ಓಬವ್ವ ಜಯಂತಿಯ ಸಿದ್ದತೆ ಪರಿಶೀಲಿಸಿದ ಶಾಸಕ ತಿಪ್ಪಾರೆಡ್ಡಿ

ಆರೋಗ್ಯ

 ಈ ಬಾರಿ ರಾಜ್ಯ ಮಟ್ಟದ ವೀರ ಮಹಿಳೆ  ಒನಕೆ ಓಬವ್ವ ಜಯಂತಿ ಆಚರಣೆ ಗಂಡು ಮೆಟ್ಟಿದ ನಾಡು ಚಿತ್ರದುರ್ಗದಲ್ಲಿ ಮಾಡುತ್ತಿರುವುದು  ನಮ್ಮ ದುರ್ಗಕ್ಕೆ  ಹೆಮ್ಮೆ ತಂದಿದ್ದು  ಎಲ್ಲಾ ಸಮಾಜದವರು  ಜಾತ್ಯತೀತವಾಗಿ ಭಾಗವಹಿಸಿ ಯಶಸ್ವಿಗೊಳಿಸಿ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ  ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ (ಮುರುಘರಾಜೇಂದ್ರ ಕ್ರೀಡಾಂಗಣ) ಡಿ.18 ರಂದು ನಡೆಯಲಿರುವ ಒನಕೆ ಓಬವ್ವ ಜಯಂತಿಯ  ಸಿದ್ದತೆಯನ್ನು  ಜಿಲ್ಲಾಡಳಿತದೊಂದಿಗೆ ತೆರಳಿ  ಪರಿಶೀಲನೆ ನಡೆಸಿದರು.ಒನಕೆ ಓಬವ್ವನ ಧೈರ್ಯ, ಸಾಹಸ ಹಾಗೂ ಸಮಯಪ್ರಜ್ಞೆ ಯುವ ಪೀಳಿಗೆಗೆ ಮಾದರಿಯಾಗಬೇಕಿದೆ.  ಓಬವ್ವನ ಇತಿಹಾಸವನ್ನು ಪ್ರತಿಯೊಬ್ಬರು  ಅರಿತುಕೊಳ್ಳಬೇಕು.ಚಿತ್ರದುರ್ಗದ ಇತಿಹಾದಲ್ಲಿ ಓಬವ್ವನ ಎಲ್ಲಾ ಮನದಲ್ಲಿ ಇದ್ದಾರೆ..
ಸಿಎಂ ಬಸವರಾಜ್ ಬೊಮ್ಮಾಯಿ ಅವರು  ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು  ಚಿತ್ರದುರ್ಗದಲ್ಲಿ ಆಚರಿಸಲು ನಿರ್ಧಾರ ಮಾಡಿರುವುದಕ್ಕೆ ಅವರಿಗೆ ಚಿತ್ರದುರ್ಗ ಶಾಸಕನಾಗಿ ಮತ್ತು ನಮ್ಮ ಕ್ಷೇತ್ರದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ‌. 
ಓಬವ್ವ   ನಮ್ಮ ಮನೆ  ಮಗಳೆಂಬ  ಭಾವನೆಯಲ್ಲಿ  ಎಲ್ಲ ಸಮಾಜದವರು, ಸಂಘಟನೆಗಳು, ಸಮುದಾಯ, ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸಿ ಎಂದರು. ದುರ್ಗ ಎಂದರೆ ಓಬವ್ವ ನೆನಪು ಎಲ್ಲಾ ಕಣ್ಣ ಮುಂದೆ ಬರುವುದು ವಿರೋಧಿಗಳ ಸದೆಬಡಿದ ದೃಶ್ಯ, ಆದೃಶ್ಯ‌ ನೋಡಿದರೆ ಮೈ ರೋಮಾಂಚನ ವಾಗುತ್ತದೆ ಎಂದರು.ಜಿಲ್ಲೆಗೆ ಬರುವ ಜನರಿಗೆ ಊಟದ ವ್ಯವಸ್ಥೆ, ಪಾರ್ಕಿಂಗ್ ವ್ಯವಸ್ಥೆ, ಕಾರ್ಯಕ್ರಮ ರೂಪರೇಷೆಗಳನ್ನು  ಅಚ್ಚುಕಟ್ಟಾಗಿ ಮಾಡಲು ಜಿಲ್ಲಾಡಳಿತ ಮತ್ತು ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸಕಲ‌ ಸಿದ್ದತೆ ಸಹ ನಡೆದಿದ್ದು ಲಕ್ಷಾಂತರ ಜನರು ಆಗಮಿಸುವ ನಿರೀಕ್ಷೆ ಇದೆ. ಇತರೆ ಜಿಲ್ಲೆಗಳಿಂದ  ರಾಜ್ಯದಾದ್ಯಂತ ಜನರು ಆಗಮಿಸಿತ್ತಿದ್ದಾರೆ. ಕ್ರೀಡಾಂಗಣ ಸುತ್ತಮುತ್ತಲಿನ ಸ್ವಚ್ಚತೆಗೊಳಿಸಲು ನಗರಸಭೆ ಅವರಿಗೆ ತಿಳಿಸಿದ್ದು ಎಲ್ಲಾ ಕೆಲಸ ಕಾರ್ಯಗಳ ತ್ವರಿತವಾಗಿ ನಡೆಯುತ್ತಿದ್ದು ಎಲ್ಲಾರೂ ಸೇರಿ ಒನಕೆ ಓಬವ್ವ ಜಯಂತಿಯನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಸಾರ್ವಜನಿಕರು ಎಲ್ಲಾರೂ ಒಟ್ಟಿಗೆ ಸೇರಿ ಯಶಸ್ವಿಗೊಳಿಸೋಣ ಎಂದು ತಿಳಿಸಿದರು.  ಈ‌  ಸಂದರ್ಭದಲ್ಲಿ  ಜಿಲ್ಲಾಧಿಕಾರಿ ದಿವ್ಯ ಪ್ರಭು ಜಿ.ಆರ್.ಜೆ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್,ಅಪರ ಜಿಲ್ಲಾಧಿಕಾರಿ ಬಾಲಕೃಷ್ಣ, ಡಿವೈಎಸ್ಪಿ  ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಜಂಟಿ ನಿರ್ದೇಶಕ ಅಶೋಕ ಛಲವಾದಿ, ಪಿಎಸ್ಐ ನಹಿಂ, ನಗರಸಭೆ ಪರಿಸರ ವಿಭಾಗದ ಜಾಫರ್ ,ಪೋಲಿಸ್ ಇಲಾಖೆ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದವರು ಇದ್ದರು.

 

 

 

Leave a Reply

Your email address will not be published. Required fields are marked *