ನದಿ‌ ಪಾತ್ರದ ಜನ ಯಾರೂ ಹೆದರ ಬೇಡಿ ತಾಲೂಕು ಆಡಳಿತ ಅಭಯ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನ ಆಲಿಗೊಂಡನಹಳ್ಳಿ ಬೊಮ್ಮನಕುಂಟೆ ಕೊನಿಗರಹಳ್ಳಿ ಗ್ರಾಮದ ಸಾರ್ವಜನಿಕರು ಯಾವುದೇ ಕಾರಣಕ್ಕೂ ಆತಂಕ ಪಡುವ ಅಗತ್ಯವಿಲ್ಲ ಸರ್ಕಾರ ಮತ್ತು ಇಡೀ ಆಡಳಿತ ವ್ಯವಸ್ಥೆ ನಿಮ್ಮ ಜೊತೆಯಲ್ಲಿ ಇರುತ್ತದೆ  ಎಂದು ತಹಸೀಲ್ದಾರ್ ಎನ್ ರಘುಮೂರ್ತಿ ಹೇಳಿದರು ಅವರು ಇಂದು  ಹಾಲಿ ಗೊಂಡನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ತದನಂತರ ಸೂರನಹಳ್ಳಿ ಕೊನಿಗನಹಳ್ಳಿ ಮತ್ತು ಬೊಮ್ಮನ ಕುಂಟೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.

 

 

 

ಇತ್ತೀಚಿನ ಮಳೆಯಿಂದ ವೇದಾವತಿ ನದಿಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಎರಡು ಮೂರು ಮನೆಗಳಿಗೆ ಸ್ವಲ್ಪ ನೀರು ನುಗ್ಗಿದೆ ಹಾಗಾಗಿ ಇಂತಹ ಮನೆಗಳಲ್ಲಿರುವಂತ ಸಾರ್ವಜನಿಕರನ್ನು ತಕ್ಷಣ ಶಾಲೆಗಳಿಗೆ ಅಳಂತರಿಸಲಾಗುವುದು ಮುಂದೆಯೂ ಕೂಡ ವಿವಿ ಸಾಗರ ಕೋಡಿ ಬೀಳುವ ಅಂತಕ್ಕಿರುವುದರಿಂದ ಈ ನೀರು ಸೇರಿದರೆ ನೀರಿನ ಪ್ರಮಾಣ ಹೆಚ್ಚಾಗಬಹುದು ಮಾನ್ಯ ಜಿಲ್ಲಾಧಿಕಾರಿಗಳು ಮತ್ತು ಶಾಸಕರ ಆಸೆಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಈ ರೀತಿ ನೀರು ಹೆಚ್ಚಾದಲ್ಲಿ ಎಷ್ಟು ಕುಟುಂಬಗಳು ಮತ್ತು ಎಷ್ಟು ಜನರಿಗೆ ಪುನರ್ ವಸತಿ ಕಲ್ಪಿಸಬಹುದು ಎಂಬ ಬಗ್ಗೆ ಸಂಬಂಧಿಸಿದ ಪಿಡಿಒ ಮತ್ತು ರಾಜಸ್ಥನಿ ರೀಕ್ಷಕರಿಗೆ ಸೂಚನೆ ನೀಡಲಾಗಿದೆ ಸದ್ಯಕ್ಕೆ ಅಂತ ಪರಿಸ್ಥಿತಿ ಏನೂ ಇಲ್ಲ ಮುಂದೆ ಈ ರೀತಿ ನೀರು ಹೆಚ್ಚಾದಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಇಡೀ ತಾಲೂಕ್ ಆಡಳಿತ ಸಾರ್ವಜನಿಕರ ಜೊತೆಗಿದ್ದು ನೆರವು ನೀಡುವುದರ ಜೊತೆಗೆ ಧೈರ್ಯ ಮತ್ತು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದೆ ಯಾವುದೇ ಸಾರ್ವಜನಿಕರು ಏನೇ ತೊಂದರೆ ಇದ್ದರೂ ತಕ್ಷಣ ನನ್ನನ್ನು ಸಂಪರ್ಕಿಸ ಬಹುದು ಎಂದು ಹೇಳಿದರು ಈ ಸಂದರ್ಭದಲ್ಲಿ ಸೂರನಹಳ್ಳಿ ಶ್ರೀನಿವಾಸ ತಾಲೂಕ್ ಪಂಚಾಯತಿ ಸದಸ್ಯರಾದ ಗುಜ್ಜರಪ್ಪ ತಿಪ್ಪೇಸ್ವಾಮಿ ಗ್ರಾಮ ಪಂಚಾಯಿತಿ ಪಿಡಿಒ ಗುಂಡಪ್ಪ ಗ್ರಾಮ ಲೆಕ್ಕಾಧಿಕಾರಿ ಹಿರಿಯಣ್ಣ ಹಾಜರಿದ್ದರು ಮತ್ತು ಗ್ರಾಮಸ್ಥರು ಹಾಜರಿದ್ದರು

Leave a Reply

Your email address will not be published. Required fields are marked *