ಶಿವಮೊಗ್ಗದಲ್ಲಿ‌ ಬಿಗುವಿನ ವಾತಾವರಣ 144 ಸೆಕ್ಷನ್ ಜಾರಿ

ಕ್ರೈಂ

 

BIG BREAKING

 

 

 

ಶಿವಮೊಗ್ಗದಲ್ಲಿ‌ ಸಾರ್ವಕರ್ ‌ಫ್ಲಕ್ಸ್ ವಿವಾದ ಭುಗಿಲೆದ್ದ ಆಕ್ರೋಶ: ಇಂದು ನಾಳೆ 144 ಸೆಕ್ಷನ್ ಜಾರಿ

ಸ್ವಾತಂತ್ರೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿಡಿ‌ ಸಾವರ್ಕರ್ ಅವರ ಭಾವ ಚಿತ್ರ ಫ್ಲಕ್ಸ್ ಅಳವಡಿಸಲಾಗಿತ್ತು. ಇದನ್ನು‌ ಕೆಲ‌ ಕಿಡಿಗೇಡಿಗಳು ತೆರವುಗೊಳಿಸಿದ್ದು, ವಿಷಯ ತಿಳಿದ ಪೋಲಿಸರು ಲಾಠಿ ಚಾರ್ಜ್ ಕೂಡ‌ ಮಾಡಿದ್ದಾರೆ.
ಸಾವರ್ಕರ್ ಫ್ಲಕ್ಸ್ ತೆರವುಗೊಳಿಸಿದ ಕೃತ್ಯ ಖಂಡಿಸಿ‌ ಹಿಂದೂಪರ ಸಂಘಟನೆಗಳು ಪ್ರತಿಭಟನೆ ಉಪವಾಸದ ಸತ್ಯಾಗ್ರಹ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಅಡಿಯನ್ನು ನಿಷೇಧಾಜ್ಞೆಯನ್ನು ಇಂದು‌ ಮತ್ತು ನಾಳೆ ಹಾಕಲಾಗಿದೆ.
ಶಿವಮೊಗ್ಗದ ಅಮೀರ್ ಅಹಮದ್ ವೃತ್ತದಲ್ಲಿ ಸ್ವಾತಂತ್ರ್ಯದ ಅಂಗವಾಗಿ ವಿಡಿ ಸಾವರ್ಕರ್ ಫ್ಲಕ್ಸ್ ಹಾಕಲಾಗಿತ್ತು. ವಿಷಯ ತಿಳಿದ ಕೆಲ‌ಕಿಡಿಗೇಡಿಗಳು ದಿಢೀರ್ ಬಂದು ಫ್ಲಕ್ಸ್ ತೆರವುಗೊಳಿಸಿದ್ದರು. ಪೋಲಿಸರು ಲಾಠಿ‌ ಚಾರ್ಜ್ ‌ಮಾಡಿದ್ದರು, ಇನ್ನು ಹಿಂದೂ‌ ಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಧರಣಿ‌ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ಥಳಕ್ಕೆ‌ ಭೇಟಿ‌ ನೀಡಿದ ಲಕ್ಷ್ಮಿ‌ಪ್ರಸಾದ್ ಪರಿಶೀಲಿಸಿದರು. ಬಿಗುವಿನ ವಾತಾವರಣ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ‌ ಇಂದು ಮತ್ತು ನಾಳೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

Leave a Reply

Your email address will not be published. Required fields are marked *