ನಗರೋತ್ಥಾನ ಹಂತ 4 ರ ಕಾಮಗಾರಿಗೆ ಗುದ್ದಲಿ ಪೂಜೆ

ಜಿಲ್ಲಾ ಸುದ್ದಿ

ಹೊಳಲ್ಕೆರೆ ಪಟ್ಟಣದಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4ರ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಎಂ ಚಂದ್ರಪ್ಪ

ಹೊಳಲ್ಕೆರೆ ಪುರಸಭಾ ವ್ಯಾಪ್ತಿಯಲ್ಲಿ ಮಾನ್ಯ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಯೋಜನೆ ಹಂತ-4ರ ರೂ 10.00 ಕೋಟಿ ಅನುದಾನದಲ್ಲಿ ಮಂಜೂರಾದ ಪ್ಯಾಕೇಜ್ -1ರ ರಸ್ತೆ ಹಾಗೂ ಚರಂಡಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪಟ್ಟಣದ ಗಣಪತಿ ರಸ್ತೆಜಾಮಿಯಾ ಮಸೀದಿ ಹತ್ತಿರ ಹಾಗೂ ರಾಮಪ್ಪ ಬಡಾವಣೆಯಲ್ಲಿ ಹೊಳಲ್ಕೆರೆ ಕ್ಷೇತ್ರದ ಶಾಸಕರಾದ ಎಂ ಚಂದ್ರಪ್ಪನವರು ಗುದ್ದಲಿ ಪೂಜೆ ನೆರವೇರಿಸಿ ರೂ 265.00 ಲಕ್ಷ ಪ್ಯಾಕೇಜ್ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರುಹೊಳಲ್ಕೆರೆ ಪಟ್ಟಣಕ್ಕೆ ನಗರೋತ್ಥಾನ ಹಂತ-4ರ ಯೋಜನೆಯಡಿ ರೂ 10.00 ಕೋಟಿ ಮಂಜೂರು ಮಾಡಿಸಿದ್ದು ಹೊಳಲ್ಕೆರೆ ಪಟ್ಟಣದ ರಸ್ತೆಚರಂಡಿಬೀದಿ ದೀಪಕುಡಿಯುವ ನೀರುಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಜನಾಂಗದವರ ಕಾರ್ಯಕ್ರಮಗಳುಇತರೆ ಬಡಜನರ ಕಲ್ಯಾಣ ಕಾರ್ಯಕ್ರಮಗಳು ಹಾಗೂ ವಿಶೇಷ ಚೇತನರು ಒಳಗೊಂಡಂತೆ ಎಲ್ಲ ವರ್ಗದವರನ್ನೂ ಪರಿಗಣಿಸಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಹೊಳಲ್ಕೆರೆ ತಾಲೂಕಿನ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಿವನಕೆರೆಯಿಂದ ತಾಲ್ಲೂಕಿನ ಕೆರೆಗಳಿಗೆ ನೀರು ಸರಬರಾಜು ಮಾಡುವ ಕಾಮಗಾರಿ ಭರದಿಂದ ಸಾಗಿದೆ. ರೂ 10.00 ಕೋಟಿ ವೆಚ್ಛದಲ್ಲಿ ಹೊಳಲ್ಕೆರೆ ಪುರಸಭಾ ಕಟ್ಟಡ ನಿರ್ಮಾಣ ಮಾಡಲಾಗುತ್ತಿದ್ದುಇನ್ನೂ ರೂ5 ಕೋಟಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಪೀಠೋಪಕರಣ ಒಳಗೊಂಡಂತೆಒಳಾಂಗಣ ಕೆಲಸಗಳನ್ನು ಕೈಗೊಳ್ಳಲಾಗುವುದುಸುಸಜ್ಜಿತ ನೂತನ ಮಿನಿ ವಿಧಾನ ಸೌಧ ಕಟ್ಟಡ ಸಹ ನಿರ್ಮಾಣ ಮಾಡಲಾಗುತ್ತಿದೆ ಎಂಬುದಾಗಿ ತಿಳಿಸುತ್ತಾ ತಮ್ಮ ಕ್ಷೇತ್ರಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ತಿಳಿಸಿದರು.

 

 

 

ಸದಸ್ಯರಾದ ಬಿ ಎಸ್ ರುದ್ರಪ್ಪನವರು ಮಾತನಾಡಿ ಶಾಸಕರಾದ ಚಂದ್ರಪ್ಪನವರುಕ್ಷೇತ್ರದ ಜನತೆಗೆ ಉತ್ತಮ ಅಭಿವೃದ್ಧಿ ಕಾರ್ಯಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಶ್ಲಾಘಿಸಿದರು. ಸದಸ್ಯರಾದ ಮುರುಗೇಶ್ ಮಾತನಾಡಿ ಮಾನ್ಯ ಶಾಸಕರು ಹೊಳಲ್ಕೆರೆ ಪಟ್ಟಣದ ಅಲ್ಪ ಸಂಖ್ಯಾತ ವರ್ಗದವರಿಗೆಂದೇ ರೂ 2.60 ಕೋಟಿ ಅನುದಾನ ಮಂಜೂರು ಮಾಡಿಸಿದ್ದುಈ ಅನುದಾನದಲ್ಲಿ ಗೃಹ ನಿರ್ಮಾಣ ಹಾಗೂ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದ್ದು ಎಲ್ಲಾ ಅಲ್ಪ ಸಂಖ್ಯಾತ ಸಮುದಾಯವರೂ ಸಹ ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು. ಮತ್ತೋರ್ವ ಪುರಸಭೆ ಸದಸ್ಯ ಸೈಯದ್ ಸಜೀಲ್ ಮಾತನಾಡಿಪಟ್ಟಣದ ಕರೆಕಲ್ಲು ದಿಬ್ಬದ ಪ್ರದೇಶದಲ್ಲಿ ಮೇಲ್ಮಟ್ಟದ ಜಲಸಂಗ್ರಹಾಗಾರ ನಿರ್ಮಾಣ ಮಾಡಿದರ ಪರಿಣಾಮವಾಗಿಪೈಪ್ ಲೈನ್ ಕಾಮಗಾರಿ ನಿರ್ವಹಿಸಲು ರಸ್ತೆ ಅಗೆದ ಕಾರಣ 11ನೇ ವಾರ್ಡ್ನಲ್ಲಿ ರಸ್ತೆಗಳೆಲ್ಲಾ ಹಾಳಾಗಿದ್ದವು. ಈ ಬಗ್ಗೆ ನಾನು ಶಾಸಕರಲ್ಲಿ ವಿನಂತಿಸಿಕೊಂಡಾಗ ನಾನು ಸದಸ್ಯನಾಗಿರುವ 11ನೇ ವಾರ್ಡ್ ನಲ್ಲಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿಕೊಟ್ಟಿದ್ದಾರೆನನ್ನ ವಾರ್ಡ್ ಜನತೆ ಪರವಾಗಿ ನಾನು ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಎಂದರು. ಉಪಾಧ್ಯಕ್ಷರಾದ ಕೆ ಸಿ ರಮೇಶ್ ಮಾತನಾಡಿ ಪಟ್ಟಣದ ಮಸೀದಿಗಳಿಗೆ ಮಾನ್ಯ ಶಾಸಕರು ಗ್ರಾನೈಟ್ ಅಳವಡಿಸಿಕೊಟ್ಟಿದ್ದಾರೆಕೊಳವೆ ಬಾವಿಗಳನ್ನು ಕೊರೆಯಿಸಿ ನೀರಿನ ಸೌಲಭ್ಯ ಒದಗಿಸಿದ್ದಾರೆ. ಸರ್ವಧರ್ಮೀಯರನ್ನು ಸರಿ ಸಮಾನವಾಗಿ ಕಾಣುವ ಸಹೃದಯಿ ನಮ್ಮ ಶಾಸಕರು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುರಸಭೆ ಅಧ್ಯಕ್ಷ ಆರ್ ಎ ಅಶೋಕ್ ಮಾತನಾಡಿಹೊಳಲ್ಕೆರೆ ಕ್ಷೇತ್ರವು ಶಾಸಕರಾದ ಚಂದ್ರಪ್ಪನವರ ಅವಧಿಯಲ್ಲಿ ಅತೀ ಕಡಿಮೆ ಸಮಯದಲ್ಲಿ ಹೆಚ್ಚಿನ ಪ್ರಗತಿ ಕಾಣುವಂತೆ ಮಾಡಿದ್ದಾರೆ. ಹೊಳಲ್ಕೆರೆ ಪಟ್ಟಣದ ಚಿತ್ರಣವನ್ನೇ ಬದಲಾಯಿಸಿಅತ್ಯುತ್ತಮ ಜನಪರ ಕಾರ್ಯಕ್ರಮಗಳನ್ನುಅಭಿವೃದ್ಧಿ ಕೆಲಸಗಳನ್ನು ಅವರು ಮಾಡುತ್ತಿದ್ದಾರೆ. ಇಂತಹ ಶಾಸಕರು ನಾನು ಅಧ್ಯಕ್ಷನಾಗಿರುವ ಅವಧಿಯಲ್ಲಿ ದೊರೆತಿರುವುದು ನನ್ನ ಸೌಭಾಗ್ಯಪಟ್ಟಣದ ಜನತೆಯ ಪರವಾಗಿ ನಾನು ಅವರಿಗೆ ನನ್ನ ಧನ್ಯವಾದಗಳನ್ನು ಸಮರ್ಪಿಸುತ್ತಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೊಳಲ್ಕೆರೆ ಪುರಸಭೆ ಅಧ್ಯಕ್ಷ ಆರ್ ಎ ಅಶೋಕ್ ವಹಿಸಿಕೊಂಡಿದ್ದರು. ಹೊಳಲ್ಕೆರೆ ಪುರಸಭೆ ಉಪಾಧ್ಯಕ್ಷರಾದ ಕೆ ಸಿ ರಮೇಶ್ಸದಸ್ಯರುಗಳಾದ ಬಿ ಎಸ್ ರುದ್ರಪ್ಪಸೈಯದ್ ಸಜೀಲ್ಪಿ ಹೆಚ್ ಮುರುಗೇಶ್ಸೈಯದ್ ಮನ್ಸೂರ್ಪಿ ಆರ್ ಮಲ್ಲಿಕಾರ್ಜುನ್ಹೆಚ್ ಆರ್ ನಾಗರತ್ನ ವೇದಮೂರ್ತಿಶಬೀನ ಅಶ್ರಫುಲ್ಲಾಸುಧಾ ಬಸವರಾಜ್ಡಿ ಎಸ್ ವಿಜಯ ನಾಮ ನಿರ್ದೇಶಿತ ಸದಸ್ಯರಾದ ಕವಿತಾ ರವಿಕೆ ಆರ್ ರಾಜಪ್ಪಶೀಲಾ ಪ್ರವೀಣ್ಹೊಳಲ್ಕೆರೆ ಪುರಸಭೆ ಮುಖ್ಯಾಧಿಕಾರಿ ಎ ವಾಸಿಂಅಭಿಯಂತರರಾದ ಎನ್ ಪಿ ವೆಂಕಟೇಶುಲುನಾಗಭೂಷಣ್ಮಹಮದ್ ಶೌಕತ್ ಅಲಿದೇವರಾಜ್ಕಿಶೋರ್ನೂರ್ ಅಹಮದ್ ಒಳಗೊಂಡಂತೆ ಪುರಸಭಾ ಸಿಬ್ಬಂದಿಗಳುಕಾಮಗಾರಿಯ ಗುತ್ತಿಗೆದಾರರುಪಟ್ಟಣದ ನಾಗರಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *