ಜಾತ್ರೆಗೆ ಬರುವ ಭಕ್ತರಿಗೆ ತೊಂದರೆ ಅಗದಂತೆ ವ್ಯವಸ್ಥೆ ಮಾಡಿ

ರಾಜ್ಯ

 

ಚಳ್ಳಕೆರೆ ಗೌರಸಮುದ್ರ ಮಾರಮ್ಮ ದೇವಿ ಜಾತ್ರೆಗೆ ಬರುವಂತಹ ಭಕ್ತರಿಗೆ ಯಾವುದೇ ಕೊರತೆ ಆಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನಿಕೇರಿ ಅವರು ತಿಳಿಸಿದರು. ಇಂದು ಗೌರಸಮುದ್ರ ಮಾರಮ್ಮ ದೇವಸ್ಥಾನದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಗೌರಸಮುದ್ರ ಮಾರಮ್ಮ ದೇವಿ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳನ್ನು ಕುರಿತು ಅವರು ಮಾತನಾಡಿದರು. ಈ ಬಾರಿ ಅದ್ದೂರಿಯಾಗಿ ಆಚರಣೆಗೆ ಸಿದ್ಧತೆ ನಡೆದಿದ್ದು ಮಾರಮ್ಮ ದೇವಿ ಜಾತ್ರೆಗೆ ಸುಮಾರು ಐದರಿಂದ ಏಳು ಲಕ್ಷ ಜನ ಹೆಚ್ಚು ಭಕ್ತಾದಿಗಳು ಜಾತ್ರೆಗೆ ಆಗಮಿಸಲಿದ್ದು ಮೊದಲಿನಂತೆ ಈಗಲೂ ಸಹ ಜಾತ್ರೆ ಯಶಸ್ವಿಗೆ ಎಲ್ಲಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗುತ್ತದೆ ಜಾತ್ರೆಗೆ ಬರುವಂತಹ ಭಕ್ತರಿಗೆ ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ರಿಪೇರಿ ಜಾತ್ರೆ ಹರಾಜು, ವಿದ್ಯುತ್ ತಾತ್ಕಾಲಿಕ ಪಶು ಆಸ್ಪತ್ರೆ ಪೋಲೀಸ್ ಬಂದೋಬಸ್ತ್ ಸಾರಿಗೆ ವ್ಯವಸ್ಥೆ ಈ ಎಲ್ಲ ಕಾರ್ಯಗಳನ್ನು ಉತ್ತಮವಾಗಿ ನಿರ್ವಹಿಸಬೇಕು.ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೆ ತೊಂದರೆಯಾಗದಂತೆ ,ಪೋಲೀಸ್ ಬಂದೋಬಸ್ತ್ ಮಾಡಬೇಕು.ಜಾತ್ರೆಗೆ ಆಗಮಿಸುವಂತಹ ಭಕ್ತರಿಗೆ ಯಾವುದೇ ಕೊರತೆ ಕಾಡಬಾರದು ಎಂದರು.

 

 

 

ಜಿಲ್ಲಾ ಎಸ್ಪಿ ಕೆ.ಪರಶುರಾಮ ಮಾತನಾಡಿ ಜಾತ್ರೆ ಬಂದೋಬಸ್ತ್ ಗಾಗಿ 1000 ಪೋಲೀಸ್ ಸಿಬ್ಬಂದಿ ಆಯೋಜನೆ ಮಾಡಲಾಗುವುದು,ಜಾತ್ರೆಯಲ್ಲಿ ಬರುವ ಹೋಗುವ ಎಲ್ಲಾ ವಾಹನಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು,ತುಮುಲು ನಲ್ಲಿ ಮೂರು ಕಡೆ ವಾಚ್ ಟವರ್ ,ಸಿಸಿ ಕ್ಯಾಮರಾ ಅಳವಡಿಕೆ ,‌ಬ್ಯಾರೆಕೆಡ್ ವ್ಯವಸ್ಥೆ ಮಾಡಲಾಗುವುದು ,ಜಾತ್ರೆಗೆ ಅತಿ ಹೆಚ್ಚು ಭಕ್ತರು ಬರುವ ಹಿನ್ನೆಲೆಯಲ್ಲಿ ಭಕ್ತರಿಗೆ ಅವಶ್ಯಕತೆಗೆ ತಕ್ಕಂತೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ತಹಶೀಲ್ದಾರ್ ಎನ್ ರಘುಮೂರ್ತಿ ಮಾತನಾಡಿ ಶ್ರೀ ಮಾರಮ್ಮ ದೇವಿ ಜಾತ್ರೆಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು ಭಕ್ತಾದಿಗಳಿಗೆ ತೊಂದರೆಯಾಗದಂತೆ ಮುಖ್ಯವಾಗಿ 40 ಟ್ಯಾಂಕರ್ ಗಳಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಜಾತ್ರೆಗೆ ಬರುವಂತಹ ಭಕ್ತರಿಗೆ ಅನುಕೂಲಕ್ಕಾಗಿ ಗೌರಸಮುದ್ರ ಗ್ರಾಮ ಹಾಗೂ ತುಮುಲಿಗೆ ಸೇರುವ ಸುಮಾರು 17 ರಸ್ತೆ ದುರಸ್ತಿ ರಸ್ತೆಗೆ ಅಡ್ಡಲಾಗಿರುವ ಗಿಡ ಗಂಟೆ ತೆರವಿನ ಕಾರ್ಯ, ರಸ್ತೆಯಲ್ಲಿ ಬಿದ್ದಿರುವ ಗುಂಡಿ ಮುಚ್ಚಬೇಕು ಜಾತ್ರೆಯ ತಾತ್ಕಾಲಿಕವಾಗಿ ನಿರ್ಮಿಸಲಾದ ಅಂಗಡಿಗಳು ಗಾಡಿಗಳು ಮತ್ತು ವಾಹನಗಳ ನಿಲ್ದಾಣ ಹಾಗೂ ಇದೇ ರೀತಿಯಲ್ಲಿ ಹಾಕುವ ಅಂಗಡಿ ಮಾಲೀಕರಿಂದ ನೇಮನಸಾರ ನಿಗದಿತ ಶುಲ್ಕ ವಸೂಲಿ ಮಾಡಿ ಜಮಾ ಮಾಡದೆ ಪಂಚಾಯತಿಗೆ ಜಮಾ ಮಾಡುವಂತೆ ಮತ್ತು ಪಂಚಾಯತಿ ವತಿಯಿಂದ ಬಿದಿ ದೀಪಗಳ ವ್ಯವಸ್ಥೆ ಚರಂಡಿ ಶುದ್ಧಗೊಳಿಸುವ ವ್ಯವಸ್ಥೆ ಹಾಗೂ ತುಂಬಲು ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಕ್ರಮ ವಹಿಸುವಂತೆ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸ್ವಚ್ಛತಾ ಕಾರ್ಯಕ್ಕೆ ಸಂಬಂಧಿಸಿದಂತೆ ಈ ಬಾರಿ ಅನುದಾನ ಕೊರತೆ ಇರುವುದರಿಂದ ಈ ಬಾರಿ 5 ಲಕ್ಷ ರೂಪಾಯಿ ಅನುದಾನವನ್ನು ಕಂದಾಯ ಇಲಾಖೆ ವತಿಯಿಂದ ಭರಿಸುವಂತೆ ಮನವಿ ಮಾಡಲಾಯಿತು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂಬ ಅಂಶವನ್ನು ತಹಶೀಲ್ದಾರ್ ಅಧ್ಯಕ್ಷರ ಗಮನಕ್ಕೆ ತಂದರು ಇನ್ನು ಜಾತ್ರೆಯಲ್ಲಿ ನಿರಂತರ ವಿದ್ಯುತ್ ಸರಬರಾಜು ಅವಶ್ಯಕತೆ ಇರುವುದರಿಂದ ಈ ಕುರಿತಂತೆ ಸಹಾಯಕ ಕಾರ್ಯ ಪಾಲಕ ಅಭಿಯಂತರ ಬೆಸ್ಕಾಂ ತಾಲೂಕು ಇವರು 10 ಟ್ರಾನ್ಸ್ಫಾರ್ಮರ್ ಗಳನ್ನು ಪೂರ್ವ ಸಿದ್ಧತೆ ಮಾಡಿಕೊಂಡಿರುವುದಾಗಿ ಹಾಗೂ ಗ್ರಾಮಸ್ಥರ ಮನವಿ ಮೇರೆಗೆ ಜಾತ್ರೆ ಮಹೋತ್ಸವ ಶುರುವಾದ ಐದು ದಿನದಿಂದ ವಿದ್ಯುತ್ ನಿರಂತರ ಸಂಪರ್ಕವನ್ನು ಕಲ್ಪಿಸುವಂತೆ ಸೂಚನೆ ನೀಡಿದರು.

Leave a Reply

Your email address will not be published. Required fields are marked *