ಧೈರ್ಯವಿದ್ದರೆ ಕಾಂಗ್ರೆಸ್ ಸಿಎಂ‌ಅಭ್ಯರ್ಥಿ ಘೋಷಣೆ ಮಾಡಲಿ

ರಾಜಕೀಯ

ನಿಮಗೆ ತಾಕತ್ತು, ಧೈರ್ಯ ಇದ್ರೆ ಸಿಎಂ ಅಭ್ಯರ್ಥಿ ಘೋಷಿಸಿ : ಸಚಿವ ಆರ್. ಅಶೋಕ್

ಚಿತ್ರದುರ್ಗ : ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ಕೆಲವು ತಿಂಗಳು ಬಾಕಿ ಇದೆ. ಕಾಂಗ್ರೆಸ್ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ. ಆಗಾಗಿ ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು, ಧೈರ್ಯ ಇದ್ರೆ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಆರ್. ಅಶೋಕ್ ಸವಾಲು ಹಾಕಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಪ್ರಧಾನಿ ಮೋದಿ,ಅಮೀತ್ ಷಾ, ಸಿಎಂ ಬದಲಾವಣೆ ಕುರಿತು ಕಾಂಗ್ರೆಸ್ ಪಕ್ಷದವರ ಬಳಿ ಮಾತ್ನಾಡಿದ್ರಾ ಎಂದು ಪ್ರಶ್ನೆ ಹಾಕಿದರು ?

ಅಮಿತ್ ಷಾ ಬಂದ ಬಳಿಕ ಮುಖ್ಯಮಂತ್ರಿ ಬದಲಾವಣೆ ಎನ್ನುತ್ತಾರೆ, ಕಾಂಗ್ರೆಸ್ ನಾಯಕರ ಬಲಹೀನತೆ ಹೇಳಿಕೆ ಎಂದರು. ದಾವಣಗೆರೆಯಲ್ಲಿ ನಡೆದ ಸಮಾವೇಶದ ಬಳಿಕ ಒಳ ಜಗಳ ಶುರುವಾಗಿದೆ. ಇದೀಗ ಇದಕ್ಕೆ ಪ್ರತಿಯಾಗಿ ಬೆಂಗಳೂರಿನಲ್ಲಿ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಕೊಳೆತು ನಾರುವ ಗೊಂದಲ ಮುಚ್ಚಿಹಾಕಲು ಈರೀತಿ ಮಾತನಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

 

 

 

ದೇಶದಲ್ಲಿ ವಿರೋಧ ಪಕ್ಷವಾಗಲೂ ಕೂಡಾ ಕಾಂಗ್ರೆಸ್ ನಾಲಾಯಕ್ ಆಗಿದೆ. ರಾಷ್ಟ್ರೀಯ ಅಧ್ಯಕ್ಷರ ನೇಮಕ ಮಾಡುವ ಯೋಗ್ಯತೆ ಕೂಡಾ ಕಾಂಗ್ರೆಸ್ ಗೆ ಇಲ್ಲ ಎಂದು ಹೇಳಿದರು.

ಬೊಮ್ಮಾಯಿ ಚುನಾವಣೆ : ಮುಂದಿನ ಚುನಾವಣೆಯನ್ನು ಸಿಎಂ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆಸಲಾಗುತ್ತಿದೆ. ಬೊಮ್ಮಾಯಿ ಅವರು ಸರಳ ಸಿಎಂ ಆಗಿದ್ದಾರೆ. ನಮ್ಮ ಸರ್ಕಾರ ಭದ್ರವಾಗಿದೆ, ಮೋದಿ, ಅಮೀತ್ ಷಾ ಅವರ ಭಯ ಕಾಂಗ್ರೆಸ್ ನವರಿಗೆ ಹೆಚ್ಚಿದೆ. ಬೊಮ್ಮಾಯಿ ಇಂದು ಮುಂದೆ ಸಿಎಂ ಆಗಿರುತ್ತಾರೆ ಅಶೋಕ್ ತಿಳಿಸಿದರು.

ಸಿದ್ದರಾಮಯ್ಯ ಸರ್ಕಾರದಲ್ಲಿ 60% ಕಮಿಷನ್ ಇತ್ತು, ನಮ್ಮ ಸರ್ಕಾರದಲ್ಲಿ ಒಂದು ದಾಖಲೆ ಇದ್ದರೆ ಬಿಡುಗಡೆ ಮಾಡಲಿ.
ನಮ್ಮ ಸರ್ಕಾರ ಭ್ರಷ್ಟಾಚಾರ ರಹಿತ ಸರ್ಕಾರ ನಮ್ಮದು.
ನಮಗೆ ದೇಶದಲ್ಲಿ ಮೋದಿ ಲೀಡರ್ ಶಿಪ್ ಇದೆ, ನೀವು ಲೀಡರ್ ಲೆಸ್. ಸಿಎಂ ಘೋಷಣೆ ಆದರೆ ಕಾಂಗ್ರೆಸ್ ಎರಡು ಭಾಗ ಆಗುತ್ತದೆ.
ಸಿದ್ದು ಕಾಂಗ್ರೆಸ್, ಡಿಕೆ ಕಾಂಗ್ರೆಸ್ ಆಗಿ ಇಬ್ಬಾಗ ಆಗುತ್ತದೆ ಎಂದು ಹೇಳಿದರು. ನಿಮ್ಮ ತಟ್ಟೆಯ ಹೆಗ್ಗಣ ನೋಡಿ, ನಮ್ಮ ನೋಣ ನೋಡಬೇಡಿ. ಸಿದ್ದರಾಮಯ್ಯ ಜೆಡಿಎಸ್ ಟ್ರೈನಿಂಗ್ ಕ್ಯಾಂಪ್ ನವರು, ನಮ್ಮ ಪ್ರಧಾನಿ ಇಟಲಿಯಿಂದ ಬಂದಿಲ್ಲ, ನಾವೆಲ್ಲಾ ಪಕ್ಕಾ ಇಂಡಿಯನ್ ಎಂದು ಟಾಂಗ್ ನೀಡಿದರು.ಕಾಂಗ್ರೆಸ್ ನಲ್ಲಿ ಕೇಂದ್ರ & ರಾಜ್ಯದಲ್ಲಿ ನಾಯಕತ್ವ ಇಲ್ಲ.

ಇತ್ತ ರಾಜ್ಯದಲ್ಲಿ ಸಿದ್ದರಾಮಯ್ಯ & ಡಿಕೆಶಿ ಏಕಾಭಿನಯ ಪಾತ್ರ ಮಾಡುತ್ತಿದ್ದಾರೆ ಎಂದರು. RSS ಕಚೇರಿಗಳ ಮೇಲೂ ಕೂಡಾ ಬಹಳ ವರ್ಷದಿಂದ ಭಾರತ ಧ್ವಜ ಹಾರಿಸುತ್ತಿದ್ದೇವೆ, ಇದು ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ ಎಂದು ಸಿದ್ದುಗೆ ಅಶೋಕ್ ಗುಟುಕಿದರು.

Leave a Reply

Your email address will not be published. Required fields are marked *