189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

ಆರೋಗ್ಯ

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಬಿಜೆಪಿ ಪಕ್ಷದಿಂದ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಧಿಕೃತ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದೆ. 189 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಜೆಪಿ ಹೈಕಮಾಂಡ್ ಇಂದು ಘೋಷಣೆ ಮಾಡಿದೆ.

ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಕರ್ನಾಟಕ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರು, ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸೋ ಸಂಬಂಧ ಜಿಲ್ಲಾ ಹಂತದಲ್ಲಿ, ತಾಲೂಕು ಹಂತದಲ್ಲಿ, ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಅಭ್ಯರ್ಥಿಗಳ ಮಾಹಿತಿ ಸಂಗ್ರಹಿಸಲಾಗಿದೆ ಎಂದರು.

ಬಿಎಸ್ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಹಲವು ಸುತ್ತಿನ ಮಾತುಕತೆಯನ್ನು ಚರ್ಚಿಸಲಾಗಿದೆ. ಬಿಜೆಪಿಯಿಂದ ನಡೆಸಿದಂತ ಬೂತ್ ಲೆವೆಲ್ ನಿಂದ ರಾಜ್ಯ ಮಟ್ಟದವರೆಗಿನ ವರದಿಯನ್ನು ಆಧರಿಸಿ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಗೊಳಿಸಲಾಗಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಎಲ್ ಸಂತೋಷ್ ಸೇರಿದಂತೆ ವಿವಿಧ ನಾಯಕರ ಜೊತೆಯಲ್ಲಿಯೂ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಂಬಂಧ ಚರ್ಚಿಸಲಾಗಿದೆ. ಅಂತಿಮವಾಗಿ ಮೊದಲ ಪಟ್ಟಿಯಲ್ಲಿ 189 ಕ್ಷೇತ್ರಗಳಿಗೆ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

 

 

 

ಈ ಬಳಿಕ ಮಾತನಾಡಿದಂತ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, 52 ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. 32 ಓಬಿಸಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. 30 ಎಸ್ಸಿ, 16 ಎಸ್ಟಿಗಳಿಗೆ ಟಿಕೆಟ್ ನೀಡಲಾಗಿದೆ. ಐವರು ವಕೀಲರಿಗೆ, 9 ವೈದ್ಯರಿಗೆ, 3 ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ, ಒಬ್ಬರು ನಿವೃತ್ತ ಐಪಿಎಸ್ ಆಫೀಸ್ ಸರ್ ಗಳಿಗೆ, ಮೂವರು ನಿವೃತ್ತ ಸರ್ಕಾರಿ ನೌಕರರಿಗೆ, 8 ಸಾಮಾಜಿಕ ಕಾರ್ಯಕರ್ತರಿಗೆ ಟಿಕೆಟ್ ನೀಡಲಾಗಿದೆ ಎಂದರು.

