ಸುರಕ್ಷಿತ ಸ್ಥಳಕ್ಕೆ ಹೋಗಿ ಅತಂಕ‌ ಬೇಡ ನಾವಿದ್ದೇವೆ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲೂಕಿನ ಪರಶುರಾಂಪುರ ಹೋಬಳಿಯ ಪರಶುರಾಂಪುರ ಕೆರೆ ಕೊಡಿ ಬಿದ್ದು ಕೋಡಿಯಲ್ಲಿ ಮೂರು ಅಡಿ ನೀರು ಹರಿ ಯುತ್ತಿರುವುದರಿಂದ ಪಾವಗಡ ಕಡೆಗೆ ಹೋಗುವ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ರವಿಕುಮಾರ್ ಅವರೊಂದಿಗೆ ಬಳಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್ ರಘುಮೂರ್ತಿ ಸೂಚಿಸಿದರು.

 

 

 

 

ನಂತರ ಗ್ರಾಮಸ್ಥರನ್ನದ್ದೇಶಿಸಿ ಮಾತನಾಡಿದ,ಅವರು ಈ ಭಾಗದಲ್ಲಿನ ಬಹುತೇಕ ಕೆರೆಗಳು ತುಂಬಿ ಹರಿಯುತ್ತಿವೆ 20 ವರ್ಷಕ್ಕೂ ಮೇಲ್ಪಟ್ಟ ಕೆಲವು ಕೆರೆಗಳು ತುಂಬಿದ್ದು ಈ ಕೆರೆ ಏರಿಯಲ್ಲಿ ಸಹಜವಾಗಿ ಜೋಗು ನೀರು ಹರಿಯುತ್ತಿದೆ ಇದರಿಂದ ಜನರು ಸುಖ ಸುಮ್ಮನೆ ಆತಂಕ ಗೊಳ್ಳುವುದು ಬೇಡ ಈ ಬಗ್ಗೆ ತಜ್ಞರ ಅಭಿಪ್ರಾಯವನ್ನು ಕೂಡ ಪಡೆಯಲಾಗಿದೆ ಕೆರೆ ಏರಿ ದಂಡೆಯ ಪ್ರದೇಶಜನರು ಸುರಕ್ಷಿತಸ್ಥಳಗಳಲ್ಲಿರ ಬೇಕು ಇದರ ಹೊರತಾಗಿಯೂ ಯಾವುದಾದರೂ ಅನಾನುಕೂಲವಾದಲ್ಲಿ ತಕ್ಷಣ ತಶಿಲ್ದಾರರನ್ನು ಸಂಪರ್ಕಿಸಬೇಕು ಎಂದು ಹೇಳಿ ಗ್ರಾಮಸ್ಥರಿಗೆ ಧೈರ್ಯ ತುಂಬಿದ್ದಾರೆ. ಸಮಸ್ಯೆಯಾದಲ್ಲಿ ದೂರವಾಣಿ ಸಂಖ್ಯೆ (9448530055)ಯಾಗಿರುವ ಈ ನಂವರ್ ಗೆ ಕರೆ ಮಾಡಿ ಎಂದರು.ಇಂತಹ ಸಮಸಯದಲ್ಲಿ ಹೆಚ್ಚು ಹೆಚ್ಚು ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರಿಗೆ ನೆರವು ನೀಡಲು ಮುಂದೆ ಬರಬೇಕು ಮತ್ತು ಸದಾ ಸಿದ್ದರಿರಬೇಕು ಎಂದು ಹೇಳಿದರು. ಸಂದರ್ಭದಲ್ಲಿ ಅಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ರವಿಕುಮಾರ್ ಉಪ ತಹಸಿಲ್ದಾರ್ ಮೋಹನ್ ಕುಮಾರ್ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *