ಐಫೋನ್ ಕಂಪೆನಿಗೆ ವಂಚನೆ:ನಕಲಿ ಚಾರ್ಜರ್ ನೀಡುತ್ತಿದ್ದ ತಂಡ ಪೊಲೀಸ್ ವಶಕ್ಕೆ

ಆರೋಗ್ಯ

ಐಫೋನ್ ಕಂಪೆನಿಗೆ ವಂಚನೆ:ಕೊರಿಯರ್ ಮೂಲಕ ನಕಲಿ ಚಾರ್ಜರ್ ನೀಡುತ್ತಿದ್ದ ತಂಡ ಪೊಲೀಸ್ ವಶಕ್ಕೆ

 

 

 

ಪ್ರತಿಷ್ಠಿತ ಐಫೋನ್ ಕಂಪೆನಿಯ ಮೊಬೈಲ್ ಚಾರ್ಜರ್ಗಳನ್ನು ಆನ್ ಲೈನ್ ಮೂಲಕ ಕೊರಿಯರ್ ತರಿಸಿಕೂಂಡು ಗ್ರಾಹಕರಿಗೆ ನಕಲಿ ಚಾರ್ಜರ್ಗಳನ್ನು  ನೀಡುತ್ತಿದ್ದ ಜಾಲವೊಂದನ್ನು ಕುಶಾಲನಗರ ಪೊಲೀಸರ ತಂಡ ಪತ್ತೆ ಹಚ್ಚಿ ಐವರನ್ನು ಬಂಧಿಸಿ, ಲಕ್ಷಾಂತರ ರೂಪಾಯಿ ಹಣ ಮತ್ತು ನಗದನ್ನು ವಶಕ್ಕೆ ಪಡೆದಿದ್ದಾರೆ. ಅಚ್ಚರಿಯೆಂದರೆ ಕೊರಿಯರ್ ನೀಡುತ್ತಿದ್ದ ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿರುವುದು.
ಕುಶಾಲನಗರ ಪಟ್ಟಣದ ಮೈ ಡಿಲೆವರಿ ಲಿಮಿಟೆಡ್ ಹೆಸರಿನ ಖಾಸಗಿ ಕೊರಿಯರ್ ಸರ್ವಿಸ್ ಕಳೆದ ಮೇ 9 ರಿಂದ ಆಗಸ್ಟ್ 23 ರವರೆಗೆ ಹಾಸನದ ಸರಬರಾಜು ಕಂಪೆನಿಯ ಗೋದಾಮು ಕುಶಾಲನಗರದ ವ್ಯಾಪ್ತಿಯಲ್ಲಿನ ವ್ಯಾಪರಸ್ಥರಿಗೆ ಸರಬರಾಜಾಗುತ್ತಿತ್ತು, ಇದರಲ್ಲಿ ಉಡಾನ್ ಸಂಸ್ಥೆಯ ಉದ್ಯೋಗಿ ಪ್ರಕರಣ ಕಿಂಗ್ ಪಿನ್ ಮಂಗಳೂರು ಮೂಲದ ಹಿತೇಶ್ ರೈ ಕೊರಿಯರ್ ಸರ್ವಿಸ್ ನೀಡುವ ಹುಡುಗರೊಂದಿಗೆ ಸೇರಿಕೊಂಡು ಅಸಲಿ ಚಾರ್ಜರ್ ತೆಗೆದು ಕೇರಳ ಭಾಗದಿಂದ ಕಡಿಮೆ ಬೆಲೆಯ ನಕಲಿ ಚಾರ್ಜರ್ ತರಿಸಿ ,ಗ್ರಾಹಕರಿಗೆ ನೀಡುವ ಮೂಲಕ 25 ಲಕ್ಷ ರೂ ವಂಚನೆ ಮಾಡಲಾಗಿದೆ.
ಪ್ರಕರಣದ ತನಿಖೆಯ ಕೈಗೊಂಡ ಕುಶಾಲನಗರ ಪಟ್ಟಣ ಠಾಣೆ ಪೊಲೀಸರ ತಂಡ, ಪ್ರಮುಖ ಆರೋಪಿ ಸೂರತ್ಕಲ್ ಮೂಲದ ಹಿತೇಶ್ ರೈ,ಕೊರಿಯರ್ ಬಾಯ್ಸ್ ಗಳಾದ, ಗುಡ್ಡೆಹೊಸೂರುವಿನ ಧರ್ಮ ಎಸ್. ಆರ್,ರಂಗಸಮುದ್ರದ ತೀರ್ತೇಶ್ ರೈ,ಕುಶಾಲನಗರದ ಕೀರ್ತನ್, ಶ್ರೀರಂಗಾಲದ ವಿನಯ್ ರನ್ನು ಬಂಧಿಸಿ 14,10,000 ನಗದು,73 ಸಾವಿರ ಮೌಲ್ಯದ ಅಸಲಿ ಚಾರ್ಜರ್, 1874 ನಕಲಿ ಚಾರ್ಜರ್ ವಶಕ್ಕೆ ಪಡೆಯಲಾಗಿದೆ.

Leave a Reply

Your email address will not be published. Required fields are marked *