ಐಎಎಸ್ ಅಧಿಕಾರಿಗಳ ಬೆನ್ನಲ್ಲೆ ಐಪಿಎಸ್ ಅಧಿಕಾರಿಗಳಿಗೆ ನ್ಯೂ ಇಯರ್ ಗಿಫ್ಟ್ ನೀಡಿದ ಸರ್ಕಾರ

ರಾಜ್ಯ

ರಾಜ್ಯ ಸರ್ಕಾರ 53 ಐಪಿಎಸ್​ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ನ್ಯೂ ಇಯರ್​ ಗಿಫ್ಟ್​​ ಕೊಟ್ಟಿದೆ.

ಬೆಂಗಳೂರು: ರಾಜ್ಯ ಸರ್ಕಾರ ಕೆಲ ಗಂಟೆಗಳ ಹಿಂದೆ 42 ಐಎಎಸ್ (IAS) ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ಆದೇಶ ಹೊರಡಿಸಿತ್ತು.

 

 

 

ಈಗ 53 ಐಪಿಎಸ್ (IPS)​ ಅಧಿಕಾರಿಗಳಿಗೆ ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ನೀಡಿ ನ್ಯೂ ಇಯರ್​ ಗಿಫ್ಟ್​​ ಕೊಟ್ಟಿದೆ. ಈ ಆದೇಶ ಹೊಸವರ್ಷದ ಮೊದಲ ದಿನದಿಂದಲೇ ಜಾರಿಗೆ ಬರುವಂತೆ ಸುತ್ತೋಲೆ ಹೊರಡಿಸಿದೆ.

ವೇತನ ಶ್ರೇಣಿ ಹೆಚ್ಚಳದೊಂದಿಗೆ, ಬಡ್ತಿ ಪಡೆದ ಅಧಿಕಾರಿಗಳು

1. ಅಲೋಕ್ ಮೋಹನ್ ಡಿಜಿಪಿ (ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್)
2.ಸಿ ಹೆಚ್ ಪ್ರತಾಪ್ ರೆಡ್ಡಿ ಡಿಜಿಪಿ ಬೆಂಗಳೂರು ನಗರ
3.ಮನೀಶ್ ಖಾರ್ಬಿಕರ್ ಡಿಜಿಪಿ (ಕಾರಾಗೃಹಗಳು) ಕಲಬುರಗಿ
4.ಎನ್ ಸತೀಶ್ ಕುಮಾರ್ ಕಲಬುರಗಿ ಈಶಾನ್ಯ ರೇಂಜ್‌ ಐಜಿಪಿ
5.ಸೌಮೇಂದು ಮುಖರ್ಜಿ ಎಡಿಜಿಪಿ ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣದ
6.ಎಂ ಚಂದ್ರಶೇಖರ್ ಬೆಂಗಳೂರು ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಕಮಿಷನರ್
7.ರಮಣ್ ಗುಪ್ತಾ ಐಜಿಪಿ ಬೆಂಗಳೂರು ಉತ್ತರ ವಲಯ
8.ಬಿ ಆರ್ ರವಿಕಾಂತೇಗೌಡ ಐಜಿಪಿ ಬೆಂಗಳೂರು ಕೇಂದ್ರ ವಲಯ
9.ಬಿ ಎಸ್ ಲೋಕೇಶ್ ಕುಮಾರ್ ಐಜಿಪಿ ಬಳ್ಳಾರಿ ವಲಯ
ಇನ್ನು ಈ ಬಡ್ತಿ ಪಡೆಯುವ ಪಟ್ಟಿಯಲ್ಲಿ ಐಪಿಎಸ್​ ಅಧಿಕಾರಿ ಹೇಮಂತ್​ ನಿಂಬಾಳ್ಕರ್​ ಹೆಸರು ಸಹ ಇತ್ತು. ಆದ್ರೆ, ಅವರ ಮೇಲೆ ಕೆಲ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸರ್ಕಾರ ಅವರ ಬಡ್ತಿಯನ್ನು ತಡೆ ಹಿಡಿದಿದೆ ಎಂದು ತಿಳಿದುಬಂದಿದೆ. ನಿರ್ಭಯಾ ಸೇಫ್ಟಿ ಟೆಂಡರ್ ವಿಚಾರಕ್ಕೆ ಸಂಬಂಧಿಸಿ 2021ರಲ್ಲಿ ಐಪಿಎಸ್ ಅಧಿಕಾರಿಗಳಾದ ಡಿ. ರೂಪಾ ಮತ್ತು ನಿಂಬಾಳ್ಕರ್ ಆರೋಪ-ಪ್ರತ್ಯಾರೋಪ ಮಾಡಿಕೊಂಡಿದ್ದರು. ಈ ಘಟನೆ ನಂತರ ಸರ್ಕಾರ ಇಬ್ಬರನ್ನು ವರ್ಗಾವಣೆ ಮಾಡಿತ್ತು.

Leave a Reply

Your email address will not be published. Required fields are marked *