ಹೀಗಿದೆ 189 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ

ಬಸವರಾಜ ಬೊಮ್ಮಾಯಿ – ಶಿಗ್ಗಾವಿ
ನೇಪಾಣಿ – ಶಶಿಕಲಾ ಜೊಲ್ಲೆ
ಚಿಕ್ಕೋಡಿ – ರಮೇಶ್ ಕತ್ತಿ
ಅಥಣಿ- ಮಹೇಶ್ ಕುಮಟವಳ್ಳಿ
ಕುಡುಚಿ- ಪಿ ರಾಜೀವ್
ರಾಯಬಾಗ್ – ದುರ್ಯೋಧನ್ ಐಹೊಳೆ
ಹುಕ್ಕೇರಿ – ನಿಖಿಲ್ ಕತ್ತಿ
ಹರಭಾವಿ – ಬಾಲಚಂದ್ರ ಜಾರಕಿಹೊಳಿ
ಗೋಕಾಕ್ – ಶ್ರೀಧರ್ ಜಾರಕಿಹೊಳಿ
ಕಾಗವಾಡ – ಶ್ರೀಮಂತ ಪಾಟೀಲ್
ಬೆಳಗಾವಿ ದಕ್ಷಿಣ – ಅಭಯ್ ಪಾಟೀಲ್
ಬೆಳಗಾವಿ ಗ್ರಾಮೀಣ – ನಾಗೇಶ್ ಮರೂಲ್
ಕಿತ್ತೂರು – ಮಹಾಂತೇಶ್ ದೊಡ್ಡಗೌಡರ್
ಬೈಲಹೊಂಗಲ – ಜಗದೀಶ್ ಚೆನ್ನಪ್ಪ
ಸವದತ್ತಿ – ಶ್ರೀಮತಿ ರತ್ನ ವಿಶ್ವನಾಥ್ ಮಹಾಮನಿ
ಮುಧೋಳ್ – ಗೋವಿಂದ್ ಕಾರಜೋಳ
ಬೀಳಗಿ – ಮುರುಗೇಶ್ ನಿರಾಣಿ
ಬಾದಾಮಿ – ಶಾಂತಗೌಡ ಪಾಟೀಲ್
ಬಾಗಲಕೋಟೆ – ಚರಂತಿ ಮಠ್
ಮುಂಡಗೋಡು – ಜಿ ಪಾಟೀಲ್
ಮುದ್ದೇಬಿಹಾಳ – ಎ ಎಸ್ ಪಾಟೀಲ್
ಬಿಜಾಪುರ ಸಿಟಿ – ಬಸನಗೌಡ ಪಾಟೀಲ್ ಯತ್ನಾಳ್
ಸಿಂಧಗಿ – ರಮೇಶ್ ಹೊಸನೂರು
ಸುರಪುರ – ನರಸಿಂಹ ನಾಯಕ್
ಯಾದಗಿರಿ – ವೆಂಕಟರೆಟ್ಟಿ
ಚಿತ್ತಾಪುರ – ಮಣಿಕಾಂತ ರಾಥೋಡ್
ಗುಲಬರ್ಗ ಗ್ರಾಮೀಣ – ಬಸವರಾಜ್
ಕುಮಟ – ದಿನಕರ್ ಶೆಟ್ಟಿ
ಶಿರಸಿ – ವಿಶ್ವೇಶ್ವರ ಹೆಗಡೆ
ರಾಣಿಬೆನ್ನೂರು – ಅರುಣ್ ಕುಮಾರ್ ಪೂಜಾರ್
ಹೂವಿನಹಡಗಲಿ – ಶ್ರೀಕೃಷ್ಣ ನಾಯಕ್
ಶಿರಹಟ್ಟಿ – ಚಂದ್ರು ಲಮಾಣಿ
ಯಲಬುರ್ಗ – ಹಾಲಪ್ಪ ಆಚಾರ್
ಬೆಳಗಾವಿ – ರವಿ ಪಾಟೀಲ್
ಚಿತ್ತಾಪುರ – ಮಣಿಕಂಠ
ಬಳ್ಳಾರಿ ನಗರ – ಸೋಮಶೇಖರ ರೆಡ್ಡಿ
ಸೆಂಡೂರು – ಶಿಲ್ಪ ರಾಘವೇಂದ್ರ
ಮೊಳಕಾಲ್ಮೂರು – ಎಸ್ ತಿಪ್ಪೇಸ್ವಾಮಿ
ಚಳ್ಳಕೆರೆ – ಅನಿಲ್ ಕುಮಾರ್
ಚಿತ್ರದುರ್ಗ – ಜಿಹೆಚ್ ತಿಪ್ಪಾರೆಡ್ಡಿ
ಹಿರಿಯೂರು – ಪೂರ್ಣಿಮಾ ಶ್ರೀನಿವಾಸ್
ಹೊಸದುರ್ಗ – ಲಿಂಗಮೂರ್ತಿ
ಹೊಳಲ್ಕೆರೆ – ಚಂದ್ರಪ್ಪ
ಶಿವಮೊಗ್ಗ ಗ್ರಾಮಾಂತರ – ಅಶೋಕ್ ನಾಯಕ್
ಬಳ್ಳಾರಿ ಗ್ರಾಮೀಣ – ಶ್ರೀರಾಮುಲು
ಶಿಕಾರಿಪುರ – ಬಿವೈ ವಿಜಯೇಂದ್ರ
ಸೊರಬ- ಕುಮಾರ ಬಂಗಾರಪ್ಪ
ಸಾಗರ – ಹರತಾಳು ಹಾಲಪ್ಪ
ಉಡುಪಿ – ಯಶಪಾಲ್ ಸುವರ್ಣ
ತುರುವೆಕೇರೆ- ಮಸಾಲೆ ಜಯರಾಂ
ತುಮಕೂರು ನಗರ – ಜಿಬಿ ಜ್ಯೋತಿಗಣೇಶ್
ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್
ಚಿಂತಾಮಣಿ- ವೇಣುಗೋಪಾಲ್
ತೀರ್ಥಹಳ್ಳಿ – ಅರಗ ಜ್ಞಾನೇಂದ್ರ
ಚಿಕ್ಕಮಗಳೂರು- ಸಿಟಿ ರವಿ
ಬಂಗಾರಪೇಟೆ – ಎಂ ನಾರಾಯಣಸ್ವಾಮಿ
ಕೋಲಾರ- ವರ್ತೂರು ಪ್ರಕಾಶ್
ಬಾಗೇಪಲ್ಲಿ – ಮುನಿರಾಜು
ಯಲಹಂಕ – ಎಸ್ ಆರ್ ವಿಶ್ವನಾಥ್
ಯಶವಂತಪುರ – ಎಸ್ ಟಿ ಸೋಮಶೇಖರ್
ರಾಜರಾಜೇಶ್ವರಿ ನಗರ – ವಿ ಮುನಿರತ್ನ
ಮಹಾಲಕ್ಷ್ಮೀಲೇಔಟ್ – ಗೋಪಾಲಯ್ಯ
ಮಲ್ಲೇಶ್ವರಂ – ಡಾ.ಸಿಎನ್ ಅಶ್ವತ್ಥನಾರಾಯಣ
ಪುಲಕೇಶಿ ನಗರ – ಮುರುಳಿ
ಸರ್ವಜ್ಞ ನಗರ – ಪದ್ಮನಾಭ ರೆಡ್ಡಿ
ಸಿವಿ ರಾಮನ್ ನಗರ – ಎಸ್ ರಘು
ಶಾಂತಿನಗರ – ಶಿವಕುಮಾರ್
ಗಾಂಧಿ ನಗರ – ಎ ಆರ್ ಗೌಡ
ರಾಜಾಜಿನಗರ – ಎಸ್ ಸುರೇಶ್ ಕುಮಾರ್
ಚಾಮರಾಜಪೇಟೆ – ಭಾಸ್ಕರ್ ರಾವ್ ನಿವೃತ್ತ ಐಪಿಎಸ್ ಅಧಿಕಾರಿ
ಬಿಟಿಎಂ ಲೇಔಡ್ – ಶ್ರೀಧರ್ ರೆಡ್ಡಿ
ಬೊಮ್ಮನಹಳ್ಳಿ – ಸತೀಶ್ ರೆಡ್ಡಿ
ಕೆ ಆರ್ ಪುರಂ – ಭೈರತಿ ಬಸವರಾಜ
ಹೊಸಕೋಟೆ – ಎಂ ಟಿ ಬಿ ನಾಗರಾಜ್
ಸಿಂಧನೂರು – ಕೆ ಕರಿಯಪ್ಪ
ಮಸ್ಕಿ – ಪ್ರತಾಪ್ ಗೌಡ ಪಾಟೀಲ್
ಚೆನ್ನಪಟ್ಟಣ – ಸಿಪಿ ಯೋಗೇಶ್ವರ್
ಮಂಡ್ಯ – ಅಶೋಕ್ ಜಯರಾಂ
ಪದ್ಮನಾಭನಗರ ಹಾಗೂ ಕನಕಪುರ – ಆರ್ ಅಶೋಕ್
ಬಸವನಗುಡಿ – ರವಿ ಸುಬ್ರಹ್ಮಣ್ಯ
ಆನೇಕಲ್ – ಹುಲ್ಲಳ್ಳಿ ಶ್ರೀನಿವಾಸ್
ರಾಮನಗರ – ಗೌತಮ್ ಗೌಡ
ಮಡಿಕೇರಿ- ಎಂಪಿ ಅಪ್ಪಚ್ಚುರಂಜನ್
ಪಿರಿಯಾಪಟ್ಟಣ – ಸಿ ಹೆಚ್ ವಿಜಯಶಂಕರ್
ವಿಜಯನಗರ – ಸಿದ್ಧಾರ್ಥ್ ಸಿಂಗ್
ಹೊನ್ನಾಳಿ – ಎಂಪಿ ರೇಣುಕಾಚಾರ್ಯ
ವರುಣ ಹಾಗೂ ಚಾಮರಾಜನಗರ- ವಿ.ಸೋಮಣ್ಣ
ಟಿ ನರಸೀಪುರ – ಡಾ.ರೇವಣ್ಣ
ಕೊರಟಗೆರೆ – ಅನಿಲ್ ಕುಮಾರ್
ಗುಂಡ್ಲಪೇಟೆ – ನಿರಂಜನ್ ಕುಮಾರ್

 

Leave a Reply

Your email address will not be published. Required fields are marked *