ವಿಶೇಷ ಚೇತನರಲ್ಲಿರುವ ಪ್ರತಿಭೆ ಗುರುತಿಸಬೇಕಾಗಿದೆ

ಜಿಲ್ಲಾ ಸುದ್ದಿ

ವಿಕಲಚೇತನರಲ್ಲಿ ಇರುವ ಶಕ್ತಿಯನ್ನು ಗುರುತಿಸಿ ಅದಕ್ಕೆ ತಕ್ಕ ಪ್ರೋತ್ಸಾಹ ನೀಡಿದರೆ ಸಾಮಾನ್ಯ ವ್ಯಕ್ತಿಗಿಂತ ಹೆಚ್ಚಿನ ರೀತಿಯಲ್ಲಿ ಸಾಧನೆಯನ್ನು ಮಾಡುತ್ತಾರೆ ಅವರಲ್ಲಿನ ಪ್ರತಿಭೆಯನ್ನು ಗುರುತಿಸುವ ಕಾರ್ಯವಾಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನಮೀನ್ ಅಭೀಪ್ರಾಯಪಟ್ಟಿದ್ದಾರೆ.
ಜಿಲ್ಲಾಡಳಿತ, ಜಿ.ಪಂ., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಕ್ಷೇತ್ರದಲ್ಲಿ ಶ್ರಮಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು, ವಿವಿದೋದ್ದೇಶ/ನಗರ/ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಇವರ ಸಹಯೋಗದೊಂದಿಗೆ ನಗರದ ಕರುವಿನಕಟ್ಟೆ ಸರ್ಕಲ್ ಬಳಿಯ ಸದ್ಗುರು ಕಬೀರಾನಂದಾಶ್ರಮ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ನಿಮ್ಮಲ್ಲಿಮ ದೇಹದ ನ್ಯೂನತೆಯನ್ನು ಮೀರಿ ಇಲ್ಲಿ ಪ್ರತಿಭೆಯನ್ನು ಪ್ರದರ್ಶನ ಮಾಡಲಾಗಿದೆ, ನಿಮಗೆ ದೇವರು ದೈಹಿಕವಾಗಿ ನೂನ್ಯತೆಯನ್ನು ನೀಡಿದರೂ ಸಹಾ ಮಾನಸಿಕವಾಗಿ ಬೇರೊಂದು ಪ್ರತಿಭೆಯನ್ನು ನೀಡಿರುತ್ತಾನೆ. ನಿಮ್ಮ ನೂನ್ಯತೆಯಿಂದ ನೀವುಗಳು ಹಿಂದೆ ಸರಿಯದೇ ಛಲದಿಂದ ಪ್ರದರ್ಶನವನ್ನು ಮಾಡಬೇಕಿದೆ. ಮಕ್ಕಳು ತಮಗೆ ಈ ರೀತಿ ಆಗಿದೆ ಎಂದು ಉತ್ಸಾಹವನ್ನು ಕಳೆದುಕೊಳ್ಳದೆ ಶಕ್ತಿವಂತರಾಗಿರಬೇಕಿದೆ. ದಿವ್ಯ ಚೇತನರ ಶಕ್ತಿ ಮನಸ್ಸಿನಿಂದಲೇ ಮುನ್ನುಗ್ಗುವ ಚೈತನ್ನವನ್ನು ಸಮಾಜ ಮತ್ತು ಸರ್ಕಾರ ನೀಡುತ್ತಿದೆ. ಇದನ್ನು ಬಳಸಿಕೊಂಡು ಮುನ್ನುಗ್ಗಬೇಕಿದೆ ಎಂದು ವಿಕಲಚೇತನರಿಗೆ ಕರೆ ನೀಡಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಪರವಾಗಿ ಕೆಲಸವನ್ನು ಮಾಡುತ್ತಿವೆ. ವಿವಿಧ ರೀತಿಯಬ ಯೋಜನೆಯನ್ನು ಅನುಷ್ಠಾನ ಮಾಡುವುದರ ಮೂಲಕ ಎಲ್ಲರಂತೆ ನೀವುಗಳು ಸಹಾ ಸಮಾಜದಲ್ಲಿ ಮುಖ್ಯವಾಹಿನಿಗೆ ಬರುವಂತಾಗಲಿ ಎಂದು ಆಶಿಸುತ್ತಿದೆ. ದೈಹಿಕವಾಗಿ ನೂನ್ಯತೆಯನ್ನು ಹೊಂದಿದ ಹಲವಾರು ಜನತೆ ವಿವಿಧ ರೀತಿಯ ಸಾಧನೆಯನ್ನು ಮಾಡಿದ್ದಾರೆ ಅವುಗಳು ನಿಮಗೆ ಸ್ಪೂರ್ತಿಯಾಗಬೇಕಿದೆ ಪೋಷಕರು ತಮ್ಮ ವಿಕಲಚೇತನ ಮಕ್ಕಳಲ್ಲಿ ಇರುವಂತ ವಿಶೇಷವಾದ ಪ್ರತಿಬೆಯನ್ನು ಗುರುತಿಸುವ ಅದನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಬೇಕಿದೆ ಆಗ ಮಾತ್ರ ಮಕ್ಕಳ ಪ್ರತಿಭೆ ಹೂರ ಬರಲು ಸಾಧ್ಯವಿದೆ ಎಂದು ನವೀನ್ ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ದಿವಾಕರ್ ಮಾತನಾಡಿ, ಈ ರೀತಿಯಾದ ಮಕ್ಕಳಲ್ಲಿನ ವಿಶೇಷವಾದ ಚೈತನ್ಯವನ್ನು ಗುರುತಿಸುವುದು ನಮ್ಮ ಕರ್ತವ್ಯವಾಗಿದೆ. ಸರ್ಕಾರವೂ ಸಹಾ ಆರ್ಥೀಕವಾಗಿ ಮತ್ತು ಭೌತಿಕವಾಗಿ ವಿವಿಧ ರೀತಿಯ ಸಹಕಾರವನ್ನು ನೀಡುತ್ತಿದೆ.ವಿಕಲ ಚೇತನರಲ್ಲಿ ವಿಶೇಷವಾದ ಚೈತನ್ಯ ಇದೆ. ಮಾನಸಿಕವಾಗಿ ದುರ್ಬಲರಾಗಿದ್ದರೂ ಅವರು ಮಾನಸಿಕವಾಗಿ ವಿಶÉೀಷವಾದ ಶಕ್ತಿಯನ್ನು ಹೊಂದಿರುತ್ತಾರೆ, ಅದನ್ನು ಗುರುತಿಸುವ ಕಾರ್ಯವಾಗಬೇಕಿದೆ. ನಮ್ಮಲ್ಲಿ ಎಲ್ಲಾ ಚನ್ನಾಗಿ ಇದ್ದೂರು ಸಹಾ ನಾವುಗಳು ಏನನ್ನು ಸಾಧನೆ ಮಾಡಲು ಆಗುತ್ತಿಲ್ಲ ಅದರೆ ವಿಕಲಚೇತನರಾಗಿದ್ದರೂ ಸಹಾ ಏನನ್ನಾದರೂ ಸಾಧನೆಯನ್ನು ಮಾಡಿ ತೋರಿಸುತ್ತಿದ್ದಾರೆ ಎಂದರು.

ವಿಕಲಚೇತನರಲ್ಲಿ ಇರುವ ವಿಶೇಷವಾದ ಚೈತನ್ಯ ದೇವರು ನೀಡಿದ ವರವಾಗಿದೆ. ಯಾರೂ ಸಹಾ ನಾವು ವಿಕಲಚೇತನರು ಎಂಬ ಭಾವನೆಯನ್ನು ಹೊಂದದೆ ಆತ್ಮಸ್ಥರ್ಯವನ್ನು ಕುಂದದೆ ಸರ್ಕಾರ ಎಲ್ಲಾ ರೀತಿಯ ಸಹಾಯವನ್ನು ಮಾಡಲು ಸಿದ್ದವಿದೆ. ದೈಹಿಕವಾಗಿ ನೀವುಗಳು ದುರ್ಬಲರಾಗಿದ್ದರೂ ಸಹಾ ಮಾನಸಿಕವಾಗಿ ಶಕ್ತಿಯನ್ನು ಹೊಂದಿರುತ್ತೀರಾ, ನಿಮ್ಮನ್ನು ನೋಡಿ ಇತರರು ಕಲಿಯಬೇಕಿದೆ ಈ ರೀತಿಯಾಗಿ ಕೇವಲ ಒಂದು ದಿನ ಮಾತ್ರ ಸೀಮೀತವಾಗಿರದೇ ದಿನ ನಿತ್ಯ ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರ ಮೂಲಕ ಸಾಮಾನ್ಯರಂತೆ ನಾವು ಸಹಾ ಎಂಬ ಭಾವನೆ ಬರಬೇಕಿದೆ ಎಂದು ದಿವಾಕರ ತಿಳಿಸಿದರು.

