Chitradurga corona phobia in sira taluk test

ಶಿರಾದಲ್ಲಿ ಕೋರೋನಾ ಭೀತಿ ಮತದಾರರಿಗೆ ಕೋರೋನಾ ಟೆಸ್ಟ್

ಆರೋಗ್ಯ

ಶಿರಾದಲ್ಲಿ ಕೋರೋನಾ ಭೀತಿ ಮತದಾರರಿಗೆ ಕೋರೋನಾ ಟೆಸ್ಟ್Chitradurga corona phobia in sira taluk test

ತುಮಕೂರು,ನ06(ಸಂವಾ)-ಶಿರಾ ಉಪಚುನಾವಣೆಯಲ್ಲಿ ಮತದಾನ ಮಾಡಿದವರಿಗೆ ಕೋರೋನಾ ಹರಡುವ ಭೀತಿಯಿಂದ ಶಿರಾ ತಾಲೂಕಿನಾದ್ಯಂತ  ಕೊರೋನಾ ಪರೀಕ್ಷೆ ಮಾಡಲು ಮುಂದಾಗಿರು ಜಿಲ್ಲಾಡಳಿತ ಪರೀಕ್ಷೆ ಅರಂಭಿಸಿದೆ.

 

 

 

ಕೊರೋನಾ ಭೀತಿಯಿಂದ ಕಂಗೆಟ್ಟಿರುವ ಜಿಲ್ಲಾಡಳಿತ ಶಿರಾ ಉಪ ಚುನಾವಣೆಯಲ್ಲಿ ಮತದಾನ ಮಾಡಿರುವ ಸುಮಾರು 36 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೋರೋನಾ ಟೆಸ್ಟ್ ಮಾಡಲಾಗುತ್ತಿದೆ. ಹಾಗೆಯೇ 17  ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಟೆಸ್ಟ್ ನಡೆಯುತ್ತಿದೆ.   ವೈದ್ಯರು, ನರ್ಸ್  ಗಳು,  ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳ ತಂಡಗಳನ್ನು ರಚಿಸಿ ತಾಲೂಕಿನಾದ್ಯಂತ ಕೋರೋನಾ ಟೆಸ್ಟ್ ಮಾಡಲಾಗುತ್ತಿದೆ.  ವಯೋವೃದ್ದರಿಗೆ ಕಡ್ಡಾಯವಾಗಿ ಟೆಸ್ಟ್ ಮಾಡಲಾಗುತ್ತಿದೆ. ಜೊತೆಗೆ ಕೆಮ್ಮು ನೆಗಡಿ ಜ್ವರ ಕಾಣೊಸಿಕೊಂಡಿರುವವರನ್ನು ಕಡ್ಡಾಯವಾಗಿ ಟೆಸ್ಟ್ ಗೆ ಒಳಪಡಿಸಲಾಗುತ್ತಿದೆ. ಮತದಾನ ಮಾಡಿ ಕೋರೋನಾ ಟೆಸ್ಟ್ ಗೆ ಒಳಗಾಗುತ್ತಿರುವ ಮತದಾರರು  ನಮಗೆ ಕೋರೋನಾ ಸೋಂಕು ತಗಲದೆ ಇರಲಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದಾರೆ.

ಸಂಯುಕ್ತವಾಣಿ

ಡಿ.ಕುಮಾರಸ್ವಾಮಿ

Leave a Reply

Your email address will not be published. Required fields are marked *