ್ದೀರಿ ಲಾಗೀನ್ ಪುಸ್ತಕ ತೋರಿಸಿ. ಗುತ್ತಿಗೆ ವಾಹನ ವಾದರೆ ಡೈರಿ ತೋರಿಸಿ ಸರಕಾರ ಹಣ ನೀಡುತ್ತಿದೆ ಜನರ ಸೇವೆ ಮಾಡುವ ಬದಲು ಇಲಾಖೆ ವಾಹನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಆರೋಪಗಳು ಕೇಳಿ ಬರುತ್ತಿವೆ ಎಂದು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ‌ ಸ್ಮಶಾನ ಒತ್ತುವರಿ ಮಾಡಿಕೊಂಡವರಿಗೆ ನೋಟಿಸ್ ಜಾರಿ ಮಾಡಿ ತೆರವುಗೊಳಿಸಿ ಅಭಿವೃದ್ಧಿ ಪಡಿಸ ಬೇಕು ಮುಂದಿನ ಸಭೆಗೆ ಎಲ್ಲಾ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಿರುವ ಬಗ್ಗೆ ನಾಮಫಲಕ ಹಾಕಿ ಪೋಟೋ ನೀಡುವಂತೆ ಸೂಚನೆ ನೀಡಿದರು. ತಾಲೂಕಿನ ನನ್ನಿವಾಳ ಗ್ರಾಪಂ ವ್ಯಾಪ್ತಿಯ 36 ಹಟ್ಟಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳಿಗೆ ಹಟ್ಟಿಗಳ ಮಾರ್ಗ ಸೂಚಿ ಫಲಕ ಅಳವಡಿಸುವಂತೆ ಎಇಇ ಕಾವ್ಯಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಹೊನ್ನಯ್ಯ, ಸಹಾಯಕ ನಿರ್ದೇಶಕ ಸಂತೋಷ್ ,ತಾಲೂಕು ಮಟ್ಟದವಿವಿಧ ಇಲಾಖೆಯ ಅಧಿಕಾರಿಗಳು , ಪಿಡಿಒಗಳು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *