ಗೌರ ಸಮುದ್ರ ಮಾರಮ್ಮನ ಹುಂಡಿ‌ ಎಣಿಕೆ 2 ,97,700 ರೂ ಸಂಗ್ರಹ

ಜಿಲ್ಲಾ ಸುದ್ದಿ

ಚಳ್ಳಕೆರೆ ಶ್ರೀಗೌರಸಮುದ್ರ ಮಾರಮ್ಮ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ

 

 

 

ಚಳ್ಳಕೆರೆ ತಾಲ್ಲೂಕಿನ ಶ್ರೀಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿ ಇಂದು ಕಂದಾಯ ಇಲಾಖೆ ಗ್ರಾಮಪಂಚಾಯಿತಿ ವತಿಯಿಂದ ತಹಶೀಲ್ದಾರ್ ಎನ್.ರಘುಮೂರ್ತಿ ನೇತೃತ್ವದಲ್ಲಿ ಕಾಣಿಕೆ ಹುಂಡಿ ಎಣಿಕೆ ಕಾರ್ಯವನ್ನ ಹಮ್ಮಿಕೊಂಡಿದ್ದು ದೇವಸ್ಥಾನದಲ್ಲಿ ಪೂಜೆಯ ನಂತರ ದೇವಸ್ಥಾನದಲ್ಲಿ ತಹಶೀಲ್ದಾರ್ ಪೋಲೀಸ್ ಕಂದಾಯ ಇಲಾಖೆ ಕಾಣಿಕೆ ಹುಂಡಿಯ ಬೀಗ ತೆಗೆದು ಅದರಲ್ಲಿ ಶೇಖರಣೆಯಾಗಿದ್ದ ಕಾಣಿಕೆ ಹಣವನ್ನ ಎಣಿಕೆ ಮಾಡಲಾಯಿತು. ದೇವಸ್ಥಾನದಲ್ಲಿ ಒಟ್ಟು 4 ಕಾಣಿಕೆ ಹುಂಡಿ ಇದ್ದು ಎಲ್ಲಾ ಹುಂಡಿಯಲ್ಲಿದ್ದ ಹಣ ಎಣಿಕೆ ಮಾಡಿ ಒಟ್ಟು 2 ಲಕ್ಷದ 92 ಸಾವಿರದ ನೂರಾ ಏಳುನೂರೂ ಸಂಗ್ರಹವಾಗಿದೆ
ದೇವಸ್ಥಾನದ ಹುಂಡಿ ಎಣಿಕೆ ಕಾರ್ಯದಲ್ಲಿ ಪಾಲ್ಗೂಂಡು ನಂತರ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಜಿಲ್ಲಾಧಿಕಾರಿಗಳ ಆದೇಶದಂತೆ ಗೌರಸಮುದ್ರ ಮಾರಮ್ಮ ದೇವಸ್ಥಾನದಲ್ಲಿರುವ ಕಾಣಿಕೆ ಹುಂಡಿ ಎಣಿಕೆ ಕಾರ್ಯವನ್ನು ಹಮ್ಮಿಕೊಂಡಿದ್ದು 29 ರಿಂದ ಗೌರಸಮುದ್ರ ಮಾರಮ್ಮ. ಜಾತ್ರೆ ಪ್ರಾರಂಭವಾಗಲಿದ್ದು ಇದರೆ ಹಿನ್ನೆಲೆ ಪ್ರತಿವರ್ಷವು ಜಾತ್ರೆಗೆ ಮುನ್ನವೇ ಕಾಣಿಕೆ ಎಣಿಕೆಯನ್ನು ಮಾಡಲಾಗುವುದು.ಅದರಂತೆ ಇಂದೂ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಾಯಿತಿಯಿಂದ ಈ ದೇವಿಯ ಕಾಣಿಕೆ ಹಣವನ್ನ ಎಣಿಸಲಾಗಿದೆ . ಹಾಗೂ ಜಾತ್ರೆಗೆ ಬರುವ ಭಕ್ತರಿಗೆ ಹಾಗೂ ಅಂಗಡಿ ಇತರೆ ಜಾಕಾತಿಯನ್ನು ಗ್ರಾಮಪಂಚಾಯಿತಿ ಹಾಗು ಇತರ ಕಂದಾಯ ಇಲಾಖೆಯಿಂದಲೆ ವಸೂಲಿ ಮಾಡಲಾಗುವುದು ,ಆದುದರಿಂದ ಅಂಗಡಿ ಹೋಟೆಲ್ ನಿಗದಿತ ಹಣವನ್ನು ಕೊಟ್ಟು ಸಹಕರಿಸಿ, ಜಾತ್ರೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ ಎಂದರು

Leave a Reply

Your email address will not be published. Required fields are marked *