 

 

 

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ರವಿಶಂಕರ್ ರೆಡ್ಡಿ ಮಾತನಾಡಿ, ವಿಕಲಚೇತನರು ಸಹಾ ಸಮಾಜ ಮುಖಿಯಾಗಿ ಸ್ವಾವಲಂಬಿಗಳಾಗಬೇಕಿದೆ. ಇದು ಸಮಾಜದ ಮತ್ತು ಸರ್ಕಾರ ಚಿಂತನೆಯಾಗಿದೆ. ನೀವುಗಳುನ ಯಾರೂ ಸಹಾ ಧೃತಿಗೆಡಭಾರದು, ಜೀವನವನ್ನು ಸವಾಲ್ ಆಗಿ ಸ್ವೀಕಾರ ಮಾಡಬೇಕಿದೆ ಸಮಾಜಕ್ಕೆ ಒಳ್ಳೆಯೆ ಕೆಲಸವನ್ನು ಮಾಡಬೇಕಿದೆ. ವಿಕಲಚೇತನರಿಗೆ ವಿಶೇಷವಾದ ಕಾಳಜಿಯನ್ನು ವಹಿಸಬೇಕಿದೆ. ಇಂತಹ ಮಕ್ಕಳಿಗೆ ಜನ್ಮ ನೀಡಿದ್ದೇವೆ ಎಂದು ತಾಯಂದಿರು ನೋಂದಕೊಳ್ಳಭಾರದು ಅಧಿಕಾರಿಗಳು ನಿಮ್ಮ ಸೇವೆಯನ್ನು ಮಾಡಲು ಸದಾ ಸಿದ್ದರಿದ್ದಾರೆ ಎಂದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ ಪ್ರಸ್ತಾವಿಕವಾಗಿ ಮಾತನಾಡಿ, ಸರ್ಕಾರ ವಿಕಲಚೇತನರಿಗಾಗಿ ವಿವಿಧ ರೀತಿಯ ಸೌಲಭ್ಯವನ್ನು ನೀಡುತ್ತಿದೆ. ಇದರಲ್ಲಿ ವಿಶಿಷ್ಟ ಗುರುತಿನ ಚೀಟಿ, ಮಾಸಿಕ ನಿರ್ವಹಣಾ ಭತ್ಯೆ, ವಿದ್ಯಾರ್ಥಿ ವೇತನ, ಪ್ರತಿಭಾವಂತರಿಗೆ ಪ್ರೋತ್ಸಾಹ ಧನ, ಉನ್ನತ ಶಿಕ್ಷಣ ಪಡೆಯುವವರಿಗೆ ಶುಲ್ಕ ಮರು ಪಾವತಿ, ವಿವಿಧ ವಿಕಲಚೇತನರಿಗೆ ಸಾಧನೆ ಸಲಕರಣೆ ವಿತರಣೆ, ಸ್ವಯಂ ಉದ್ಯೋಗ ಮಾಡಲು ಸಹಾಯ, ಅಂಧ ವಿದ್ಯಾರ್ಥಿಗಳಿಗೆ ಬ್ರ್ಯೆಲ್ ಕಿಟ್ ಯೋಜನೆ, ವಿಕಲಚೇತನರನ್ನು ವಿವಾಹವಾದ ಸಾಮಾನ್ಯ ವ್ಯಕ್ತಿಗೆ ಪ್ರೋತ್ಸಾಹ ಧನ, ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳಿಗೆ ಶಿಶು ಪಾಲನಾ ಭತ್ಯೆ, ಉದ್ಯೋಗದಲ್ಲಿ ಮೀಸಲಾತಿ, ವಿಕಲಚೇತನ ಸರ್ಕಾರಿ ನೌಕರರಿಗೆ ವಾಹನ ಭತ್ಯೆ, ನಿರುದ್ಯೋಗಿ ವಿಕಲಚೇತನರಿಗೆ ನಿರುದ್ಯೋಗ ಭತ್ಯೆ ಸೇರಿದಂತೆ ವಿವಿಧ ರೀತಿಯ ಸೌಲಭ್ಯವನ್ನು ನೀಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಶ್ರೀಮತಿ ಭಾರತಿ ಬಣಕಾರ್. ಜಿಲ್ಲಾ ಸಂಪರ್ಕಧಿಕಾರಿ ಕೆಂಪ ಹನುಮಯ್ಯ, ದೈಹಿಕ ಶಿಕ್ಷಕರಾದ ನೀಲಕಂಠಚಾರ್ ಭಾಗವಹಿಸಿದ್ದರು. ನಿವೃತ್ತ ದೈಹಿಕ ನಿರ್ದೇಶಕರಾದ ಜಯ್ಯಣ್ಣ ಕಾರ್ಯಕ್ರಮ ನಿರೂಪಿಸಿದರು.

 

 

Leave a Reply

Your email address will not be published. Required fields are marked *