13ಕೋಟಿ ಕಾಮಗಾರಿ ಕೊಡದಿದ್ದಕ್ಕೆ ಇಂತಹ ಆರೋಪ ಮಾಡಲಾಗಿದೆ: ಶಾಸಕ ತಿಪ್ಪಾರೆಡ್ಡಿ

ರಾಜ್ಯ

ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿನ ಕೆ ಹೆಚ್ ಎಸ್ಡಿ ಯೋಜನೆಯ 13 ಕೋಟಿ ಕಾಮಗಾರಿಯ ಟೆಂಡರ್ ಮಾಡಿಸಿಕೊಡದೆ ಇದ್ದಕ್ಕೆ ಇಬ್ಬರ ಮಧ್ಯೆ ಮೌಕಿಕ ಮಾತುಕತೆ ನಡೆದಿದ್ದು, ಈಗ ದ್ವೇಷದಿಂದ ನನ್ನ ಮೇಲೆ ಲಂಚದ ಆರೋಪವನ್ನು ಹೊರಿಸಲಾಗಿದೆ ಎಂದು ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಹೇಳಿದರು.

 

 

 

ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ನನ್ನ ಮೇಲೆ ಆರೋಪ ಮಾಡಿರುವ ಕಂಟ್ರಾಕ್ಟರ್ ಮಂಜುನಾಥ್ ಅವರಿಗೂ ನಮಗೂ‌ ಕಳೆದ 10 ವರ್ಷಗಳಿಂದ. ಕಾಮಗಾರಿಗಳ ವಿಚಾರಕ್ಕೆ ಮಾತುಕತೆ ನಡೆಯುತ್ತಿತ್ತು. ಅವರು ಹೇಳಿದ್ದೇ ಫೈನಲ್ ಯಾವುದೇ ಕಾಮಗಾರಿ ಮಾಡಿದರೂ ಅವರು ಹೇಗೆ ಮಾಡಿದರೂ ಕೂಡ ಅದರ ಬಗ್ಗೆ ಯಾರೂ ಮಾತನಾಡುವಂತಿಲ್ಲ, ಅಧಿಕಾರಿಗಳಿಗೆ ನಾನು ಗುತ್ತಿಗೆದಾರ ಜಿಲ್ಲಾ ಸಂಘದ ಅಧ್ಯಕ್ಷ ಎಂದು ಬೆದರಿಸ್ತಾನೆ, ನಮ್ಮ ಸರ್ಕಾರ ಇಲ್ಲದಾಗ ಸಣ್ಣ ಪುಟ್ಟ ಗುತ್ತಿಗೆದಾರರು ಕೆಲಸ ಕೇಳಿದರೆ ತಾರತಮ್ಯ ಮಾಡುತ್ತಾರೆ. ನಮ್ಮ ಬೆಂಬಲಿಗರು ಕೆಲಸ ಕೇಳಿದರೆ ಯಾವ ಬೆಂಬಲಿಗರು ಯಾವ ಶಾಸಕ ಯಾವ ಪಕ್ಷ ಎಂದು ಕೇಳುತ್ತಾನೆ, ಸ್ಥಳೀಯ ಉಚ್ಛಂಗಿ ಯಲ್ಲಮ್ಮ ದೇವಸ್ಥಾನ ಹಾಗೂ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಎಷ್ಟು ಹಣ ಬಿಡುಗಡೆ ಆಗಿತ್ತು. ಕಾಮಗಾರಿ ಯಾವ ರೀತಿ ನಡೆದಿದೆ ಎಂದು ನೀವೆ ನೋಡಬೇಕು ಎಂದರು. ಯಾವುದೇ ಕಾಮಗಾರಿಗೆ ಸಂಬಂಧಿಸಿದಂತೆ ತಾನೇ ಸುಪ್ರೀಂ ಎಂಬಂತೆ ವರ್ತಿಸುತ್ತಾನೆ, ಅಧ್ಯಕ್ಷ ಎಂದು ದೌರ್ಜನ್ಯ ಮಾಡುತ್ತಾನೆ. ರಸ್ತೆ ಕಾಮಗಾರಿ ಮಾಡುವಾಗ ಯುಜಿಡಿ ಪೈಪ್ ಲೈನ್ ಹೊಡೆದು ಹಾಕಿದ್ದ ಅದನ್ನು ಪ್ರಶ್ನೆ ಮಾಡಿದ್ದು, ತಪ್ಪಾ? ಇಂತಹ ಲೋಪ ಹೇಳಿದಾಗ ನಾನು ಅಷ್ಟು ದುಡ್ಡು ಕೊಟ್ಟೆ ಇಷ್ಟು ಕೊಟ್ಟೆ ಎಂದು ಆರೋಪ ಮಾಡುತ್ತಾನೆ. ರಿಯಲ್ ಎಸ್ಟೇಟ್ ವ್ಯಾಪಾರ ಮಾಡಲು ನನ್ನ ಬಳಿ ಬಂದಿದ್ದ ಅದನ್ನು ನಾನು ತಿರಸ್ಕರಿಸಿದ್ದೆ ಇದೇ ಕಾರಣಕ್ಕೆ ದ್ವೇಷದಿಂದ ಮಾತನಾಡುತ್ತಾನೆ. ಆತನ ಗುಣವೇ ಹೆದರಿಸಿ ಕೆಲಸ ಮಾಡುವುದು, ಪಿಡಬ್ಲಿಯುಡಿ ಸಚಿವರ ಎದುರಲ್ಲೆ ಆತ ನನ್ನ ವಿರುದ್ಧ ಆರೋಪ‌ ಮಾಡಿದಾಗ ಸಚಿವರು ಅವನ ಮಾತುಗಳನ್ನು ನಿಲ್ಲಿಸುವಂತೆ ಹೇಳಿದ್ದರು, ವಯುಕ್ತಿಕ ದ್ವೇಷದಿಂದ ಹೀಗೆ ಆರೋಪ ಮಾಡಿದ್ದಾ‌ನೆ ಎಂದು ಅವರು ಹೇಳಿದರು.

Leave a Reply

Your email address will not be published. Required fields are marked *