ಶಾಸಕ ಜಿ.ಹೆಚ್ ತಿಪ್ಪಾರೆಡ್ಡಿಗೆ ಹನಿಟ್ರಾಪ್ ?

ರಾಜ್ಯ

ಚಿತ್ರದುರ್ಗದ ಬಿಜೆಪಿ ಹಿರಿಯ ಶಾಸಕ ಜಿ‌ ಹೆಚ್. ತಿಪ್ಪಾರೆಡ್ಡಿ ಅವರನ್ನು ಹನಿಟ್ರಾಪ್ ನಲ್ಲಿ ಕೆಡವಲು ಖೆಡ್ಡಾ ರೆಡಿಯಾಗಿದೆಯಾ ಎಂಬ ಅನುಮಾನ ಮೂಡುತ್ತಿದೆ.

 

 

 

ಕಳೆದ ಒಂದು ದಿನದ ಹಿಂದೆ ಶಾಸಕರಿಗೆ ದಿನವೂ ಬರುವ ಕ್ಷೇತ್ರದ ಜನತೆಯ ಕಾಲ್ ಎಂದು ರಿಸಿವ್ ನಾಡಿದ್ದಾರೆ. ಆದರೆ ಅದು ಯುವತಿಯೊಬ್ಬಳು ನಗ್ನ ಸ್ಥಿತಿಯಲ್ಲಿದ್ದು ಶಾಸಕರಿಗೆ ವಾಟ್ಸಪ್ ವಿಡಿಯೋ ಕಾಲ್ ಮಾಡಿದ್ದು, ಅದನ್ನು ಕಂಡ ಕೂಡಲೇ ಅವರು ಕಾಲ್ ಕಟ್ ಮಾಡಿದ್ದಾರೆ. ನಂತರ ಯುವತಿ ನಗ್ನ ವಿಡಿಯೋ ನ್ನು ಶಾಸಕರಿಗೆ ಕಲುಹಿಸಿದ್ದಾಳೆ.‌ಕರೆಯು 8456 939133 ನಂಬರ್ ನಿಂದ ಬಂದಿದ್ದು, ಹಾಗೂ ವಿಡಿಯೋ ನ್ನು ಕಳುಹಿಸಿದ್ದು, ಇದರ ಬಗ್ಗೆ ಶಾಸಕರು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಪೊಲೀಸರು ನಂಬರ್ ನ ಜಾಡು ಹಿಡಿದು ತನಿಖೆ ಆರಂಭಿಸಿದ್ದಾರೆ. ಆದರೆ ಶಾಸಕರನ್ನು ಹನಿಟ್ರಾಪ್ ಮಾಡುವ ಹುನ್ನಾರ ನಡೆಯುತ್ತಿದೆಯಾ ಎಂಬ ಅನುಮಾನ ಮೂಡುತ್ತಿದೆ.

Leave a Reply

Your email address will not be published. Required fields are marked *