ರಾಜಕೀಯ ಕೆಸರಿನ ಗದ್ದೆ ಕೆಸರು ಅಂಟಿಸಿಕೊಳ್ಳದೆ ಉತ್ತಮ ಕೆಲಸ ಮಾಡಬೇಕು

ಆರೋಗ್ಯ

ರಾ
ರಾಜಕೀಯ ಒಂದು ಕೆಸರಿನ ಗದ್ಡೆ ಇದ್ದಂತೆ ಅದನ್ನು ಮೈಗೆ ಅಟ್ಟಿಸಿಕೊಳ್ಳದೆ ಇದರಲ್ಲಿ ಇದ್ದಕೊಂಡೇ ಉತ್ತಮವಾದ ಕೆಲಸವನ್ನು ಮಾಡಬೇಕಿದೆ ಅಲಕ್ಷಿತ ಸಮುದಾಯದವರನ್ನು ನಿರ್ಲಕ್ಷ ಮಾಡದೇ ಅವರನ್ನು ಸಮಾಜಮುಖಿಯಾಗಿ ಮಾಡುವ ಕೆಲಸವನ್ನು ಮಾಡಬೇಕಿದೆ ಎಂದು ಕರ್ಪೂರಿ ಠಾಕೂರ್ ಪ್ರಶಸ್ತಿ ಪುರಸ್ಕøತರಾದ ಚಳ್ಳಕೆರೆ ಶಾಸಕರಾದ ರಘುಮೂರ್ತಿ ಹೇಳಿದರು.
ರಾಜ್ಯ ಅಲಕ್ಷಿತ ಸಮುದಾಯಗಳ ಮಹಾ ವೇದಿಕೆ ಬೆಂಗಳೂರು, ದೇವರಾಜು ಅರಸು ಜನಸೇವಾ ಪ್ರತಿಷ್ಠಾನ ಚಿತ್ರದುರ್ಗ ಮತ್ತು ರಿದ್ದಿ ಫೌಂಡೇಷನ್ ಪ್ರತಿಷ್ಠಾನ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಲಕ್ಷಿತ ಸಮುದಾಯಗಳ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕರ್ಪೂರಿ ಠಾಕೂರ್ ಪ್ರಶಸ್ತಿಯನ್ನು ಸ್ವೀಕಾರ ಮಾಡಿ ಮಾತನಾಡಿದರು.
ಈ ಪ್ರಶಸ್ತಿಗೆ ಬಹಳಷ್ಟು ಜನ ಅರ್ಹದಿದ್ದರು ಸಹಾ ಸಂಘಟಕರು ನನನ್ನು ಗುರುತಿಸಿ ಪ್ರಶಸ್ತಿಯನ್ನು ನೀಡಿದ್ದಾರೆ. ಎರಡು ಭಾರಿ ಶಾಸಕನಾಗಿ ಕ್ಷೇತ್ರದ ಅಭೀವೃದ್ದಿಯನ್ನು ಮಾಡಿದ್ದೇನೆ ನನ್ನ ಕ್ಷೇತ್ರದಲ್ಲಿ ಎಲ್ಲಾ ಸಮುದಾಯದವರನ್ನು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವಂತ ಎಲ್ಲಾ ರೀತಿಯ ಸೌಲಭ್ಯವನ್ನು ಕೂಡಿಸಲಾಗಿದೆ. ಇದರಲ್ಲಿ ಯಾವುದೇ ತಾರತಮ್ಯವನ್ನು ಮಾಡಿಲ್ಲ, ಈ ಸಮಾಜ ಸೇವೆಯನ್ನು ಪರಿಗಣಿಸಿ ಸಂಘಟಕರು ನನಗೆ ಪ್ರಶಸ್ತಿಯನ್ನು ನೀಡಿರುವುದು ತುಂಬಾ ಸಂತೋಷವಾಗಿದೆ ಎಂದರು.
ನಾವುಗಳು ಯಾವುದೇ ಹುದ್ದೆ ಅಥವಾ ಅಧಿಕಾರದಲ್ಲಿದರೂ ಸಹಾ ಈ ರೀತಿಯಾದ ಅಲಕ್ಷಿತ ಸಮುದಾಯದವರನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ಕರೆ ತರುವ ಕಾರ್ಯವನ್ನು ಮಾಡಬೇಕಿದೆ. ಜನಪ್ರತನಿಧಿಗಳಾದವರು ಸಹಾ ಈ ರೀತಿಯಾದ ಕಾರ್ಯವನ್ನು ಮಾಡಬೇಕಿದೆ. ದೇವರಾಜು ಅರಸು ರವರು ಈ ಈ ರೀತಿಯ ನಿರ್ಲಕ್ಷಿತ ಸಮುದಾಯದವರನ್ನು ಗುರುತಿಸಿ ರಾಜಕೀಯ ಪ್ರಾತಿನೀಧ್ಯವನ್ನು ನೀಡುವ ಕೆಲಸವನ್ನು ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ್ದರಿಂದ ಇಂದಿಗೂ ಸಹಾ ಅವರನ್ನು ನೆನೆಯುತ್ತಾರೆ. ಕಪೂರೀ ಠಾಕೂರ್ ರವರು ಬಿಹಾರ ಮುಖ್ಯಮಂತ್ರಿಗಳಾಗಿ ಉತ್ತಮವಾದ ಕಾರ್ಯವನ್ನು ಮಾಡಿದ್ದಾರೆ ಎಂದು ರಘುಮೂರ್ತಿ ತಿಳಿಸಿದರು.
ಚುನಾವಣೆ ಸಮಯದಲ್ಲಿ ಮಾತ್ರವೇ ರಾಜಕೀಯ ಪಕ್ಷಗಳನ್ನು ಪರಿಗಣಿಸಬೇಕಿದೆ ತದ ನಂತರ ಎಲ್ಲವನ್ನು ಕ್ಷೇತ್ರದ ಅಭೀವೃದ್ದಿಗಾಗಿಯೇ ಸಮಯವನ್ನು ಮೀಸಲಿಡಬೇಕಿದೆ. ಬೇರೆ ಜಾತಿ ಜನಾಂಗದ ಬಗ್ಗೆ ಚಿಂತನೆಯನ್ನು ಮಾಡಬೇಕಿದೆ. ಇದರಿಂದ ತಾವು ಗಳಿಸಿದ ಹುದ್ದೆಗೆ ಗೌರವ ಸಿಕ್ಕಿದಂತೆ ಆಗುತ್ತದೆ. ಸ್ವಾತಂತ್ರ್ಯ ಸಮಯದಲ್ಲಿ ಇದ್ದ ರಾಜಕಾರಣ ಬೇರೆ ಈಗಿನ ರಾಜಕಾರಣ ಬೇರೆಯಾಗಿದೆ ಅಂದಿನ ರಾಜಕಾರಣ ಸೇವೆಯಿಂದ ಕೂಡಿತ್ತು ಇಂದಿನ ರಾಜಕಾರಣ ಸ್ವಾರ್ಥದಿಂದ ಕೊಡಿದೆ. ಕಾಂಗ್ರೆಸ್ ಪಕ್ಷ ಈ ರೀತಿಯಾದ ಅಲಕ್ಷಿತ ಸಮುದಾಯದವರೆಲ್ಲನ್ನು ಮೇಲೆತ್ತುವ ಕಾರ್ಯವನ್ನು ಮಾಡಿದೆ. ಎಲ್ಲರಿಗೂ ಸಹಾ ಸ್ಥಾನವನ್ನು ನೀಡಿದೆ. ಈ ರೀತಿಯ ವಾತಾವರಣ ಬೇರೆ ಪಕ್ಷಗಳಲ್ಲಿಯೂ ಸಹಾ ಬರಬೇಕಿದೆ. ಸಿದ್ದರಾಮಯ್ಯ ರವರ ಕಾಲದಲ್ಲಿ ನಿರ್ಲಕ್ಷಿತ ಸಮುದಾಯದವರ ಜಯಂತಿಯನ್ನು ಮಾಡುವುದರ ಮೂಲಕ ಅವರನ್ನು ಸಹಾ ನೆನಪಿಸಿಕೊಳ್ಳುವ ಕಾರ್ಯವನ್ನು ಮಾಡಲಾಯಿತೆಂದು ಹೇಳಿದರು.
ಸಮಾಜಸೇವೆಯನ್ನು ಮಾಡುವಂತ ರಾಜಕಾರಣಿಗಳಿಗೆ ತೊಂದರೆ ತಪ್ಪಿದ್ದಲ್ಲ, ಅದರಲ್ಲೂ ಸಹಾ ಸಮಾಜ ಸೇವೆಯನ್ನು ಮಾಡುವುದರ ಮೂಲಕ ತಮನ್ನು ತಾವು ಗುರುತಿಸಿಕೊಳ್ಳಬೇಕಿದೆ. ಒಳ್ಳೆಯ ಕೆಲಸವನ್ನು ಮಾಡಿದಾಗ ಟೀಕೆ ಟಿಪ್ಪಣಿಗಳು ಬುರುವುದು ಸಹಜ ಅದನ್ನು ಮೀರಿ ಕೆಲಸವನ್ನು ಮಾಡಬೇಕಿದೆ. ಸಮಾಜದ ಕಳಕಳಿಯನ್ನು ಗುರುತಿಸುವ ಕಾರ್ಯವನ್ನು ಎಲ್ಲರು ಮಾಡಬೇಕಿದೆ ಶ್ರೀಮಂತಿಕೆ ಇದ್ದಾಗ ದಾನವನ್ನು ಮಾಡಬೇಕಿದೆ ಅದರೆ ಹಲವಾರು ಜನತೆ ಶ್ರೀಮಂತಿಕೆ ಬಂದಾಗ ಇದು ನಮಗೆ ಇರಲಿ ಎಂಬ ಅಭೀಪ್ರಾಯವನ್ನು ಹೊಂದಿರುತ್ತಾರೆ ಈ ರೀತಿ ಆಗಬಾರದೆಂದು ರಘುಮೂರ್ತಿ ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ದೇವರಾಜು ಅರಸು ರವರು ಮುಖ್ಯಮಂತ್ರಿಗಳಾಗಿದ್ದಾಗ ಈ ರೀತಿಯಾದ ನಿರ್ಲಕ್ಷಿತ ಸಮುದಾಯಗಳನ್ನು ಗುರುತಿಸಿ ಮನ್ನಣೆಯನ್ನು ನೀಡಲಾಯಿತು, ಈಗಲೂ ಸಹಾ ಈ ಸಮುದಾಯ ಇನ್ನೂ ಮರಿಚಿಕೆಯಲ್ಲಿಯೇ ಇದೆ. ಇದರ ಬಗ್ಗೆ ಎಲ್ಲರು ಸಹಾ ಗಮನ ನೀಡಬೇಕಿದೆ. ಹಾವನೂರು ವರದಿ ಈ ಜನಾಂಗಕ್ಕೆ ಭಗವದ್ಗೀತೆ ಇದ್ದಂತೆ ಅದನ್ನು ಈ ವರ್ಗದವರ ಪರವಾಗಿಯೇ ನೀಡಲಾಗಿದೆ. ಎಲ್ಲಾ ಸಮುದಾಯವರು ವಿಧಾನಸಭೆಗೆ ಬರಬೇಕೆಂದು ಅರಸುರವರ ಆಶಯವಾಗಿದ್ದು ಇದರಿಂದ ಅ ಸಮುದಾಯವರ ಪರವಾಗಿ ಮಾತನಾಡಲು ಸಹಾಯವಾಗುತ್ತದೆ ಎಂಬ ಅಭೀಪ್ರಾಯವನ್ನು ಹೊಂದಿದ್ದರು ಎಂದರು.
ಠಾಕೂರ್ ರವರು ಬಿಹಾರದಲ್ಲಿ ಎರಡು ಬಾರಿ ಮುಖ್ಯಮಂತ್ರಿಗಳಾಗುವುದರ ಮೂಲಕ ಈ ಜನಾಂಗದ ಅಭೀವೃದ್ದಿಯನ್ನು ಮಾಡಿದ್ದಾರೆ ಇವರ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವು ತುಂಬಾ ಶ್ಲಾಘನೀಯವಾದ ಕೆಲಸವಾಗಿದೆ. ರಘುಮೂರ್ತಿಯವರು ಈ ಜನಾಂಗದವರನ್ನು ಸಂರಕ್ಷಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಶಾಸಕ ತಿಪ್ಪಾರೆಡ್ಡಿ ತಿಳಿಸಿದರು.
ರಾಜ್ಯ ಅಲಕ್ಷಿತ ಸಮುದಾಯಗಳ ಮಹಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ತಿಪ್ಪೇಸ್ವಾಮಿ ಸಂಪಿಗೆ ಮಾತನಾಡಿ, ಇದುವರೆವಿಗೂ ತಾಲ್ಲೂಕು ಮಟ್ಟದಲ್ಲಿ ನಡೆಯುತ್ತಿದ್ದ ಸಮಾವೇಶ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭದಲ್ಲಿ ಅಲಕ್ಷಿತ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಗುವುದು. ಇದೇ ಮೊದಲ ಬಾರಿಗೆ ಕರ್ಪೂರಿ ಠಾಕೂರ್ ಪ್ರಶಸ್ತಿಯನ್ನು ಚಳ್ಳಕೆರೆ ಶಾಸಕರಾದ ರಘುಮೂರ್ತಿಯವರಿಗೆ ಪ್ರಧಾನ ಮಾಡಲಾಗುವುದು ಪ್ರಶಸ್ತಿಯೂ 25 ಸಾವಿರ ನಗದು ಪ್ರಶಸ್ತಿ ಫಲಕವನ್ನು ಹೊಂದಿದೆ ಎಂದರು.
