ತೀರ್ಪುಗಾರರು ನ್ಯಾಯಯುತ ತೀರ್ಪು ನೀಡಬೇಕು: ತಿಪ್ಪಾರೆಡ್ಡಿ‌ಖಡಕ್ ಸೂಚನೆ

ಜಿಲ್ಲಾ ಸುದ್ದಿ

ಚಿತ್ರದುರ್ಗ:ಸೆ.26:  ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಜಗತ್ತಿಗೆ ತೋರಿಸಲು ಪ್ರತಿಭಾ ಕಾರಂಜಿ  ಉತ್ತಮ ವೇದಿಕೆಯಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

 

ತಾಲೂಕಿನ  ಕಡ್ಲೆಗುದ್ದು ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಪ್ರೌಢ ಶಾಲೆಯ ಆವರಣದಲ್ಲಿ  ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿರುವ ಹಿರೇಗುಂಟನೂರು ಹೋಬಳಿ ಮಟ್ಟದ ಪ್ರತಿಭಾ ಕಾರಂಜಿ ಮತ್ತು  ನೂತನ ಶಾಲಾ ಕೊಠಡಿಗಳನ್ನು  ಉದ್ಘಾಟಿಸಿ ಮಾತನಾಡಿದರು‌.
ಪ್ರತಿಯೊಬ್ಬ ಮಕ್ಕಳಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆಯನ್ನು ಹೊಂದಿರುತ್ತಾರೆ. ಮಕ್ಕಳು ತಮ್ಮ ಕಲೆಯನ್ನು ಪ್ರದರ್ಶನ ತೋರಲು ಸರ್ಕಾರದಿಂದ ಹೋಬಳಿ‌ ಮಟ್ಟ, ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರೀಯ ಮಟ್ಟಕ್ಕೆ  ಇಂತಹ ಸ್ವರ್ಧೆಗಳನ್ನು ಏರ್ಪಡಿಸಲಾಗುತ್ತದೆ ಎಂದರು.
ಕೆಲವು ಮಕ್ಕಳಲ್ಲಿ ಬರವಣಿಗೆ, ಆಶು ಭಾಷಣ,ಧಾರ್ಮಿಕ ಪಠಣ,ಕೋಲಾಟ,ಲಘು ಸಂಗೀತ, ಚಿತ್ರ ಕಲೆ,ಕಂಠಪಾಠ, ಹೆಸರಾಂತ ನಾಯಕರ ವೇಷ ಭೂಷಣ ಎಲ್ಲಾವನ್ನು ನಾವು ಮಕ್ಕಳಲ್ಲಿ ಅಡಗಿರುವ ಕಲೆ ಮೂಲಕ‌ ನೋಡಬಹುದು. ಮಕ್ಕಳ ಕೋಲಾಟ ವಿಕ್ಷಣೆ ಮಾಡಿದ ನನಗೆ ತುಂಬಾ ಸಂತೋಷವಾಯಿತು.
ಗ್ರಾಮೀಣ ಸೊಗಡು ಮರೆಯಾಗುತ್ತಿದ್ದು ಇಂತಹ ಕಾರ್ಯಕ್ರಮದಿಂದ  ಮಕ್ಕಳು ಮತ್ತೊಮ್ಮೆ ನೆನಪಿಸುವುದರ ಜೊತೆಗೆ  ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ‌.
ಶಿಕ್ಷಕರು ಮಕ್ಕಳಲ್ಲಿ ಆರೋಗ್ಯಕರ ಸ್ಪರ್ಧೆ ಏರ್ಪಡಿಸುವ ಕೆಲಸ ಮಾಡಬೇಕು. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವನ್ನು ಮಕ್ಕಳಿಗೆ ವಿದ್ಯಾರ್ಥಿ ಜೀವನದಲ್ಲಿ ಕರಗತ ಮಾಡಿಸಿದರೆ ಮುಂದಿನ ದಿನದಲ್ಲಿ ಆತ್ಮ ವಿಶ್ವಾಸ ಹೆಚ್ಚಿಸಿದಂತೆ ಆಗುತ್ತದೆ. ಪ್ರತಿಭಾ ಕಾರಂಜಿಯಲ್ಲಿ ಭಾಗವಹಿದ ಎಲ್ಲಾ ಮಕ್ಕಳು ನಮ್ಮವರು, ನಮ್ಮ ಶಾಲೆ ಅವರು , ತುಂಬಾ ಬೇಕಾದವರು ಎಂದು ತೀರ್ಪುಗಾರರು ಭೇದಭಾವ ಮಾಡಬಾರದು. ಎಲ್ಲಾರಿಗೂ ನ್ಯಾಯಯುತ ತೀರ್ಪು ನೀಡಬೇಕು ಎಂದು ಖಡಕ್ ಸೂಚನೆ ನೀಡಿದರು.
ನೂತನ ಶಾಲಾ ಕೊಠಡಿ ಉದ್ಘಾಟನೆ: ಹಲವು ದಿನಗಳಿಂದ ಶಾಲಾ ಕೊಠಡಿಗೆ ಮನವಿ ಮಾಡಿದ್ದರು‌. ನಾನು ಡಿಎಂಎಫ್ ಅನುದಾನದಲ್ಲಿ  ನನ್ನ ಕ್ಷೇತ್ರದಲ್ಲಿ ಶಾಲೆಗಳ ನೂತನ ಕೊಠಡಿ ನಿರ್ಮಾಣಕ್ಕೆ 18 ಕೋಟಿ ಹಣ ನೀಡಿದ್ದೇನೆ‌. ಶಾಲೆಗಳ ಕೊಠಡಿಗೆ ಒಟ್ಟು 18 ಕೋಟಿ ನೀಡಿದ್ದೇನೆ‌. ಕಡ್ಲೆಗುದ್ದು ಗ್ರಾಮದಲ್ಲಿ ಶಾಲಾ ಕೊಠಡಿ ತುರ್ತಾಗಿ ಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದರಿಂದ  ಪ್ರಾಥಮಿಕ ಶಾಲೆ ಕೊಠಡಿಗೆ 32 ಲಕ್ಷ ನೀಡಿದ್ದು 3 ನೂತನ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಇನ್ನು ಒಂದು ಕೊಠಡಿ ಅಗತ್ಯ ಇದೆ ಎಂದು ತಿಳಿಸಿದ್ದು ಮುಂದಿನ ದಿನದಲ್ಲಿ ಅನುದಾನ ಲಭ್ಯತೆ ನೋಡಿಕೊಂಡು ನೀಡುತ್ತೇನೆ ಎಂದು ತಿಳಿಸಿದರು.
ಈ‌ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೊನ್ನಮ್ಮ, ಉಪಾಧ್ಯಕ್ಷ ಮಂಜಣ್ಣ,
ಬಿಇಓ ವಿ.ತಿಪ್ಪೇಸ್ವಾಮಿ,  ಗ್ರಾಮ ಪಂಚಾಯತಿ ಸದಸ್ಯರಾದ ಕುಮಾರ್, ತಿಪ್ಪೇಸ್ವಾಮಿ, ಶಿಕ್ಷಣ ಇಲಾಖೆಯ ಜಯಣ್ಣ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂ.ಆರ್.ನಾಗರಾಜ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ತಿಮ್ಮಾರೆಡ್ಡಿ , ರಾಜ್ಯ ಪ್ರಶಸ್ತಿ ಪುರಸ್ಕೃತ ಮತ್ತು ಆಂಜನೇಯ ಶಾಲೆ ಮುಖ್ಯಶಿಕ್ಷಕರ ಮಹೇಶ್  ಸೇರಿ ಎಲ್ಲಾ ಶಾಲೆಯ ಮಕ್ಕಳು,  ಶಿಕ್ಷಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *