ಸಾದರಹಳ್ಳಿ ಕೆರೆಗೆ ಭದ್ರಾ ಹಿನ್ನೀರು ಹರಿಯುತ್ತದೆ

ಜಿಲ್ಲಾ ಸುದ್ದಿ

 ಪ್ರಕೃತಿ ಮನಸ್ಸು ಮಾಡಿದರೆ ಸುಭಿಕ್ಷ ಕಾಲ, ಸಾದರಹಳ್ಳಿ ಕೆರೆಗೆ ತುಂಗಾ ಭದ್ರ ಹಿನ್ನೀರು ಯೋಜನೆಯಲ್ಲಿ ನೀರು ಹರಿಯುತ್ತದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. 
ತಾಲೂಕಿನ ಸಾದರಹಳ್ಳಿ ಗ್ರಾಮದಲ್ಲಿ ಸಾದರಹಳ್ಳಿ ಕೆರೆಗೆ  ಗ್ರಾಮಸ್ಥರು, ರೈತರು, ಕೆರೆ ಬಳಕೆದಾರರ ಸಂಘದವರು ಸಮ್ಮುಖದಲ್ಲಿ  ಬಾಗಿನ ಅರ್ಪಿಸಿ ಮಾತನಾಡಿದರು.
ಕಳೆದ 32 ವರ್ಷಗಳಿಂದ ಸಾದರಹಳ್ಳಿ ಕೆರೆ ತುಂಬಿರಲಿಲ್ಲ. ಕಳೆದ ಹಲವು ತಿಂಗಳ ಹಿಂದೆ ಸುರಿದ ಮಳೆಗೆ ಸಾದರಹಳ್ಳಿ ಸುತ್ತಮುತ್ತಲಿನ ಎಲ್ಲಾ  ಚಕ್  ಡ್ಯಾಂ ಗಳು ಮತ್ತು ಸಾದರಹಳ್ಳಿ ಗ್ರಾಮದಲ್ಲಿ ಸಾದರಹಳ್ಳಿ ಕೆರೆ ತುಂಬಿ ಕೊಡಿ ಬಿದ್ದಿರುವುದರಿಂದ ಗ್ರಾಮಸ್ಥರ ಜೊತೆ ಬಾಗಿನ ಅರ್ಪಿಸಿದ್ದೇನೆ. ಈ ಕೆರೆ ಹತ್ತಾರಯ ಹಳ್ಳಿಗಳ ಅಂತರ್ಜಲ ಹೆಚ್ಚಿಸಲು ಮತ್ತು ನೀರಾವರಿಗೆ ರೈತರಿಗೆ ಸಹಾಕಾರಿಯಾಗಲಿದೆ.
ಚಿತ್ರದುರ್ಗ ಜಿಲ್ಲೆ ಬರಗಾಲದಿಂದ ಕೂಡಿದ ಸಮಯವನ್ನು ನಾವು 70 ವರ್ಷಗಳಿಂದ ನೋಡಿದ್ದು ಬರಗಾಲ ಕಳಚಿ ಸಮೃದ್ಧ ಮಳೆಯಿಂದ ನೀರಾವರಿಗೆ ಒತ್ತ ನೀಡುತ್ತಿದ್ದಾರೆ. ವಾಣಿವಿಲಾಸ ಸಾಗರ  ಮೈ ತುಂಬಿ ಹರಿಯುತ್ತಿದ್ದು  ಚಿತ್ರದುರ್ಗ, ಮೊಳಕಾಲ್ಮುರು, ಹಿರಿಯೂರು, ಸಿರಾ, ಹೊಳಲ್ಕೆರೆ, ರಾಯದುರ್ಗ,ಚಳ್ಳಕೆರೆ ಸೇರಿ ಅನೇಕ ತಾಲೂಕುಗಳ ಅಂತರ್ಜಲ ಮಟ್ಟ ಹೆಚ್ಚಿದ್ದು  ಮಳೆ ಕಡಿಮೆ ಆಗಿರುವ ಕಡೆಗಳಲ್ಲಿ ಸಹ ಅಂತರ್ಜಲದಿಂದ ಕೆರೆ ಕಟ್ಟೆಗಳು ತುಂಬಿರುವುದು ನಾವು ನೋಡುತ್ತಿದ್ದೇವೆ ಎಂದರು.
ಚಿಕ್ಕಪುರ, ಲಕ್ಷ್ಮಿಸಾಗರ, ಸಾದರಹಳ್ಳಿ, ಸೀಬಾರ, ಹಾಲಘಟ್ಟ ಸೇರಿ ಎಲ್ಲಾ ಹಳ್ಳಿಗೆ ಸೇರಿ ಒಟ್ಟು 25-30 ಚಕ್ ಡ್ಯಾಂ ನಿರ್ಮಾಣ ಮಾಡಿದ್ದು ಬಹು ದಿನಗಳ ಕಾಲ ನೀರು ನಿಂತು ಬೊರವೆಲ್ ಗಳಿಗೆ ಅನುಕೂಲವಾಗುತ್ತದೆ. ಎಲ್ಲಾ ಕಡೆಗಳಲ್ಲಿ  ಕೆರೆ ಇಲ್ಲದೆ  ಇರುವುದನ್ನು ಕಂಡು ಅಂತಹ ಸ್ಥಳ ಗುರುತಿಸಿ ಚಕ್ ಡ್ಯಾಂ ಹಾಕಿದ್ದೇನೆ.
ಮಳೆ‌ ಹೆಚ್ಚಾಗಿ ಬೆಳೆಗಳು ನಷ್ಟವಾಗಿರಬಹುದು, ಆದರೆ ನೈಸರ್ಗಿಕವಾಗಿ ಕೆಲವೊಮ್ಮೆ ಇಂತಹ ಪ್ರಕೃತಿ ಮುನಿಸು ಸಹಜ‌ ಅದಕ್ಕೆ ಸರ್ಕಾರದಿಂದ ಪರಿಹಾರ ಸಹ ನೀಡಲಾಗುತ್ತಿದೆ. ತಾಲೂಕಿನಾದ್ಯಂತ ಮುಂದಿನ ನಾಲ್ಕಾರು ವರ್ಷ ನೀರಾವರಿಗೆ ಮತ್ತು ಕುಡಿಯುವ ನೀರಿಗೆ ಸಮಸ್ಯೆ ಅಗಲಾರದು. ಆದರೆ ನೀರನ್ನು ಸಂರಕ್ಷಣೆ ಮಾಡುವ ಕೆಲಸ ಎಲ್ಲಾರೂ ಮಾಡಬೇಕು ಎಂದು ಸಲಹೆ ನೀಡಿದರು.
ಸಾದರಹಳ್ಳಿ ಕೆರೆ ತುಂಗಭದ್ರಾ ಹಿನ್ನೀರು ಯೋಜನೆ ಮೂಲಕ‌ ಕೆರೆ  ಪೈಪ್ ಲೈನ್  ನೀರುಣಿಸುತ್ತಾರೆ. ಪ್ರತಿ ವರ್ಷ ನೀರನ್ನು ಬಿಡುವುದು ಈ ಭಾಗದ ರೈತರಿಗೆ ಹೆಚ್ಚು ಅನುಕೂಲ ಎಂದರು. ವಿಶೇಷವಾಗಿ  ಭದ್ರಾ ಯೋಜನೆಯಲ್ಲಿ ಬಿಟ್ಟು ಹೋಗಿದ್ದ ಹತ್ತು ಕೆರೆಗಳನ್ನು ಸೇರಿಸಿದ್ದು ಆ ಹತ್ತು ಕೆರೆಯಲ್ಲಿ ಸಾದರಹಳ್ಳಿ ಕೆರೆ ಒಂದಾಗಿದ್ದು ಭದ್ರಾ ನೀರನ್ನು  ಹರಿಸಲಾಗುತ್ತದೆ. ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ನಾನು ಶಕ್ತಿ ಮೀರಿ ಶ್ರಮಿಸಿದ್ದು ಚಿಕ್ಕ ಪುಟ್ಟ ಕೆಲಸಗಳು ಬಾಕಿ ಇದ್ದು ಮುಂದಿನ ದಿನದಲ್ಲಿ ಅನುದಾನ ವ್ಯವಸ್ಥೆ ಮಾಡಿಕೊಂಡ ಮಾಡಲಾಗುತ್ತದೆ. ಸುಮ್ಮನೆ ಚುನಾವಣೆ ಸಮಯ ಅಂತ ಆಶ್ವಾಸನೆ ನೀಡಲ್ಲ. ಹಣ ಬಂದತೆ ಖಂಡಿತ ನೀಡುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೆರೆ ಬಳಕೆದಾರರ  ಸಂಘದ ಅಧ್ಯಕ್ಷ  ಮಂಜಣ್ಣ,ಮಾರಘಟ್ಟ ಗ್ರಾಮ ಪಂಚಾಯತಿ ಅಧ್ಯಕ್ಷ ದೇವರಾಜ್, ಸದಸ್ಯ ಚಿಕ್ಕಣ್ಣ,ಮುಖಂಡರಾದ ಮಲ್ಲಿಕಾರ್ಜುನ,ಮಂಜಣ್ಣ, ತಿಪ್ಪೇಸ್ವಾಮಿ, ನೀರಯ್ಯನಹಟ್ಟಿ ಅನ್ವರ್ ಇದ್ದರು.

 

 

 

Leave a Reply

Your email address will not be published. Required fields are marked *