ಗ್ರಾಮೀಣ ಪ್ರದೇಶದ ಮಹಿಳೆಯರ ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆ

ಜಿಲ್ಲಾ ಸುದ್ದಿ

 

*ಗ್ರಾಮೀಣ ಪ್ರದೇಶದ ಮಹಿಳೆಯರ ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆ*

 

 

 

 

ಗ್ರಾಮೀಣ ಪ್ರದೇಶದ ಮಹಿಳೆಯರ ಮನೆ ಬಾಗಿಲಿಗೆ ಬ್ಯಾಂಕ್ ವ್ಯವಸ್ಥೆ
ಎನ್‍ಆರ್‍ಎಲ್‍ಎಂ ಯೋಜನೆಯಿಂದ ಡಿಜಿ ಪೇ ಸಖಿಗಳಿಗೆ ಡಿಜಿ ಪೇ ಬಯೋಮೆಟ್ರಿಕ್ ಡಿವೈಸ್‍ನ್ನು
ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಇಂದು‌ ಜಿಲ್ಲಾ ಪಂಚಾಯಿತಿ ಮಿನಿ ಮೀಟಿಂಗ್ ಸಭಾಂಗಣದಲ್ಲಿ ನೀಡಿದರು.
ಇದೇ ಸಮಯದಲ್ಲಿ ಮಾತನಾಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ(ಎನ್‍ಆರ್‍ಎಲ್‍ಎಂ) – ಸಂಜೀವಿನಿ ಯೋಜನೆಯಡಿ ಮಹಿಳಾ ಸ್ವ ಸಹಾಯ ಗುಂಪುಗಳನ್ನು ಸಂಘಟಿಸಿ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟಗಳನ್ನು ರಚಿಸಲಾಗಿರುತ್ತದೆ. ಸದರಿ ಒಕ್ಕೂಟದ ವ್ಯಾಪ್ತಿಯಲ್ಲಿ ಬರುವ ಗ್ರಾಮೀಣ ಪ್ರದೇಶದ ಕುಟುಂಬಗಳ ಹಣಕಾಸಿನ ಸೌಲಭ್ಯಗಳನ್ನು ಮನೆ ಬಾಗಿಲಿಗೆ ಒದಗಿಸಲು ಒಂದು ಜಿಪಿ ಒಂದು ಬಿಸಿ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 184 ಗ್ರಾಮ ಪಂಚಾಯತಿಯ ಬಿಸಿ/ಡಿಜಿ ಪೇ ಸಖಿಗಳಿಗೆ ತರಬೇತಿ ನೀಡಲಾಗಿದ್ದು, ಗ್ರಾಮೀಣ ಬಡಜನರು ಹಣಕಾಸಿನ ವ್ಯವಹಾರಕ್ಕಾಗಿ ಬ್ಯಾಂಕುಗಳಿಗೆ ಹೋಗಿ ಕಾಲ ವ್ಯರ್ಥ ಮಾಡದೇ ಮನೆಯ ಹತ್ತಿರವೇ ಡಿಜಿ ಪೇ ಸಖಿಗಳು ಹಣ ಪಡೆಯುವ ಕಾರ್ಯವನ್ನು ಡಿಜಿ ಪೇ ಸಖಿಗಳ ಮೂಲಕ ಮಾಡಲು ಸಹಕಾರಿಯಾಗಿರುತ್ತದೆ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದ್ದಾರೆ. ಇದರ ಸದುಪಯೋಗವನ್ನು ಪಡೆಯುವಂತೆ ಅವರು ಕರೆ ನೀಡಿದರು. ಡಿಜಿ ಪೇ ಸಖಿಗಳು ಹೆಚ್ಚು ವ್ಯವಹಾರ ಮಾಡುವುದರ ಮೂಲಕ ಹೆಚ್ಚು-ಹೆಚ್ಚು ಕಮಿಷನ್ ಪಡೆಯುವುದು ಹಾಗೂ ಕನಿಷ್ಠ ತಿಂಗಳಿಗೆ 200 ವ್ಯವಹಾರಗಳನ್ನು ಕೈಗೊಂಡಲ್ಲಿ ಯೋಜನೆಯಿಂದ ಹೆಚ್ಚುವರಿಯಾಗಿ ರೂ. 2000/-ಗಳ ಗೌರವಧನ ನೀಡಲಾಗುವುದೆಂದು ತಿಳಿಸಿದರು. ಇದರಿಂದ ವೃದ್ದಾಪ್ಯ ವೇತನ, ವಿಕಲಚೇತನರ ವೇತನ, ಆಯ್ದಾ ಸರ್ಕಾರಿ ಪಿಂಚಣಿ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ, ನರೇಗಾ ಯೋಜನೆ ಭತ್ಯೆಗಳನ್ನು ಪಾವತಿಸುವುದು, ಕಾಮನ್ ಸರ್ವಿಸ್ ಸೆಂಟರ್(ಸಿಎಸ್‍ಸಿ) ನೊಂದಣಿ ಮಾಡಿಸಿಕೊಂಡು ಅದರ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಹಲವಾರು ಸೇವೆಗಳನ್ನ ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *