ಕುಡಿದು ಕಚೇರಿಗೆ ಬರುತ್ತಿದ್ದ ಪಿಡಿಓ ಅಮಾನತ್ತುಮಾಡಿ‌ಆದೇಶಿಸಿದ ಸಿಇಓ ದಿವಾಕರ್

ಜಿಲ್ಲಾ ಸುದ್ದಿ

ಅನಧಿಕೃತ ಗೈರುಹಾಜರಿ ಹಾಗೂ ಕಚೇರಿ ವೇಳೆಯಲ್ಲಿ ಮಧ್ಯ ಸೇವಿಸಿ ಬಂದು ಸರ್ಕಾರಿ ಕೆಲಸಗಳಿಗೆ ತೊಂದರೆ ಕೊಡುತ್ತಿದ್ದ ಬೇಡ ರೆಡ್ಡಿ ಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ಹನುಮಂತ ಕುಮಾರ್ ಅವರನ್ನು ಅಮಾನತು ಮಾಡಿ ಇಲಾಕ ವಿಚಾರಣೆಯನ್ನು ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಓ ಎಂಎಸ್ ದಿವಾಕರ್ ಆದೇಶಿಸಿದ್ದಾರೆ.
ಚಳ್ಳಕೆರೆ ತಾಲೂಕಿನ ಬೀಡರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಹನುಮಂತ ಕುಮಾರ್ ಏಳು ಒಂದು 2023 ರಂದು ಬೆಳಿಗ್ಗೆ 11 ಗಂಟೆಗೆ ಮಧ್ಯಪಾನ ಮಾಡಿ ಚಳ್ಳಕೆರೆ ನಗರದ ಬಸ್ ನಿಲ್ದಾಣದಲ್ಲಿ ನಿದ್ದೆ ಮಾಡಿದ್ದು, ಈ ಹಿಂದೆಯೂ ಕೂಡ ಇವರು ಇದೇ ಪ್ರವೃತ್ತಿಯನ್ನು ಮುಂದುವರಿಸಿದ್ದರಿಂದ ಪಿಡಿಒ ಹೇಮಂತ್ ಕುಮಾರ್ ಅವರನ್ನು ಕರ್ತವ್ಯ ಲೋಕದಲ್ಲಿ ಅಮಾನತ್ತು ಪಡಿಸಿ ಸದರಿ ಗ್ರಾಮ ಪಂಚಾಯಿತಿಗೆ ಪುನರ್ ನೇಮಕ ಮಾಡಲಾಗಿತ್ತು. ಆದರೆ ತನ್ನ ತಪ್ಪನ್ನು ತಿದ್ದಿಕೊಳ್ಳದೆ ಮತ್ತೆ ಪದೇ ಪದೇ ಮಧ್ಯಪಾನ ಸೇವಿಸಿ ಸರ್ಕಾರಿ ಕೆಲಸಕ್ಕೆ ತೊಂದರೆ ಉಂಟು ಮಾಡುತ್ತಿರುತ್ತಾರೆ ನಾಗರೀಕರ ಕೆಲಸವನ್ನು ಮಾಡಿ ಕೊಡುತ್ತಿಲ್ಲ, ಈ ಸ್ವತ್ತು ಸೌಲಭ್ಯವನ್ನು ಜನರಿಗೆ ನೀಡದೆ ತೊಂದರೆ ನೀಡುತ್ತಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಜನರು ಮತ್ತು ಪಂಚಾಯತಿಯ ಸದಸ್ಯರು ತಾಲೂಕು ಕಚೇರಿಗೆ ದೂರು ನೀಡಿದ್ದರಿಂದ ತಾಲೂಕು ಪಂಚಾಯಿತಿಯ ಅಧಿಕಾರಿ ಜಿಲ್ಲಾ ಪಂಚಾಯತಿಯ ಪ್ರಸ್ತಾವನೆಯನ್ನು ಕಳಿಸಿದ್ದು, ದೂರನ್ನು ಪರಿಶೀಲಿಸಿ, ಕೊನೆಯಲ್ಲಿ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿಗಳು 1966 ನಿಯಮ 3/1 2 ಮತ್ತು 3 ನಿಯಮಗಳನ್ನು ಉಲ್ಲಂಘಿಸುವ ಕಂಡುಬಂದಿರುವ ಕಾರಣ ಸದರಿಯವರನ್ನು ಅಮಾನತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಜಿಲ್ಲಾ ಪಂಚಾಯಿತಿ ಸಿಇಓ ದಿವಾಕರ್ ಅವರು ಕೆಸಿಎಸ್ ನಿಯಮಾವಳಿ 1957ರ ನಿಯಮ 10/1 ರ ಅನ್ವಯ ಹನುಮಂತ ಕುಮಾರ್ ಅವರನ್ನು ಇಲಾಖೆ ವಿಚಾರಣೆಯನ್ನು ಕಾಯ್ದಿರಿಸಿ ಅಮಾನತುಗೊಳಿಸಿ ಆದೇಶಿಸಿದೆ. ಈ ಸಮಯದಲ್ಲಿ ಇವರು ಪ್ರಾಧಿಕಾರದ ಅನುಮತಿ ಪಡೆಯದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಸೂಚಿಸಿದೆ.

 

 

 

Leave a Reply

Your email address will not be published. Required fields are marked *