ಪ್ರಧಾನಿ‌ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ರಾಜ್ಯ

ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಆಲೋಚನೆ ಇಲ್ಲ.ನಮಗೆ ಅನ್ಯಾಯ ಆಗಿರುವುದು ನಿಜ.ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು, ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ ಎಂದು ಮುಖ್ಯ ಮಂತ್ರಿ‌‌ ಸಿದ್ದರಾಮಯ್ಯ ತಿರುಗೇಟು‌ ನೀಡಿದರು.

ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಭಗೀರಥ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ 40 % ಕಮಿಷನ್ ಸರ್ಕಾರವೆಂದು ಆರೋಪ ಮಾಡಿದ್ದಕ್ಕೆ, ನಾಗಮೋಹನ್ ದಾಸ್ ಕಮಿಷನ್ ಮಾಡಿದ್ದೇವೆ, ದಾಖಲೆ ನೀಡಲಿ ಎಂದು ಕೆಂಪಣ್ಣ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
40% ಭ್ರಷ್ಟಾಚಾರ ಇದ್ದರೆ ದಾಖಲೆ ನೀಡಲಿ, ಅಲ್ಲದೆ ಅಧಿಕಾರಿಗಳು ಕೇಳುತ್ತಾರೆ ಎಂದಿದ್ದಾರೆ, ಅಂಥವರ ವಿರುದ್ದ ದೂರು ನೀಡಲಿ ಎಂದರು. ಕೇಂದ್ರದ ಅನುದಾನದ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವ ಆಲೋಚನೆ ಇಲ್ಲ.ನಮಗೆ ಅನ್ಯಾಯ ಆಗಿರುವುದು ನಿಜ.ನಾವು 100 ರೂ.ತೆರಿಗೆ ಕೊಟ್ಟರೆ 12 ರೂ ಮಾತ್ರ. ಇನ್ನುಳಿದ 88 ರೂ. ಕೇಂದ್ರಕ್ಕೆ ಹೋಗುತ್ತದೆ. ಗುಜರಾತ್ ಸಿಎಂ ಆದಾಗ ತೆರಿಗೆ ನಮ್ಮ ರಾಜ್ಯದ್ದು, ನಾವೇ ವಸೂಲಿ ಮಾಡುತ್ತೇವೆ ಎಂದರು. ಇದನ್ನ ಹೇಳಿದ್ದು ಮಿಸ್ಟರ್ ಮೋದಿ. ಈಗ ದೇಶ ವಿಭಜನೆ ಎಂದು ಹೇಳುತ್ತಿದ್ದಾರೆ, ಆಗ ಏನೂ ಹೇಳುತ್ತಿದ್ದರು. ನಮ್ಮ ಪಾಲು ನಾವು ಕೇಳಿದ್ರೆ, ದೇಶ ವಿಭಜನೆ ಎನ್ನುತ್ತಾರೆ.
ದೇಶ ವಿಭಜನೆ ಮಾಡಲು ಹೊರಟವರ್ಯಾರು ಮೋದಿ ಅಲ್ವ ಎಂದು ಪ್ರಶ್ನೆ ಹಾಕಿದ್ದು ?. ನಿಮಗೆ ಕನ್ನಡಿಗರಾಗಿ ಕೋಪ ಬರಲ್ವಾ ಎಂದು ರಾಜ್ಯ ಸಂಸದರನ್ನು ಮುಖ್ಯಮಂತ್ರಿ ಪ್ರಶ್ನಿಸಿದರು. ನೀವೆಲ್ಲ ಸತ್ಯ ಬರೆಯದೇ ಓದರೆ ಏನೂ ಮಾಡೋದು.
ಅಪ್ಪರ್ ಭದ್ರ ವಿಚಾರದಲ್ಲಿ ನಿರ್ಮಲ ಸೀತಾರಾಮ ಬಜೆಟ್ ನಲ್ಲಿ ಹೇಳಿದ್ದಾರೆ. 2023-24 ಬಜೆಟ್ ನಲ್ಲಿ ಅಪ್ಪರ್ ಭದ್ರಾ ಯೋಜನೆಗೆ 5300 ಕೋಟಿ ಹೇಳಿದ್ದಾರೆ. ಬಜೆಟ್ ನಲ್ಲಿ ಹೇಳಿ ಒಂದು ರೂಪಾಯಿ ಕೂಡಾ ಕೊಟ್ಟಿಲ್ಲ. 8 ಸಾವಿರ ಕೋಟಿಯಲ್ಲಿ 6 ಸಾವಿರ ಕೋಟಿ ನೀಡಿದ್ದೇವೆ. ಅಪ್ಪರ್ ಭದ್ರಾ ವಿಚಾರದಲ್ಲಿ ಡಿಕೆಶಿ ಕೇಳಿದ್ದಾರೆ.
ನಾನು ಕೂಡಾ ನೀರಾವರಿ ಮಂತ್ರಿಗಳನ್ನ ಕೇಳಿದ್ದೇನೆ.
ಕೇಳಿದ್ರೆ ಕೊಡ್ಬೇಕು ಅಂತ ಎಲ್ಲಿದೆ, ಬಜೆಟ್ ನಲ್ಲಿ ಹೇಳಿದ್ದಾರೆ. ರಾಜ್ಯಸಭಾ ಸದಸ್ಯರಾಗಿ ನಿರ್ಮಲ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿದ್ದಾರೆ. ನಮ್ಮ ರಾಜ್ಯ ಪ್ರತಿನಿಧಿಸಿದ್ದಾರೆ, ಜವಬ್ದಾರಿ ಇಲ್ವಾ ಎಂದರು ?

 

 

 

ಮಿಸಸ್ ನಿರ್ಮಲ ಸೀತರಾಮನ್ ರಿಜೆಕ್ಟ್ ಮಾಡಿದ್ದಾರೆ. ಬಸವರಾಜ್ ಬೊಮ್ಮಾಯಿ ಕೇಂದ್ರದಿಂದ 5300 ಕೋಟಿ ಬರುತ್ತದೆ ಎಂದು ಹೇಳಿದ್ದರು. ರಾಷ್ಟ್ರೀಯ ಯೋಜನೆ ಘೋಷಣೆ ಮಾಡಿದ್ದಾರೆ, ಹಣ ಬಿಡುಗಡೆ ಮಾಡಿಲ್ಲ. ಕೇಂದ್ರ ಸರ್ಕಾರದ ಮೇಲೆ ನಿಮಗೆಲ್ಲಾ ಕೋಪ ಬರ್ಬೇಕು ಎಂದರು.

 

Leave a Reply

Your email address will not be published. Required fields are marked *