ಪೊಲೀಸರು ವಾಪಸ್ಸು ಕೊಟ್ಟ ಕಳವು ವಸ್ತುಗಳ ಬೆಲೆ ಎಷ್ಟು ಗೊತ್ತಾ?

ಕ್ರೈಂ

ಚಿತ್ರದುರ್ಗ ಜಿಲ್ಲೆಯ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳುವಾದ 162 ಪ್ರಕರಣಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡ 2.7 ಕೋಟಿ ರೂ.ಗಳ ಬಂಗಾರ, ಬೆಳ್ಳಿ, ನಗದು ಹಾಗೂ ವಾಹನಗಳನ್ನು ವಾರಸುದಾರರಿಗೆ ಇಂದು ಹಸ್ತಾಂತರಿಸಲಾಯಿತು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ವಾರಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ಪರುಶುರಾಮ್ ಮಾತನಾಡಿ, ಜಿಲ್ಲೆಯಲ್ಲಿ ಕಳೆದ ಒಂದು ವರ್ಷದಲ್ಲಿ 162 ಮನೆ ಕಳ್ಳತನ, ವಾಹನಗಳ ಕಳುವು, ಸೈಬರ್ ಕ್ರೈಂ, ವಾಯು ವಿಹಾರಿಗಳ ಸರ ಕಳ್ಳತನ, ವಾಹನ ಅಡ್ಡಗಟ್ಟಿ ವಾಹನ ಹಾಗೂ ವಸ್ತುಗಳ ಕಳವು ಸೇರಿದಂತೆ ಇತರೆ ರೀತಿಯಲ್ಲಿ ಕಳ್ಳರು ವಸ್ತಗಳನ್ನು ಕಳವು ಮಾಡುತ್ತಿದ್ದರು. ಇದರ ಬಗ್ಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಿಕೊಂಡು ಪತ್ತೆ ಕಾರ್ಯ ಕೈಗೊಂಡ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸುಮಾರು 2.7 ಕೋಟಿ ರೂ.ಗಳ ವಸ್ತುಗಳನ್ನು ವಶಪಡಿಸಿಕೊಂಡು ಇಂದು ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಇಂತಹ ನಮ್ಮ ಕಾರ್ಯಕ್ಕೆ ತೃಪ್ತಿ ತಂದಿದೆ ಎಂದರು.
ಸಾರ್ವಜನಿಕರಿಗೆ ಮನೆಗಳಿಗೆ ವಾರಗಳ ಕಾಲ ಬೀಗ ಹಾಕಿದರೆ ಕಳ್ಳರಿಗೆ ಕಳ್ಳತನ ಮಾಡಲು ಅನುವು ಮಾಡಿಕೊಟ್ಟಂತೆ ಆಗಲಿದೆ. ಆದ್ದರಿಂದ ಈ ಬಗ್ಗೆ ಸಂಬಂಧ ಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಆಗ ಬೀಟ್ ಪೊಲೀಸರು ಆಂತಹ ಮನೆಗಳ ಬಗ್ಗೆ ಗಮನಹರಿಸುತ್ತಾರೆ. ಯಾರೇ ಹೊಸ ವ್ಯಕ್ತಿಗಳ ಪರಿಚಿತರಾದರೆ ಅಂತಹ ವ್ಯಕ್ತಿಗಳ ಬಗ್ಗೆ ಎಚ್ಚರದಿಂದರಬೇಕು. ಕಾರಣ ಮತ್ತು ಬರಿಸುವ ಔಷಧಿ ಹಾಕಿ ಜನರ ಹಾಗೂ ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಿದ್ದಾರೆ. ಅಲ್ಲದೆ ಯಾವುದೇ ಆಮಿಷಗಳಿಗೆ ಸಾರ್ವಜನಿಕರು ಒಳಗಾಗಬಾರದು. ನಿಮ್ಮ ಮೊಬೈಲ್ ನಂಬರಿಗೆ ಬಹುಮಾನ ಬಂದಿದೆ ಓಟಿಪಿ ಹೇಳಿ ಎಂದು ತಮ್ಮ ಬ್ಯಾಂಕ್ ಖಾತೆಯ ಹಣವನ್ನು ಲೂಟಿ ಮಾಡುತ್ತಾರೆ. ಇಂತಹ ಗುಂಪನ್ನು ಪತ್ತೆಹಚ್ಚಲು ಪೊಲೀಸರು ಅವಿರತ ಶ್ರಮಿಸುತ್ತಿದ್ದು, ಸಾರ್ವಜನಿಕರು‌ ಕೂಡ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಚಿತ್ರದುರ್ಗ ಉಪವಿಭಾಗದ 72 ಪ್ರಕರಣದಲ್ಲಿ 1.23 ಕೋಟಿ, ಹಿರಿಯೂರು ಉಪವಿಭಾಗದ 25 ಪ್ರಕರಣದಲ್ಲಿ 29 ಲಕ್ಷ, ಚಳ್ಳಕೆರೆ ಉಪ ವಿಭಾಗದ 24 ಪ್ರರಕರಣದಲ್ಲಿ 23 ಲಕ್ಷ, ಸೈಬರ್ ಪೊಲೀಸ್ ಠಾಣೆಯ 41 ಪ್ರಕರಣದಲ್ಲಿ 32 ಲಕ್ಷ ರೂ.ಗಳನ್ನು ವಶಪಡಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳು ಸಂಬಂಧ ಪಟ್ಟ ವಸ್ತಗಳ ಮಾಲೀಕರಿಗೆ ಹಸ್ತಾಂತರಿಸಲಾಯಿತು.

 

 

 

Leave a Reply

Your email address will not be published. Required fields are marked *