ಬೇಡರೆಡ್ಡಿ ಹಳ್ಳಿ ಸಮಸ್ಯೆ ಮುಕ್ತ ಗ್ರಾಮಕ್ಕೆ ಆಯ್ಕೆ

ಜಿಲ್ಲಾ ಸುದ್ದಿ

ಬೇಡರೆಡ್ಡಿ ಹಳ್ಳಿ ಗ್ರಾಮ ಸಮಸ್ಯೆ ಮುಕ್ತ ಗ್ರಾಮಕ್ಕೆ‌ ಆಯ್ಕೆ ಮಾಡಲಾಗಿದೆ ಎಂದು ಚಳ್ಳಕೆರೆ ತಹಶೀಲ್ದಾರ್ ರಘುಮೂರ್ತಿ ಹೇಳಿದರು.
ತಾಲೂಕಿನ ಬೇಡ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಬಗ್ಗೆ ರೈತ,ಮತ್ತು ಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರೊಂದಿಗೆ ಸಂವಾದ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ, ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕಳ್ಳಿ ಬಂಜ ಗೆರೆ ಮತ್ತು ಬೇಡ ರೆಡ್ಡಿ ಹಳ್ಳಿ ಗ್ರಾಮಗಳಲ್ಲಿ ಬಹುತೇಕ ರೈತರು ಬಡವರಿದ್ದು ಹಲವಾರು ವರ್ಷಗಳಿಂದ ಈ ಗ್ರಾಮಗಳಲ್ಲಿ ಪೌತಿಖಾತೆ ಪೋಡಿ ಪಿಂಚಣಿಗಳು ದಾರಿ ವಿವಾದಗಳು ಮತ್ತು ಇನ್ನಿತರೆ ಕಂದಾಯ ಇಲಾಖೆಯ ಸಮಸ್ಯೆಗಳಿದ್ದು ಇವುಗಳನ್ನು ಬಗೆ ಹರಿಸುವಂತೆ ಬೇಡರಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮನವಿ ಮಾಡಿದ್ದು ಈ ಮೇರೆಗೆ ಇಂದು ಕಂದಾಯ ನಿರೀಕ್ಷಕರು ಮತ್ತು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಬೇಡರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದು, ಗ್ರಾಮ ಪಂಚಾಯಿತಿ ಸದಸ್ಯರುಗಳು ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸಾರ್ವಜನಿಕರೊಂದಿಗೆ ಸಂವಾದ ನಡೆಸಿದರು. ಈಗಾಗಲೇ ತಾಲೂಕಿನಲ್ಲಿ 68 ಗ್ರಾಮಗಳಲ್ಲಿ ಮನೆ ಜಿಲ್ಲಾಧಿಕಾರಿಗಳ ಮತ್ತು ಈ ಕ್ಷೇತ್ರದ ಮಂತ್ರಿಗಳ ಸೂಚನೆಯಂತೆ ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ ಇದರಲ್ಲಿ ಮುಖ್ಯವಾಗಿ ಧಾರಿ ವಿವಾದ ಪೌತಿಖಾತೆ ಜಮೀನಿನ ಪೋಡಿ ಕೆಲಸ ಸ್ಮಶಾನ ಒತ್ತುವರಿ ಪಿಂಚಣಿಗಳ ಪರಿಶೀಲನೆ ಹಾಗೂ ಇನ್ನಿತರ ಕಂದಾಯ ಇಲಾಖೆ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುವುದು ಹತ್ತು ದಿನಗಳ ಕಾಲಾವಕಾಶ ನೀಡಿ ಈ ಅವಧಿಯಲ್ಲಿ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ಮಾಡಿ ಅಂತಿಮವಾಗಿ ಜಿಲ್ಲಾಧಿಕಾರಿಗಳನ್ನು ಈ ಸಭೆಗೆ ಆಹ್ವಾನಿಸಿ ಈ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳೆಂದು ಘೋಷಿಸಲಾಗುವುದು ಆದುದರಿಂದ ಎಲ್ಲ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆಸಂಬಂಧಿಸಿದ ಮನವಿಯನ್ನು ಗ್ರಾಮ ಲೆಕ್ಕಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರಿಗೆ ಮನವಿ ಸಲ್ಲಿಸ ಬೇಕಾಗಿ ವಿನಂತಿಸಿದರು. ಇದೊಂದು ಒಳ್ಳೆಯ ಸುಸಂದರ್ಭವಾಗಿದ್ದು ಎಲ್ಲ ಪಂಚಾಯಿತಿ ಸದಸ್ಯರುಗಳು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರ ಸಮಸ್ಯೆ ಗಳನ್ನುಬಗೆಹರಿಸಿಕೊಳ್ಳುವಂತೆ ಮನವಿ ಮಾಡಿದರು ಈ ಸಂದರ್ಭದಲ್ಲಿ ಬೇಡ ರೆಡ್ಡಿಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಜಯಲಕ್ಷ್ಮಿ ಸದಸ್ಯರಾದ ಬಂಜಿಗೆರೆ ಅರುಣ್ ಕುಮಾರ್ ತಿಮ್ಮಯ್ಯ ವೇಣು ನಾಗೇಶ್ ರೆಡ್ಡಿ ರಾಜ್ಯಶ್ವ ರಿಕ್ಷಕರಾದಂತಹ ತಿಪ್ಪೇಸ್ವಾಮಿ ಗ್ರಾಮ ಲೆಕ್ಕಾಧಿಕಾರಿ ಸತೀಶ್ ಹಾಜರಿದ್ದರು

 

 

 

Leave a Reply

Your email address will not be published. Required fields are marked *