ಪ್ರತೀ ಕ್ಷೇತ್ರದಲ್ಲಿ ಪ್ರಗತಿ ಹೊಂದಲು ಶಿಕ್ಷಣ ಮುಖ್ಯ

ಆರೋಗ್ಯ

ಪ್ರತಿ ಕ್ಷೇತ್ರದಲ್ಲಿ ಪ್ರಗತಿ ಹೊಂದುವುದಕ್ಕೆ ಶಿಕ್ಷಣ ಮುಖ್ಯವಾಗಿದ್ದು,ಶಿಕ್ಷಣ ವೇ ಶಕ್ತಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ತಾಲೂಕು ಆಡಳಿತ ಹಾಗೂ ಸಮುದಾಯದ ವತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾಯಕ ಶರಣ ನುಲಿಯ ಚಂದಯ್ಯ ಜಯಂತೋತ್ಸವ ಕಾರ್ಯಕ್ರಮದಲ್ಲಿ ಕಾಯಕ ಶರಣರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ನಂತರ ಮಾತನಾಡಿದ ಅವರು ಎಲ್ಲಾ ಸಮುದಾಯವು ಸಹ ಶಿಕ್ಷಣ ಕ್ಕೆ ಹೆಚ್ಚು ಮಹತ್ವ ನೀಡಬೇಕು,ಶಿಕ್ಷಣ ಹಿಂದೆ ಎಲ್ಲಾ ಇದೆ .ಈ ಸಮುದಾಯವು ಇನ್ನು ಶೈಕ್ಷಣಿಕ ಪ್ರಗತಿ ಸಾಧಿಸಬೇಕು, ನುಲಿಯಾ ಚಂದಯ್ಯ ನವರು ಕಾಯಕ ಶರಣರಾಗಿದ್ದರು ಇಂತಹ ಕಾಯಕ ಶರಣರ ಜಯಂತಿ ಆಚರಣೆ ಸಮುದಾಯಕ್ಕೆ ಸ್ಫೂರ್ತಿ ತಂದಿದೆ. ಸರ್ಕಾರವು ಸಹ ಎಲ್ಲಾ ಮಹನೀಯರ ಜಯಂತಿ ಆಚರಿಸಲು ಅನುಕೂಲ ಮಾಡಿಕೊಟ್ಟಿದೆ ನುಲಿಯ ಚಂದಯ್ಯ ನವರು ಹಗ್ಗ ಮಾಡುವ ಕಾಯಕ ಮಾಡಿಕೊಂಡಿದ್ದು ಅದರಲ್ಲಿ ಬಂದಂತಹ ಹಣವನ್ನು ದಾಸೋಹಕ್ಕೆ ಬಳಕೆ ಮಾಡುತ್ತಿದ್ದರು ಎಂದರು.

 

 

 

ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ನುಲಿಯ ಚಂದಯ್ಯ ಬಸವಣ್ಣನವರ ಸಮಾಕಾಲೀನರು ಮತ್ತು ಅವರ ಜೊತೆ ಕೈಜೋಡಿಸಿದ ಪ್ರಮುಖ ಶರಣರಲ್ಲಿ ಒಬ್ಬರು .

ನುಲಿಯ ಚಂದಯ್ಯನವರ, ಇಡೀ ವಚನಗಳನ್ನು ಓದಿದಾಗ ಗುರು -ಲಿಂಗ-ಜಂಗಮ ಮತ್ತು ಕಾಯಕ – ದಾಸೋಹ ಎನ್ನುವ ಅಂಶಗಳ ಬಗ್ಗೆ ಆಳವಾದ ಒಳಹುಗಳು ತಿಳಿಸಿದವರು ನುಲಿಯ ಚಂದಯ್ಯ ತಾನು ಕಾಯಕ ನಿರತನಾಗಿ ಪ್ರತಿನಿತ್ಯದ ಅನ್ನವನ್ನು ತಾನೇ ದುಡಿದು ತಿನ್ನಬೇಕು ಎನ್ನುವ ಕಾಯಕ ಸಿದ್ದಾಂತ ಅವರದಾಗಿತ್ತು. ಅದು ಆತನ ಇಷ್ಟದೈವ ಚಂದೇಶ್ವರ ಲಿಂಗಕ್ಕೆ ಒಪ್ಪುವುದು ಎಂದು ನಂಬಿದ್ದರು.ಕಾಯಕ ಮತ್ತು ದಾಸೋಹದ ಮೂಲಕ ಸಮಾಜಕ್ಕೆ ಬೆಳಕು ನೀಡಿದವರಲ್ಲಿ ನುಲಿಯ ಚಂದಯ್ಯರೂ ಒಬ್ಬರು. ಹುಟ್ಟಿದ್ದು ಬಿಜಾಪುರ ಜಿಲ್ಲೆಯ ಶಿವಣಗಿ. ಮುಂದೆ ಕಲ್ಯಾಣಕ್ಕೆ ಬಂದು, ಕಾಯಕ ದಾಸೋಹಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಇಷ್ಟಲಿಂಗದಲ್ಲಿ ಅತ್ಮೋನ್ನತಿ ಕಂಡುಕೊಂಡರು. ಮೆದೆ ಹುಲ್ಲಿನ ಹಗ್ಗ ಹೊಸೆಯುವ ಕಾಯಕ ಮಾಡಿ ಅದನ್ನ ಮಾರಿ ಬಂದ ಆದಾಯದಿಂದ ಗುರು ಲಿಂಗ ಜಂಗಮ ಸೇವೆಗೆ ಬಳಸುತ್ತಿದ್ದರು. ಚಂದೇಶ್ವರಲಿಂಗ ಎಂಬ ಅಂಕಿತನಾಮದಲ್ಲಿ ಅವರು ರಚಿಸಿದ 48 ವಚನಗಳು ಲಭ್ಯವಾಗಿವೆ ಎಂದರು ಈ ಸಮಯಲ್ಲಿ ಕೊರಚ ಸಮುದಾಯದ ಮುಖಂಡ ಕೊಟ್ರೇಶ ,ನಗರಸಭೆ ಉಪಾಧ್ಯಕ್ಷೆ ಮಂಜುಳ ಆರ್ ಪ್ರಸನ್ನ ಕುಮಾರ್ ನಗರಸಭೆ ಸದಸ್ಯೆ ನಿರ್ಮಲ ಪ್ರಸನ್ನ ಮಾತನಾಡಿದರು.ಈ ಸಮಯದಲ್ಲಿ ನಗರಸಭೆ ಅಧ್ಯಕ್ಷರಾದ ಸುಮಕ್ಕ, ಅಂಜನಪ್ಪ, ನಗರಸಭೆ ಸದಸ್ಯರಾದ ಸುಮಕ್ಕ, ಸಾವಿತ್ರಮ, ವಿಶ್ವಕರ್ಮ ಸಮಾಜದ ರಾಜ್ಯಾಧ್ಯಾಕ್ಷ ಹಾಗೂ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಆರ್
ಪ್ರಸನ್ನಕುಮಾರ್.
ಸಮಾಜದ ಮುಖಂಡರಾದ ತಿರುಕಪ್ಪ ಕೊಟ್ರೆಶ, ಪ್ರಸನ್ನಕುಮಾರ್. ದೊಡ್ಡರಂಗಪ್ಪ.ತಾಲ್ಲೂಕು ಮಟ್ಟದ ಅಧಿಕಾರಿಗಳಾದ ಕೆಂಚಾಜಿ ರಾವ್ ,ಪೌರಯುಕ್ತ ಚಂದ್ರಪ್ಪ,ಆರ್ ಐ ಲಿಂಗೆಗೌಡ,ವಿಎ.ಪ್ರಕಾಶ,ಶ್ರೀನಿವಾಸ್, ಮುಖಂಡ ಪಾಲಯ್ಯ,ಹಾಗೂ ಸಮುದಾಯದ ಮುಖಂಡರು ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು

Leave a Reply

Your email address will not be published. Required fields are marked *