ಕೋಟೆ ನಾಡಿನಲ್ಲಿ ಕಳೆಗಟ್ಟಿದ ಕನ್ನಡ ರಾಜ್ಯೋತ್ಸವ

ಜಿಲ್ಲಾ ಸುದ್ದಿ

ಕೋಟೆ ನಾಡಿನಲ್ಲಿ ಕಳೆಗಟ್ಟಿದ ಕನ್ನಡ ರಾಜ್ಯೋತ್ಸವ
ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ

 

 

 

ಕೋವಿಡ್ -19ರ ಭೀತಿಯಿಂದ ಹೊರಬಂದು ಸಹಜ ಜೀವನಕ್ಕೆ ಮರಳಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ಕನ್ನಡ ರಾಜ್ಯೋತ್ಸವನ್ನು ಅತ್ಯುತ್ಸಾಹದಿಂದ ಆಚರಿಸಲಾಯಿತು.
ರಾಜ್ಯೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ನಗರದ ನೀಲಕಂಠೇಶ್ವರ ದೇವಸ್ಥಾನದಿಂದ ಆರಂಭವಾದ ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರದ ಅದ್ಧೂರಿ ಮೆರವಣಿಗೆ, ನೂತನ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಡೊಳ್ಳು ಭಾರಿಸುವುದರ ಮೂಲಕ ಚಾಲನೆ ನೀಡಿದರು. ಇದಕ್ಕೂ ಮುನ್ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶುರಾಮ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಅವರೊಂದಿಗೆ ಜಿಲ್ಲಾಧಿಕಾರಿ ದಿವ್ಯಪ್ರಭ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಮೆರವಣಿಗೆ ಗಾಂಧಿ ವೃತ್ತ, ಎಸ್.ಬಿ.ಐ ವೃತ್ತ, ಅಂಬೇಡ್ಕರ್ ವೃತ್ತ ಹಾಗೂ ಒನಕೆ ಓಬವ್ವ ವೃತ್ತದ ಮೂಲಕ ಜಿಲ್ಲಾ ಪೆÇಲೀಸ್ ಕವಾಯತು ಮೈದಾನ ತಲುಪಿತು.
ಮೇಳೈಸಿದ ಜಾನಪದ ಕಲೆ, ವಿದ್ಯಾರ್ಥಿಗಳಿಂದ ಜಾಗೃತಿ: ಡೊಳ್ಳು, ಕರಡಿ ಮಜಲು, ಕಹಳೆ, ತಮಟೆ, ಬಾರಿಸುವ ಕಲಾತಂಡಗಳು ಭುವನೇಶ್ವರಿ ತಾಯಿ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ನರ್ಸಿಂಗ್ ವಿದ್ಯಾರ್ಥಿಗಳು ಆರೋಗ್ಯ ಸುರಕ್ಷತೆ, ಕುಟುಂಬ ಯೋಜನೆಯ ಭಿತ್ತಿ ಪತ್ರಗಳನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿದರು. ಆತ್ಮರಕ್ಷಣೆ ಕಲೆ ಮೈಗೂಡಿಸಿಕೊಳ್ಳುತ್ತಿರುವ ವಿದ್ಯಾರ್ಥಿನಿಯರು ಇತರೆ ಶಾಲಾ ಮಕ್ಕಳು ಇದ್ದರು.
