ಒಂದು ಕ್ವಿಂಟಾಲ್ ಬೇಳೆ ನಾಲ್ಕು ಸಾವಿರ ಹೋಳಿಗೆ ನೇವೇದ್ಯ

ಜಿಲ್ಲಾ ಸುದ್ದಿ

ಕೋಗುಂಡೆಯಲ್ಲಿ ಶ್ರಾವಣ ವಿಶೇಷ ಹೋಳಿಗೆ ದಾಸೋಹ
ಭರಮಸಾಗರ ಸಮೀಪದ ಕೋಗುಂಡೆ ಗ್ರಾಮದ ಐತಿಹಾಸಿಕ ಶ್ರೀ ಬಸವೇಶ್ವರ ಸ್ವಾಮಿಗೆ ಕಡೇ ಶ್ರಾವಣ ಸೋಮವಾರದ ಪ್ರಯುಕ್ತ ವಿಶೇಷ ಪೂಜೆ ಹೋಳಿಗೆ ದಾಸೋಹ ವನ್ನು ಏರ್ಪಡಿಸಲಾಗಿತ್ತು.
ಸುಮಾರು 30 ಪಾಕಪ್ರವೀಣರು ಐವತ್ತಕ್ಕೂ ಹೆಚ್ಚು ಗ್ರಾಮದ ಮಹಿಳೆಯರು ಹಾಗೂ ಯುವಕರು ಬರೋಬ್ಬರಿ ಒಂದು ಕ್ವಿಂಟಾಲ ನಲ್ಲಿ 4000 ಕ್ಕೂ ಹೆಚ್ಚು ಬೇಳೆಯ ಹೋಳಿಗೆ ತಯಾರಿಸಿದ್ದರು. ಬೆಳೆಗ್ಗೆ 9ಕ್ಕೆ ಸರಿಯಾಗಿ ದೇವರಿಗೆ ವಿಶೇಷ ರುದ್ರಾಭಿಷೇಕ ಮತ್ತು ಪೂಜೆ ನೈವೇದ್ಯದ ನಂತರ ದೇವಸ್ಥಾನದ ವಿಶಾಲ ಆವರಣದಲ್ಲಿ ಹೋಳಿಗೆ ಪ್ರಸಾಧ ವಿನಿಯೋಗ ಆಂಭಗೊಂಡು ಸಂಜೆಯ ವರೆಗೂ ನಿರಂತರವಾಗಿ ನಡೆಯಿತು . ಸ್ಥಳೀಯ ಮಹಿಳೆಯರು ಪುರುಷರು, ಅವಳಿ ಜಿಲ್ಲೆಯಿಂದ ಆಗಮಿಸಿದ್ದ ಭಕ್ತರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾಧ ಸ್ವೀಕರಿಸಿದರು. ರುಚಿ ರುಚಿಯಾದ ಹೋಳಿಗೆ ಪ್ರಸಾಧ ಹಾಗೂ ಭೋಜನದ ಸವಿಯನ್ನುಂಡರು.

 

 

 

ಏಳುನೂರು ವರ್ಷಗಳ ಇತಿಹಾಸವಿರುವ ಈ ದೇವಸ್ಥಾನದಲ್ಲಿ ವರ್ಷವಿಡೀ ವಿಶೇಷ ಕಾರ್ಯಕ್ರಮಗಳು ಜಗುತ್ತವೆ ಶ್ರಾವಣದಲ್ಲಿ ಒಂದು ತಿಂಗಳು ಪೂರ್ತಿ ಪೂಜೆಯನ್ನು ವಿಜೃಂಭಣೆಯಿಂದ ಮಾಡಲಾಗುತ್ತದೆ
-ಬಸವರಾಜ್ ಪ್ರಧಾನ ಅರ್ಚಕ ಬಸವೇಶ್ವರ ದೇವಸ್ಥಾನ ಕೋಗುಂಡೆ
ಕೋಗುಂಡೆ ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನದ ಕಾರ್ಯಕ್ರಮಗಳು ಅತ್ಯಂತ ಅನ್ಯೋನ್ಯತೆಯಿಂದ ಭಯ ಭಕ್ತಿಯ ವಿಜೃಂಭಣೆಯಿಂದ ನಡೆಯುತ್ತಿದೆ
-ಗ್ರಾಮದ ಹಿರಿಯ ವ್ಯಕ್ತಿ ಕಲ್ಲೇಶಪ್ಪ
ದೇವರ ಕೆಲಸಕ್ಕ ಯುವಕರು, ಕೋಗುಂಡೆ ಗ್ರಾಮಸ್ಥರು ಹಗಲಿರುಳು ಸೇವೆ ಸಲ್ಲಿಸುತ್ತಿದ್ದಾರೆ. ಒಂದು ತಿಂಗಳು ಧಾರ್ಮಿಕ ಕಾರ್ಯಕ್ರಮ ಗಳು ಕಳೆದ 10 ವರ್ಷದಿಂದ ನಿರಂತರ ನಡೆದಿದೆ ಈ ವರ್ಷ ವಿಶೇಷವಾಗಿ ಒಂದು ಕ್ವಿಂಟಲ್ ಬೇಳೆ ಹೋಳಿಗೆ, 30 ಕೆಜೆ ಅಕ್ಕಿ ಪಾಯಿಸ, ನಾಲ್ಕು ಕ್ವಿಂಟಾಲ್ ಅನ್ನ ವ್ಯವಸ್ಥೆ ಮಾಡಲಾಗಿದೆ, ಶಾಮನೂರು , ಶಿಮಗೊಂಡನಹಳ್ಳಿ, ಕಬ್ಬೂರು, ನಾಗನೂರು ಭಾಗದಿಂದ ಬಹಳಷ್ಟು ಭಕ್ತರು ಆಗಮಿಸಿ ಸ್ವಾಮಿಯ ಸೇವೆಯಲ್ಲಿ ಪಾಲ್ಗೊಂಡಿದ್ದಾರೆ. ಇಲ್ಲಿ ಕೂಡಲ ಸಂಗಮ ಮಾದರಿಯಲ್ಲಿ ಐಕ್ಯ ಮಂಟಪ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 

Leave a Reply

Your email address will not be published. Required fields are marked *