ಮೋದಿ‌ ಜನ್ಮದಿನಕ್ಕೆ 17 ರಂದು ದೇಶದಾದ್ಯಂತ ರಕ್ತದಾನ ಶಿಬಿರ

ಜಿಲ್ಲಾ ಸುದ್ದಿ

ಸೆ. 17 ರಂದು ಪ್ರಧಾನಿ ಮೋದಿಯವರ ಹುಟ್ಟು ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಸೇವಾ ಪಾಕ್ಷಿಕ ಅಡಿಯಲ್ಲಿ ಹದಿನೈದು ದಿನಗಳ‌ಕಾಲ ಅನೇಕ ಸೇವಾ ಚಟುಚಟಿಕೆಗಳನ್ನು ನಡೆಸಿ ಅವುಗಳ ಮೂಲಕ ಪ್ರಧಾನಿಗಳ ಧೀರ್ಘಾಯುಷ್ಯ ಮತ್ತು ಆರೋಗ್ಯಕ್ಕಾಗಿ ಪ್ರಾರ್ಥಿಸಲಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರುಳಿ ಹೇಳಿದರು.
ಅವರು ಚಿತ್ರದುರ್ಗದ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಸೂಚನೆಯಂತೆ ಸೆ. 17 ರಿಂದ ಅ. 2 ರವರೆಗೆ ವಿವಿಧ ಸೇವಾ ಕಾರ್ಯಗಳ ಆಯೋಜನೆ ಮೂಲಕ ನಡೆಸಲಾಗುತ್ತದೆ. ಸೆ. 17 ಮೋದಿಯವರ ಜನ್ಮ ದಿನ ಹಾಗೆಯೇ 25 ರಂದು ಪಕ್ಷದ ಸಂಸ್ಥಾಪಕರಲ್ಲಿ ಒಬ್ಬರಾದ ದೀನದಯಾಳ್ ಉಪಾಧ್ಯಾಯರ ಜನ್ಮದಿನ, ಅ. 2 ರಂದು ಶಾಸ್ತ್ರಿ ಹಾಗೂ ಗಾಂಧಿಜಿ ಅವರ ಜನ್ಮ ದಿ‌ನ, ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇವಾ ಪಾಕ್ಷಿಕವನ್ನು ಆಚರಿಸಲಿದ್ದಾರೆ. ಇದೇ 17 ರಂದು ಯುವ ಮೋರ್ಚಾ ವತಿಯಿಂದ ದೇಶದಾದ್ಯಂತ ರಕ್ತದಾನ ಶಿಬಿರ ಏರ್ಪಡಿಸಲಾಗುವುದು, ರಕ್ತದಾನಿಗಳ ವಿವರವನ್ನು ಪ್ರತೀ ಆಸ್ಪತ್ರೆಯಲ್ಲಿ ತಯಾರಿಸಿ ರಕ್ತದಾನಿಗಳ ವಿವರ ಸಿಗುವಂತೆ ಆರೋಗ್ಯ ಶಿಬಿರವನ್ನು ಆಯೋಜಿಸಲಾಗುತ್ತದೆ. ದಿವ್ಯಾಂಗರಿಗೂ ಕೂಡ ಅಂಗಾಂಗ ಜೋಡಿಸುವ ಜೋಡಣಾ ಶಿಬಿರ ಏರ್ಪಡಿಸಲಾಗುತ್ತದೆ. ಆಜಾದಿ ಕಾ ಅಮೃತ ಮಹೋತ್ಸವದ ಹಿ‌ನ್ನೆಲೆಯಲ್ಲಿ ಪ್ರತೀ ಜಿಲ್ಲೆಗೆ 75 ಕೆರೆಗಳ ನಿರ್ಮಾಣಕ್ಕೆ ಸರಕಾರ ನಿರ್ದೇಶನ‌ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಅಮೃತ ಸರೋವರ ನಿರ್ಮಾಣ ಆಗಿದೆ. ಈ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರು ನದಿ, ಕೆರೆ, ಬಾವಿಗಳ ಸ್ವಚ್ಚತಾ ಅಭಿಯಾನದಲ್ಲಿ ಪಾಲ್ಗೊಳ್ಳುವರು, ಸಸಿಗಳನ್ನು ನಡೆಸಲಿದ್ದಾರೆ. ಜೊತೆಗೆ ಮೋದಿ‌ @ 20 ಕಾರ್ಯಕ್ರಮವನ್ನು ಆಯೋಜಿಸಲಾಗುತ್ತದೆ. ಈ‌ ಸಮಯದಲ್ಲಿ ಅವರ 20 ವರ್ಷಗಳಲ್ಲಿ‌ ಮಾಡಿರುವ ಸಾಧನೆಗಳನ್ನು ಕೂಡ ಹೇಳಲಾಗುತ್ತದೆ. ಮೋದಿಯವರು ಭಾರತವನ್ನು 2025 ರ ವೇಳೆಗೆ ಕ್ಷಯ ಮುಕ್ತ ಭಾರತವನ್ನು ಮಾಡಲು ಪಣ ತೊಟ್ಟಿದ್ದಾರೆ. ಈ‌ ಹಿನ್ನೆಲೆಯಲ್ಲಿ ಸೇವಾ ಕಾರ್ಯಕ್ರಮದ ಅಂಗವಾಗಿ ಕಾರ್ಯಕರ್ತರು ಮಂಡಲ ಹಾಗೂ ಬೂತ್ ಮಟ್ಟದಲ್ಲಿ‌ ಕ್ಷಯ ರೋಗಿಗಳನ್ನು ದತ್ತು ಪಡೆದು ಒಂದು ವರ್ಷ ಕಾಲ‌ ಅವರ ಚಿಕಿತ್ಸೆ ಮತ್ತು ಪೌಷ್ಠಿಕತೆಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಪ್ರತೋ ಬೂತ್ ನಲ್ಲಿ ಸಸಿ ನಡೆಸುವ ಕಾರ್ಯಕ್ರಮ‌ ಏರ್ಪಡಿಸಲಾಗುತ್ತದೆ. ಗಾಂಧಿಜಿಯವರ ಜನ‌್ಮ‌ದಿನದ ಅಂಗವಾಗಿ ಜೀವನ‌ ತಿಳಿಸಿಕೊಡುವ ನಿಟ್ಟಿನಲ್ಲಿ ಸ್ವದೇಶಿ ಖಾದಿ,ಆತ್ಮ‌ನಿರ್ಭರತೆ ಸರಳತೆ ಮತ್ತು ಶುಚಿತ್ವದ ಕುರಿತು ಅಭಿಯಾನ ಹಮ್ಮಿಕೊಳ್ಳಲಾಗುತ್ತದೆ ಎಂದು ಮುರುಳಿ ಹೇಳಿದರು. ಈ ಸಮಯದಲ್ಲಿ ಜಿಲ್ಲಾಧ್ಯಕ್ಷ ಎ. ಮುರುಳಿ, ಪ್ರಧಾನ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷ ಸಂಪತ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಖಜಾಂಚಿ ಮಾಧುರಿ ಗಿರೀಶ್, ಕೂಡಾ ಅಧ್ಯಕ್ಷ ಸಿದ್ದಾಪುರ ಸುರೇಶ್, ಚಿತ್ರದುರ್ಗ ನಗರ ಮಂಡಲಾಧ್ಯಕ್ಷ ಚಾಲುಕ್ಯ ನವೀನ್, ಗ್ರಾಮಾಂತರ ಮಂಡಲ‌ ಅಧ್ಯಕ್ಷ ನಂದಿ‌ನಾಗರಾಜ್ ಇದ್ದರು.

 

 

 

Leave a Reply

Your email address will not be published. Required fields are marked *