ಇಲಾಖೆಗಳ ಯೋಜನೆ ಸಾಧನೆ ಬಿಂಬಿಸಿದ ಸ್ತಬ್ಧಚಿತ್ರಗಳು: ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಿದ ಅಬಕಾರಿ ಇಲಾಖೆ ಸ್ತಬ್ಧ ಚಿತ್ರ ಮಾದಕ ವಸ್ತ ಸೇವನೆ ಅಪಾಯ ಬಿಂಬಿಸಿತು. ರೇಷ್ಮೆ ಕೃಷಿಗೆ ಸರ್ಕಾರದಿಂದ ಉತ್ತೇಜನ ನೀಡುವ ಯೋಜನೆಗಳ ರೇಷ್ಮೇ ಇಲಾಖೆಯ ಸ್ತಬ್ಧಚಿತ್ರ, ಕ್ಷೀರಭಾಗ್ಯ, ಪೋಷಣಾ ಅಭಿಯಾನ್, ಪೌಷ್ಟಿಕ ಪುನರ್ವಸತಿ ಕೇಂದ್ರ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ವಿವಿಧ ಸ್ತ್ರೀ ಶಕ್ತಿ ಯೋಜನೆಗಳ ಮಾಹಿತಿಯುಳ್ಳ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸ್ತಬ್ದ ಚಿತ್ರ, ಮುಖ್ಯಮಂತ್ರಿ ರೈತ ವಿದ್ಯಾನಿಧಿ, ಕೃಷಿ ಯಾಂತ್ರೀಕರಣ ಸೇರಿದಂತೆ ತೋಟಗಾರಿಕೆ, ರೈತ ಶಕ್ತಿ ಯೋಜನೆ, ಪಶುಸಂಗೋಪನೆ ಕುರಿತಾದ ಕೃಷಿ ಇಲಾಖೆ ಸ್ತಬ್ಧಚಿತ್ರ,ಆಭಾ ಕಾರ್ಡ, ಕ್ಷಯ ರೋಗ ನಿಯಂತ್ರಣ, ಕುಟುಂಬ ಯೋಜನೆ, ಪ್ರಧಾನಿ ಸುರಕ್ಷಿತ ಮಾತೃತ್ವ ಯೋಜನೆ ಮಾಹಿತಿವುಳ್ಳ ಆರೋಗ್ಯ ಇಲಾಖೆ ಸ್ತಬ್ದ ಚಿತ್ರ, ಕಲಿಕಾ ಚೇತರಿಕೆ ವರ್ಷ -2022, ನೂತನ ಶಿಕ್ಷಣ ನೀತಿ , ವಯಸ್ಕರ ಶಿಕ್ಷಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಸ್ತಬ್ಧಚಿತ್ರ, ಕನ್ನಡ ಅಭಿಮಾನ ಹಾಗೂ ಸಾರಿಗೆ ಇಲಾಯ ಯೋಜನೆಗಳನ್ನು ಸಾರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸ್ತಬ್ಧ ಚಿತ್ರ, ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸೋಧ್ಯಮ ತಾಣಗಳ ಮಹತ್ವ ಸಾರುವ ಪ್ರವಾಸೋದ್ಯಮ ಇಲಾಖೆ ಸ್ತಬ್ಧ ಚಿತ್ರ, ಜೋಗಿಮಟ್ಟಿ ವನ್ಯಧಾಮ ಸೇರಿದಂತೆ ಅರಣ್ಯ ಉಳಿಸುವ ಜಾಗೃತಿ ಸಂದೇಶ ಸಾರುವ ಅರಣ್ಯ ಇಲಾಖೆ ಸ್ತಬ್ದಚಿತ್ರ ಸೇರಿದಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ತೋಟಗಾರಿಕೆ ಇಲಾಖೆ ಸ್ತಬ್ದಚಿತ್ರಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು.
ಈ ಸಂದರ್ಭದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರವಿಶಂಕರ್ ರೆಡ್ಡಿ, ಹೆಚ್ಚುವರಿ ಪೆÇಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್, ಕನ್ನಡ ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ, ಜಿಲ್ಲಾ ಮಕ್ಕಳ ರಕ್ಷಣಾ ಘಟಕಾಧಿಕಾರಿ ಲೋಕೇಶ್ವರಪ್ಪ, ಹಿರಿಯ ನಾಗರೀಕರು ಹಾಗೂ ವಿಕಲಚೇನರ ಕಲ್ಯಾಣಾಧಿಕಾರಿ ವೈಶಾಲಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *