ಇಂಗಳದಾಳು ಗ್ರಾಪಂ ನಲ್ಲಿ ಐದು ಕೋಟಿ ಅವ್ಯವಹಾರ

ಜಿಲ್ಲಾ ಸುದ್ದಿ

ಚಿತ್ರದುರ್ಗ ತಾಲೂಕಿನ ಇಂಗಳದಾಳು ಗ್ರಾಮ‌ ಪಂಚಾಯಿತಿಯಲ್ಲಿ 5 ರಿಂದ 6 ಕೋಟಿ ಅವ್ಯವಹಾರವಾಗಿದೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.
ಅವರು ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದರು.
ನಾನು 16 ರಿಂದ 17 ವರ್ಷಗಳ ಹಿಂದೆ ಇಂಗಳದಾಳು ಪಂಮಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಿಸಿಕೊಟ್ಟಿದ್ದ ಚಕ್ ಡ್ಯಾಂಗಳು ಗೋ ಕಟ್ಟೆಗಳಿಗೆ ಸುಣ್ಣ ಬಳಿದು ಹಣವನ್ನು ನುಂಗಲಾಗಿದೆ. ಇದನ್ನು ಆಡಿಟ್ ಮಾಡಿಸಿ ವರದಿ ನೀಡಬೇಕು ಇದಕ್ಕಾಗಿ ಹಳೆ ದಾಖಲೆಗಳನ್ನು ಒದಗಿಸಬೇಕು ಆಡಿಟ್ ಸಮಿತಿ ರಚಿಸಬೇಕು ಎಂದು ಸೂಚಿಸಿದರು. ಹಿಂದೆ ಇದ್ದ ಪಿಡಿಓ ಸ್ಟ್ರಾಂಗ್ ರೂಂ ನಲ್ಲಿ ಕೆಲವು ದಾಖಲೆಗಳಿವೆ ಒಂದಷ್ಟು ಸುಟ್ಟು ಹಾಕಲಾಗಿದೆ ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಡಿಎಸ್ ರಂಗಸ್ವಾಮಿ ವಿಶೇಷ ಆಡಿಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು

 

 

 

Leave a Reply

Your email address will not be published. Required fields are marked *