ರಘುಮೂರ್ತಿಯವರು ತಮ್ಮ ಕ್ಷೇತ್ರದಲ್ಲಿ ಅಲಕ್ಷಿತ ಸಮುದಾಯವನ್ನು ಪತ್ತೇ ಮಾಡಿ ಅವರಿಗೆ ಸರ್ಕಾರದಿಂದ ಸಿಗುವಂತ ವಿವಿಧ ರೀತಿಯ ಸೌಲಭ್ಯವನ್ನು ಕಲ್ಪಿಸಿದ್ದಾರೆ. ಈ ಸಮುದಾಯವನ್ನು ಯಾರೂ ಸಹಾ ಗುರುತಿಸುವುದಿಲ್ಲ, ಅವರಿಗೆ ಯಾವುದೇ ರೀತಿಯ ಪ್ರಾತಿನಿದ್ಯವನ್ನು ಸಹಾ ನೀಡುವುದಿಲ್ಲ ಆದರೆ ರಘುಮೂರ್ತಿಯವರು ಇವರನ್ನು ಗುರುತಿಸಿ ಸೌಲಭ್ಯವನ್ನು ನೀಡಿದ್ದಾರೆ ಇವರಿಗೆ ಪ್ರಶಸ್ತಿಯನ್ನು ನೀಡುವುದರಿಂದ ವಿಧಾನ ಸಭೆಯನ್ನು ಇವರ ಪರವಾಗಿ ಧ್ವನಿಯನ್ನು ಎತ್ತುವ ಕೆಲಸವನ್ನು ಮಾಡುತ್ತಾರೆ ಇದರಿಂದ ಈ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಲಾಗಿದೆ ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ನೇರವೇರಿಸಲಾಯಿತು.ಇದೇ ಸಂದರ್ಭದಲ್ಲಿ ಕರ್ಪೂರಿ ಠಾಕೂರ್ ಪ್ರಶಸ್ತಿ ಹಾಗೂ ಪುಸ್ಕøತರನ್ನು ಕುರಿತು ಡಾ.ದೊಡ್ಡಮಲ್ಲಯ್ಯ ಮಾತನಾಡಲಿದ್ದಾರೆ. ಅಲಕ್ಷಿತ ತಳ ಸಮುದಾಯಗಳ ಸ್ಥಿತಿ ಗತಿಗಳ ಕುರಿತ ಉಪನ್ಯಾಸವನ್ನು ಪತ್ರಕರ್ತರಾದ ಡಾ.ಎಂ.ಎಸ್. ಮಣಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾಧ್ಯಮ ಆಕಾಡೆಮಿಯ ಮಾಜಿ ಅಧ್ಯಕ್ಷರಾದ ಸಿದ್ದರಾಜು, ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ನಿರ್ದೇಶಕರಾದ ಕಲಾವಿದ ವಿಷ್ಣು, ಚಿತ್ರದುರ್ಗ ಟೌನ್ ಕೋ ಆಪರೇಟಿವ್ ಸೂಸೈಟಿಯ ಅಧ್ಯಕ್ಷರಾದ ನಿಶಾನಿ ಜಯ್ಯಣ್ಣ, ರಿದ್ದಿ ಪೌಂಡೇಷನ್ ಸಂಸ್ಥಾಪಕರಾದ ಶ್ರೀಮತಿ ರೇವತಿ, ಜಿ.ಪಂ.ಮಾಜಿ ಅಧ್ಯಕ್ಷರಾದ ಶಶಿಕಲಾ ಸುರೇಶ್ ಬಾಬು ಶ್ರೀಮತಿ ಶಾಂತಮ್ಮ, ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರಾದ ಮಹಮ್ಮದ್ ಮುನ್ಸೂರ್, ಎಂ.ಜೆ.ರಾಘವೇಂದ್ರ, ಜಿಲ್ಲಾ ಕಾಂಗ್ರೆಸ್ ಇತರೆ ಹಿಂದುಳಿದ ವರ್ಗದ ಅಧ್ಯಕ್ಷರಾದ ಎನ್.ಡಿ.ಕುಮಾರ್, ಹಿರಿಯ ಅಧಿಕಾರಿಗಳಾದ ಕೆಂಪರಾಜು, ಅಭೀವೃದ್ದಿ ಫೌಂಡೇಷನ್‍ನ ಶ್ರೀಮತಿ ಪವಿತ್ರ ಗಣೇಶ್, ವಿಶ್ವಕರ್ಮ ಸಮಾಜದ ಶಂಕರ ಮೂರ್ತಿ ವೀರಭದ್ರಪ್ಪ, ಖಾಸಿಂ ಆಲಿ, ತಿಮ್ಮಕ್ಕ ಸೇರಿದಂತೆ ಇತರರು ಭಾಗವಹಿಸಿದ್ದರು.

 

 

 

Leave a Reply

Your email address will not be published. Required fields are marked *