ಈ ಚುನಾವಣೆಯಲ್ಲಿ ಬಿಜೆಪಿ 120 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ

ರಾಜಕೀಯ

ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭೀವೃದ್ದಿಯನ್ನು ಮಾಡಿದ್ದೇನೆ ಮತವನ್ನು ಕೇಳುವಾಗ ಯಾವುದೇ ರೀತಿಯ ಸಂಕೋಚ ಇಲ್ಲದೆ ಅಭೀವೃದ್ದಿಯನ್ನು ಹೇಳಿ ಮತವನ್ನು ಕೇಳಿ ಎಂದು ಪಕ್ಷದ ಕಾರ್ಯಕರ್ತರಿಗೆ ಮುಖಂಡರಿಗೆ ಶಾಸಕರು, 2023ರ ಚುನಾವಣೆಯ ಬಿಜೆಪಿ ಅಭ್ಯರ್ಥಿ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ಚಿತ್ರದುರ್ಗ ನಗರದ ರೆಡ್ಡಿ ಬಿಲ್ಡಿಂಗ್‍ನಲ್ಲಿ ಇಂದು ಪ್ರಾರಂಭವಾದ ಬಿಜೆಪಿಯ ಜಿಲ್ಲಾ ಚುನಾವಣಾ ಕಾರ್ಯಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಚುನಾವಣೆ ರಾಜ್ಯದಲ್ಲಿ ಪ್ರತಿಷ್ಠೆಯನ್ನು ಪಡೆದಿದೆ. ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿಗಳು ದೇಶವನ್ನು ಪ್ರಗತಿಯತ್ತ ಕೊಂಡೂಯುವಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸಿದ್ದಾರೆ. ಅಂತರಾಷ್ಟ್ರೀಯ ಮಟ್ಟದಲ್ಲೂ ಸಹಾ ಮೋದಿಯವರಿಗೆ ಉತ್ತಮವಾದ ಹೆಸರು ಇದೆ. ಮುಂದಿನ ದಿನದಲ್ಲಿ ಭಾರತ ಆರ್ಥಿಕ ಪ್ರಗತಿಯಲ್ಲಿ ಮೂರನೇ ಸ್ಥಾನವನ್ನುಗಳಿಸುವ ನಿರೀಕ್ಷೆ ಇದೆ. ಕಮ್ಯೂನಿಸ್ಟ್ ಇದ್ದ ರಾಜ್ಯದಲ್ಲಿಯೂ ಸಹಾ ಬಿಜೆಪಿ ತನ್ನ ಭಾವುಟವನ್ನು ಹಾರಿಸಲಿದೆ ಎಂದರು.
ಮೋದಿಯವರು ನೀಡುವ ಕಾರ್ಯಕ್ರಮಗಳು ತಾತ್ಕಾಲಿಕವಾಗಿ ಇರದೆ ಶಾಶ್ವತವಾದ ಕಾರ್ಯಕ್ರಮಗಳಾಗಿವೆ. 75 ವರ್ಷದ ಸ್ವಾತಂತ್ರ್ಯದಲ್ಲಿ 50 ವರ್ಷ ಆಡಳಿತವನ್ನು ಮಾಡಿದ ಕಾಂಗ್ರೆಸ್ ಚುನಾವಣೆಯಲ್ಲಿ ಶೂನ್ಯ ಸಾಧನೆಯನ್ನು ಮಾಡಿದೆ. ದಕ್ಷಿಣದಲ್ಲಿ 2008ರಲ್ಲಿ ಬಿಜೆಪಿ ಆಡಳಿತವನ್ನು ಪ್ರಾರಂಭ ಮಾಡಿದೆ. ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರಲು ನಮ್ಮಲ್ಲಿ ಆದ ವಿವಿಧ ಪಕ್ಷಗಳಿಂದ ಅವರು ಆಡಳಿತವನ್ನು ಮಾಡುವಂತಾಯಿತು. ಬಿಜೆಪಿ ಅಧಿಕಾರಕ್ಕಾಗಿ ಬಂದ ಪಕ್ಷವಲ್ಲ ಸಿದ್ದಾಂತದ ಮೇಲೆ ನಡೆಯುವ ಪಕ್ಷವಾಗಿದೆ. ದೇಶದ ಉಳಿವಿಗಾಗಿ ತ್ಯಾಗವನ್ನು ಮಾಡುವ ಪಕ್ಷವಾಗಿದೆ. ಇಂತಹ ಬಿಜೆಪಿಯಲ್ಲಿ ಇರುವುದು ನಮ್ಮ ಪುಣ್ಯವಾಗಿದೆ. ಮೋದಿಯವರು ಅಂತರಾಷ್ಟ್ರೀಯ ನಾಯಕರಾಗಿದ್ದಾರೆ. ಪಾಕಿಸ್ತಾನದಲ್ಲೂ ಸಹಾ ಮೋದಿಯವರ ಜಪವನ್ನು ಮಾಡುತ್ತಿದ್ದಾರೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಈ ಚುನಾವಣೆಯಲ್ಲಿ ಬಿಜೆಪಿ 120 ರಿಂದ 150 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಸ್ವತಂತ್ರವಾಗಿ ಅಧಿಕಾರವನ್ನು ನಡೆಸಲಿದೆ. ಬೇರೆ ಪಕ್ಷದವರು ಬಿಜೆಪಿ ಅಧಿಕಾರಕ್ಕೆ ಬಂದರೆ ಅನಾಹುತಗಳು ನಡೆಯಲಿದೆ ಎಂದು ಜನತೆಯಲ್ಲಿ ಭೀತಿಯನ್ನು ಹುಟ್ಟಿಸುತ್ತಿದ್ದಾರೆ. ಇದಕ್ಕೆ ಹೆದರಬಾರದು ಬಿಜೆಪಿ ಅಧಿಕಾರದಲ್ಲಿದ್ಧಾಗ ಯಾವುದೇ ರೀತಿಯ ಅನಾಹುತಗಳು ನಡೆಯದೇ ಶಾಂತಿಯಿಂದ ಇದೆ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗಿಂತ ಪಕ್ಷದ ಚಿಹ್ನೆ ಮುಖ್ಯವಾಗಿದೆ. ಇಲ್ಲಿ ಅಭ್ಯರ್ಥಿಗಿಂತ ಪಕ್ಷ ಮುಖ್ಯ, ಅಭ್ಯರ್ಥಿ ಯಾರೇ ಆಗಲಿರಲಿ ಇಲ್ಲಿ ಅಭ್ಯರ್ಥಿಗಿಂತ ಚಿಹ್ನೆ ಮುಖ್ಯವಾಗಿದೆ ಪಕ್ಷದ ಟೀಕೆಟಿಗಾಗಿ ನಾನು ಯಾರನ್ನು ಕೇಳಿಲ್ಲ, ಪೋನು ಸಹಾ ಮಾಡಿಲ್ಲ ನನ್ನ ಮಗನಿಗೆ ಟೀಕೆಟ್ ನೀಡಿ ಎಂದು ಸಹಾ ಪಕ್ಷದ ವರಿಷ್ಠರನ್ನು ಕೇಳಿಲ್ಲ, ಆದರೆ ಟೀಕೆಟ್ ಕೇಳಿದ್ದಾರೆ ಎಂದು ಮಾಧ್ಯಮದಲ್ಲಿ ಬರುತ್ತಿದೆ ಇದರ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ಈ ಸಲ ಟೀಕೇಟ್ ನೀಡಿದವರಲ್ಲಿ ಹಿರಿಯ ವಯಸ್ಸಿನವನು ನಾನಾಗಿದ್ದೇನೆ ಎಂದು ಹೇಳಿದರು.
ಮುಖ್ಯಮಂತ್ರಿ ಬೊಮ್ಮಾಯಿಯವರು ಎಲ್ಲಾ ಜನಾಂಗವದರಿಗೂ ಸಹಾ ಸರಿಯಾದ ಪ್ರಮಾಣದಲ್ಲಿ ಮೀಸಲಾತಿಯನ್ನು ಹಂಚುವುದಲ್ಲಿ ಸಾಕಷ್ಟು ಶ್ರಮವನ್ನು ತೆಗೆದುಕೊಳ್ಳುವುದರ ಮೂಲಕ ಹಂಚಿಕೆಯನ್ನು ಮಾಡಿದ್ದಾರೆ. ಇದನ್ನು ಮತದಾರರಿಗೆ ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ಚುನಾವಣೆ ಸಮಯದಲ್ಲಿ ಸಣ್ಣ-ಪುಟ್ಟ ವ್ಯತ್ಯಾಸ ಇರುವುದು ಸಾಮಾನ್ಯ ಇದರ ಬಗ್ಗೆ ಗಮನ ನೀಡದೇ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಕಡೆ ಗಮನ ನೀಡುವಂತೆ ತಿಳಿಸಿದ ತಿಪ್ಪಾರೆಡ್ಡಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ಸಿಹಿ ನೀರಿನ ಸಂಪರ್ಕವನ್ನು ನೀಡಲಾಗುತ್ತದೆ. ಇದಕ್ಕಾಗಿ ಬೊಮ್ಮಾಯಿ ಸರ್ಕಾರ 593 ಕೋಟಿ ರೂ.ಗಳನ್ನು ನೀಡಿದೆ, ಇದ್ದಲ್ಲದೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 500 ಕೋಟಿ ರೂ.ಗಳನ್ನು ಸಹಾ ನೀಡಿದೆ. ಮುಂದಿನ ದಿನದಲ್ಲಿ ಮನೆಗಳಿಗೆ ಗ್ಯಾಸ್ ಸಂಪರ್ಕವನ್ನು ನೀಡಲಾಗುವುದು ಇದರ ನಿರ್ಮಾಣ ಕಾರ್ಯವಾಗುತ್ತದೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ವರ್ಷಕ್ಕೆ 1.10 ಲಕ್ಷ ರೂ.