ಕಳ್ಳರ ಕೈ ಚಳಕಕ್ಕೆ ಬೆಚ್ಚಿ ಬಿದ್ದ ಮಸ್ಕಲ್ ಗ್ರಾಮಸ್ಥರು

ಕ್ರೈಂ

ಚಿತ್ರದುರ್ಗ: ಮಸ್ಕಲ್ ಗ್ರಾಮದಲ್ಲಿ ಕಳ್ಳರು ತಮ್ಮ ಕೈ ಚಳಕ ತೋರಿಸಿ ಲಕ್ಷಾಂತರ ರೂಪಾಯಿ ಸೇರಿದಂತೆ ಚಿನ್ನ ಬೆಳ್ಳಿ ಒಡವೆ ದೋಚಿ ಪರಾರಿಯಾಗಿದ್ದಾರೆ.

Chitradurga serial theft

 

 

 

 

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಸರಣಿ ಕಳವು‌ ನಡೆದಿದೆ. ಮಸ್ಕಲ್ ಗ್ರಾಮದ ಶಕುಂತಲ,ಲಕ್ಷ್ಮಿದೇವಿ, ಪುಷ್ಪಮ್ಮ, ಶಿವಲಿಂಗಣ್ಣ ಹಾಗೂ ಚಂದ್ರಣ್ಣನ ಮನೆಯಲ್ಲಿ ಕಳ್ಳರು ಸರಣಿ ಕಳ್ಳತನ ಮಾಡಿದ್ದಾರೆ.Chitradurga serial theft

ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನ ಬೆಳ್ಳಿ ಒಡವೆಗಳು ಹಾಗೂ ಲಕ್ಷಾಂತರ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಪೋಲಿಸರು ಸ್ಥಳಕ್ಕೆ ಭೇಟಿ‌ ನೀಡಿ ಶ್ವಾನ ಹಾಗೂ ಬೆರಳಚ್ಚು ತಜ್ಞರಿಂದ ಪರಿಶೀಲನೆ ನಡೆಸಿದ್ದು, ಗ್ರಾಮದಲ್ಲಿ ಅನುಮಾನದ ವ್ಯಕ್ತಿಗಳು ಕಂಡು ಬಂದರೆ ಕೂಡಲೇ ಪೋಲಿಸರಿಗೆ ತಿಳಿಸಬೇಕು ಎಂದು ಗ್ರಾಮಸ್ಥರಿಗೆ ಸೂಚನೆಯನ್ನು ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಕಳ್ಳರಿಗಾಗಿ ಬಲೆಯನ್ನು‌ ಬೀಸಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *