ಬಿಎಸ್ ಎನ್ ಎಲ್ ಮತ್ತು ಬಿಬಿ ಎನ್ ಎಲ್ ವಿಲೀನ

ಆರೋಗ್ಯ

ಬಿಎಸ್‌ಎನ್.ಎಲ್ ಸೇವೆ ಮೇಲ್ದರ್ಜೆಗೇರಿಸಲು , ಬ್ರಾಡ್ ಬ್ಯಾಂಡ್ ಸಂಪರ್ಕ ಸುಧಾರಿಸಲು ಪ್ಯಾಕೇಜ್ ಘೋಷಣೆ ಮಾಡಿದ್ದಾರೆ, ನಾಲ್ಕು ವರ್ಷಗಳ ಅವಧಿಗೆ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಟೆಲಿಕಾಂ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ.
ಬಿಎಸ್ ಎನ್ ಎಲ್ ಹಾಗೂ ಬಿಬಿಎನ್ ಎಲ್ ವಿಲೀನಕ್ಕೆ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಬಿಎಸ್ ಎನ್ ಎಲ್ ಪುನಶ್ಚೇತನಕ್ಕೆ ಕೇಂದ್ರದ ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ದೊರೆತಿದೆ. ಕೇಂದ್ರದ ಕ್ಯಾಬಿನೆಟ್ ಸಭೆಯ ಬಳಿಕ ಮಾತನಾಡಿದ ಅವರು,
ಎರಡು ವರ್ಷಗಳ ಬಳಿಕ ಪ್ಯಾಕೇಜ್ ಘೋಷಣೆಯ ಫಲಿತಾಂಶ ಲಭ್ಯ, 44 ಸಾವಿರ ಕೋಟಿ ರೂಪಾಯಿ ನಗದು ಪ್ಯಾಕೇಜ್ ಘೋಷಣೆ ಮಾಡಲಾಗಿದೆ.

BSNL ಗೆ 33 ಸಾವಿರ ಕೋಟಿ ರೂಪಾಯಿ ಬ್ಯಾಂಕ್ ಸಾಲ ಇದೆ. ಸಾವರಿನ್ ಗ್ಯಾರಂಟಿ ಬಾಂಡ್ ಮೂಲಕ ಹಣ ಸಂಗ್ರಹಿಸಿ ಸಾಲ ಮರುಪಾವತಿಗೆ ನಿರ್ಧರಿಸಲಾಗಿದೆ.

 

 

 

50 ಸಾವಿರ ಗ್ರಾಮಗಳಲ್ಲಿ ನೆಟ್ ವರ್ಕ್ ಸೌಲಭ್ಯ ಒದಗಿಸಲು 26,316 ಕೋಟಿ ರೂಪಾಯಿ ನೀಡಲು ಒಪ್ಪಿಗೆ ನೀಡಲಾಗಿದೆ. 50 ಸಾವಿರ ಗ್ರಾಮದಲ್ಲಿ ಟೆಲಿಕಾಂ ನೆಟ್ ವರ್ಕ್ ಸೌಲಭ್ಯ ಒದಗಿಸಲು ಹಣ ನೀಡಲು ಒಪ್ಪಿಗೆ ನೀಡಲಾಗಿದೆ.

BBNL- ಭಾರತ್ ಬ್ರಾಡ್ ಬ್ಯಾಂಡ್ ನೆಟ್ ವರ್ಕ್, MTNL ಅನ್ನು ಬಿಎಸ್‌ಎನ್ ಎಲ್ ನಿರ್ವಹಣೆ ಮಾಡಲಿದೆ. BSNL ಗೆ ತರಂಗಾಂತರ ಹಂಚಿಕೆ ಮಾಡುವ ಮೂಲಕ 4-G ಸೇವೆ ವಿಸ್ತರಣೆಗೆ ನೆರವು ನೀಡಲಾಗುತ್ತದೆ ಎಂದು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ

Leave a Reply

Your email address will not be published. Required fields are marked *