ಗಳನ್ನು ನೀಡುತ್ತಿದೆ ಇದು ಮುಂದುವರೆಯಬೇಕಾದರೆ ಬಿಜೆಪಿಯನ್ನು ಬೆಂಬಲಿಸಿ, ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಬಾರಿ 5 ಕ್ಷೇತ್ರವನ್ನು ಮಾತ್ರ ಗೆದ್ದಿತ್ತು ಈ ಭಾರಿ 6 ಕ್ಷೇತ್ರಗಳಲ್ಲಿಯೂ ಸಹಾ ಗೆಲುವನ್ನು ಸಾದಿಸಲಿದೆ ಎಂದು ಭವಿಷ್ಯ ನುಡಿದ ತಿಪ್ಪಾರೆಡ್ಡಿ, ಕರೋನಾ ಸಮಯದಲ್ಲಿ ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುವವರಾರು ಜನತೆಯ ಕಷ್ಟವನ್ನು ಕೇಳಲು ಬಂದಿಲ್ಲ, ಆಗ ಜನ ಹೇಗಿದ್ದರು ಎಂಬ ಕಲ್ಪನೆ ಕೂಡ ಅವರಿಗಿಲ್ಲ, ಇಂತಹರನ್ನು ನಂಬಿ ಮತವನ್ನು ನೀಡಬೇಡಿ, ನಾನಾದರೂ ಪ್ರಶ್ನೆ ಮಾಡಲಿಕ್ಕೆ ಸಿಗುತ್ತೇನೆ ಕಾರು ನಿಲ್ಲಿಸಿ ಕೇಳಬಹುದು ಆದರೆ ಅವರನ್ನು ಹಿಡಿಯಲು ಮೇಲೆ ಹೋಗಬೇಕಿದೆ ಎಂದು ಪ್ರತಿಸ್ಫರ್ದಿಯ ವಿರುದ್ದ ಕಿಡಿ ಕಾರಿದರು.
ಈ ಬಾರಿಯ ಚುನಾವಣೆಯು ಹಣ ಮತ್ತು ಪಕ್ಷದ ಮೇಲೆ ನಡೆಯಲಿದೆ. ಚಿತ್ರದುರ್ಗ ಚುನಾವಣೆ ಛಾಲೆಂಜ್ ಚುನಾವಣೆಯಾಗಲಿದೆ. ಕಳೆದ ಭಾರಿ 33 ಸಾವಿರ ಮತಗಳ ಅಂತರದಿಂದ ಗೆಲುವನ್ನು ನೀಡಿದ್ದರೀ ಈ ಭಾರಿ 50 ಸಾವಿರ ಮತಗಳ ಆಂತರದಿಂದ ಗೆಲುವನ್ನು ತರಬೇಕಿದೆ ಇದಕ್ಕಾಗಿ ಮುಂದಿನ ಮೇ 10ರವರೆಗೆ ದುಡಿಯಬೇಕಿದೆ ಅಲ್ಲಿಯವರೆಗೂ ಯಾರು ಸಹಾ ವಿಶ್ರಾಂತಿಯನ್ನು ತೆಗೆದುಕೊಳ್ಳುವ ಹಾಗಿಲ್ಲ 15 ದಿನ ಕೆಲಸವನ್ನು ಮಾಡಿ ಮುಂದಿನ 5 ವರ್ಷ ಪೂರ್ಣ ನಿಮ್ಮ ಸೇವೆಯನ್ನು ನಾನು ಮಾಡುತ್ತೇನೆ ಎಂದು ತಿಪ್ಪಾರೆಡ್ಡಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಚಿತ್ರದುರ್ಗದ ಪ್ರಚಾರಿ ಗೀತಾ ನಾರಾಯಣ, ನಗರಾಭೀವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸುರೇಶ್ ಸಿದ್ದಾಪುರ, ಸದಸ್ಯರಾದ ಶ್ರೀಮತಿ ರೇಖಾ, ನಗರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾಧ ಸುರೇಶ್, ಸದಸ್ಯರಾದ ಹರೀಶ್ ಶ್ರೀನಿವಾಸ್ ಅನುರಾಧ ರವಿಶಂಕರ್, ಮಲ್ಲಿಕಾರ್ಜನ್, ಉಪಾಧ್ಯಕ್ಷರಾದ ಸಂಪತ್, ನಗರಾಧ್ಯಕ್ಷರಾದ ನವೀನ್ ಗ್ರಾಮಾಂತರ ಅಧ್ಯಕ್ಷರಾದ ಕಲ್ಲೇಶ್ ವಕ್ತಾರರಾದ ನಾಗರಾಜ್ ಬೇದ್ರೇ, ದಗ್ಗೆ ಶಿವಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

 

 

 

Leave a Reply

Your email address will not be published. Required fields are marked *