ಮೆಕ್ಕೆ ಜೋಳದ ಲದ್ದಿ ಹುಳು ಬಾದೆಗೆ ಇಲ್ಲಿದೆ ನೋಡಿ‌ ಪರಿಹಾರ

ಜಿಲ್ಲಾ ಸುದ್ದಿ

ಚಿತ್ರದುರ್ಗ :ಜಿಲ್ಲೆಯಲ್ಲಿ ಪ್ರಸ್ತುತ ಮೆಕ್ಕೆಜೋಳ ಬೆಳೆ 25 ರಿಂದ 45 ದಿನಗಳ ಹಂತದಲ್ಲಿರುತ್ತದೆ. ಜುಲೈ 25ರಂದು ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯ-ಕೃಷಿ ಸಂಜೀವಿನಿ ವಾಹನವು ಹಿರಿಯೂರು ತಾಲ್ಲೂಕಿನ ಮ್ಯಾಕಲೂರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಮೆಕ್ಕೆಜೋಳ ಬೆಳೆ ಪರೀಕ್ಷಿಸಿದ ಸಂದರ್ಭದಲ್ಲಿ ಲದ್ದಿ ಹುಳು ಬಾಧೆ ಕಂಡುಬಂದಿದೆ.

 

 

 


ಲದ್ದಿ ಹುಳು ಬಾಧೆಯು ಮ್ಯಾಕಲೂರಹಳ್ಳಿ ಗ್ರಾಮ ಸೇರಿದಂತೆ ಸುತ್ತ-ಮುತ್ತ ಪ್ರದೇಶದಲ್ಲಿ ಹಾಗೂ ಮೆಕ್ಕೆಜೋಳ ಬೆಳೆದಂತಹ ಉಳಿದ ಎಲ್ಲಾ ತಾಲ್ಲೂಕುಗಳಲ್ಲಿಯೂ ಈ ರೋಗ ಕಂಡುಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಲದ್ದಿ ಹುಳುವಿನ ಹತೋಟಿಗಾಗಿ ಎಮ್ಯಾಮೆಕ್ಟಿನ್ 0.5 ಗ್ರಾಂ ಪ್ರತಿ ಲೀಟರ್‍ಗೆ ಬೆರೆಸಿ ಸುಳಿಗೆ ಸಿಂಪಡಿಸುವುದರಿಂದ ಈ ಹುಳುವಿನ ಬಾಧೆಯನ್ನು ಹತೋಟಿಗೆ ತರಬಹುದು ಎಂದು ಜಂಟಿ ಕೃಷಿ ನಿರ್ದೇಶಕರ ಕಚೇರಿಯ ಸಹಾಯಕ ಕೃಷಿ ನಿರ್ದೇಶಕರು, ವಿಷಯ ತಜ್ಞರಾದ ಮಂಜುನಾಥಸ್ವಾಮಿ ತಿಳಿಸಿದ್ದಾರೆ.

ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಲು: 8660924503

Leave a Reply

Your email address will not be published. Required fields are marked *