ಪಿತೃ ವಾಕ್ಯ ಪರಿಪಾಲನೆಗೆ ರಾಜಕಾರಣಕ್ಕೆ ಬಂದ ಯುವ ರಾಜಕಾರಣಿ

ಜಿಲ್ಲಾ ಸುದ್ದಿ

ತಂದೆಯ ಮಾತನ್ನು ಸತ್ಯವನ್ನಾಗಿಸಲು , ಕೊಟ್ಟ ಮಾತನ್ನು ಈಡೇರಿಸಲು ಮುಂದೆ ಬರುವಂತ ಮಕ್ಕಳು ಅಪರೂಪ, ಆದರೆ ಇಲ್ಲೊಬ್ಬ ತಂದೆಯ ಮಗ ತಾನೂ ಬೆಳೆದು ಇತರರನ್ನು ಬೆಳೆಸಬೇಕು, ಸಮಾಜದ ಪ್ರತಿಯೊಬ್ಬರ ಪ್ರಗತಿಗೆ ಕಾರಣಿಭೂತರಾಗಬೇಕು ಎ‌ನ್ನುವ ಸ್ವಚ್ಚಂದ ಮನಸ್ಸನ್ನು ಇಟ್ಟುಕೊಂಡು ರಾಜಕಾರಣಕ್ಕೆ ಬಂದಿದ್ದಾರೆ. ನಾವು ಮಾತನಾಡಬಾರದು ನಮ್ಮ ಕೆಲಸ ಮಾತನಾಡಬೇಕು ಎಂದು ಅವರ ತಂದೆ ಹೇಳಿದಂತೆ ಅದೇ ಮಾರ್ಗದಲ್ಲಿ‌ ನಡೆಯುತ್ತಿರುವ. ಇವರ ಹೆಸರು ಎಸ್ ಆರ್ ಇಂದ್ರಜಿತ್ ನಾಯ್ಕ್ ಮೂಲತಃ ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿಯ ಎಮ್ಮನಗಟ್ಟ ಗ್ರಾಮದವರು, ಇವರು ಡಿಪ್ಲೊಮೋ ಇನ್ ಮಲ್ಟಿ‌ ಮೀಡಿಯಾ ಪಧವೀಧರರಾಗಿದ್ದಾರೆ. ಮೊದಲಿನಿಂದಲೂ ಸಮಾಜ ಸೇವೆಯ ತುಡಿತವಿಟ್ಟುಕೊಂಡಿರುವ ಇವರು ಅನೇಕ ಮಾಧ್ಯಮ ಸಂಸ್ಥೆಗಳಲ್ಲಿ‌ ಕೆಲಸ ಮಾಡಿದ್ದಾರೆ. ಅದರೇ ಅದೆಕೋ ಅವರಿಗೆ ಮಾಧ್ಯಮಗಳಲ್ಲಿ‌ ಸಮಾಜ‌ಸೇವೆ ಮಾಡಿದ್ದು, ಇದಕ್ಕಿಂತಲೂ ಹೆಚ್ಚಿನದಾಗಿ ಸಾಧಿಸಬೇಕು ಮತ್ತಷ್ಟು ಸೇವೆ ಮಾಡಬೇಕು ಎಂದು‌ ಅನಿಸಿದ್ದು , ಆಗ ಅವರು ಸಮಾಜ ಸೇವೆ ಹಾಗೂ ಜನ ಸೇವೆಗಾಗಿ ಆಯ್ಕೆ ಮಾಡಿಕೊಂಡ ಕ್ಷೇತ್ರ ಎಂದರೆ ರಾಜಕಾರಣ ಇದಕ್ಕಾಗಿ ಹುಮ್ಮಸ್ಸಿನಿಂದ. ಉತ್ಸಾಹದಿಂದ ತಮ್ಮ ಸಮೂದಾಯ ಸೇರಿದಂತೆ ಇಡೀ ಸಮಾಜದ ಅಭಿವೃದ್ದಿಯ ಹತ್ತು ಹಲವು ಯೋಜ‌ನೆಗಳನ್ನಿಟ್ಟುಕೊಂಡು, ಯುವಜನತೆಗೆ,ಮಹಿಳೆಯರು ವಿದ್ಯಾರ್ಥಿಗಳು ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸರ್ವರಿಗೂ ಉಪಯುಕ್ತವಾಗುವ ಯೋಜನೆಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಲು ಬಂದಿದ್ದಾರೆ. ಇವರು ಇದಕ್ಕಾಗಿ ಆಯ್ಕೆ ಮಾಡಿಕೊಂಡ ಕ್ಷೇತ್ರ ಹೊಳಲ್ಕೆರೆ ಎಸ್ಸಿ ಮೀಸಲು ಕ್ಷೇತ್ರವಾಗಿದ್ದು, ಪಕ್ಷೇತರರಾಗಿ‌ಕಣಕ್ಕಿಳಿಯಲು ಸಿದ್ದತೆ ಮಾಡಿಕೊಂಡು ಈಗಾಗಲೇ ಇಡೀ ಕ್ಷೇತ್ರವನ್ನು ಎರಡೆರಡು ಬಾರಿ ಸುತ್ತಾಡಿದ್ದು, ಜನರಿಗೆ ಚಿರ ಪರಿಚಿತರಾಗಿದ್ದಾರೆ. ಇಂದ್ರಜಿತ್ ನಾಯ್ಕ್ ಹೆಸರು ಕ್ಷೇತ್ರದ ಜನರ ಬಾಯಿಯಲ್ಲಿ‌ ಹರಿದಾಡುತ್ತಿದೆ. ಬಹಳಷ್ಟು ಮಹತ್ವಾಕಾಂಕ್ಷೆಗಳನ್ನು ಇಟ್ಟುಕೊಂಡು‌ ಜನತೆಗೆ ಒಳ್ಳೆಯ ಕೆಲಸ ಮಾಡಿಕೊಂಡು ಸಮಾಜದ ಬದಲಾವಣೆಯನ್ನು ಮಾಡಬೇಕು ಎಂದು‌ ಅಂದುಕೊಂಡಿರುವ ಇವರು ಎಲ್ಲಾ‌ ರಾಜಕಾರಣಿಗಳಂತಲ್ಲ, ಇವರೇ ಬೇರೆ ಇವರ ಕಾರ್ಯ ಶೈಲಿ ಚಿಂತನೆಗಳೇ ಬೇರೆಯಾಗಿವೆ.ಅದನ್ನು ಸಾಕಾರವಾಗಿಸಲು ಉತ್ಸುಕರಾಗಿ ಬರುತ್ತಿದ್ದಾರೆ. ಸದಾ ತಮ್ಮ ಬೇಳೆ ಬೇಯಿಸಿಕೊಳ್ಳಲು ಕಾಯುತ್ತಿರುವ ರಾಜಕಾರಣಿಗಳ‌ ಮಧ್ಯೆ ಸಮಾಜದ ಹಾಗೂ ಜನ ಸೇವೆಯನ್ನೆ ಗುರಿಯನ್ನಾಗಿಸಿಕೊಂಡಿರುವ ಇವರಿಗೆ ಹೊಳಲ್ಕೆರೆ ಕ್ಷೇತ್ರದ ಜನತೆಯ ಬೆಂಬಲ. ಸಿಗಬೇಕಿದೆ

 

 

 

Leave a Reply

Your email address will not be published. Required fields are marked *