Close Menu
Samyukta VaaniSamyukta Vaani
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Facebook X (Twitter) Instagram YouTube WhatsApp Telegram
Facebook X (Twitter) Instagram
Samyukta VaaniSamyukta Vaani
  • ಮುಖಪುಟ

    ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು

    January 11, 2026

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025
  • ರಾಜ್ಯ

    ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

    January 11, 2026

    ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

    January 8, 2026

    ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

    January 6, 2026

    ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

    December 20, 2025

    ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ

    December 19, 2025
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
  • ಮುಖಪುಟ
  • ರಾಜ್ಯ
  • ಜಿಲ್ಲಾ ಸುದ್ದಿ
  • ರಾಜಕೀಯ
  • ದೇಶ
  • ಕ್ರೈಂ
  • ಸಿನೆಮಾ
  • ಕ್ರೀಡೆ
  • ಆರೋಗ್ಯ
Samyukta VaaniSamyukta Vaani
Home»ರಾಜ್ಯ»ಐತಿಹಾಸಿಕ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಭರದ ಸಿದ್ದತೆ
ರಾಜ್ಯ

ಐತಿಹಾಸಿಕ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಭರದ ಸಿದ್ದತೆ

D KumaraswamyBy D KumaraswamyFebruary 27, 2023No Comments3 Mins Read
Facebook Twitter Pinterest LinkedIn Tumblr WhatsApp VKontakte Email
Share
Facebook Twitter LinkedIn Pinterest Email

 

ಐತಿಹಾಸಿಕ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಜಾತ್ರೆಗೆ ಭರದ ಸಿದ್ದತೆ

 

 

ಚಳ್ಳಕೆರೆ ತಾಲ್ಲೂಕು ನಾಯಕನಹಟ್ಟಿ ಗ್ರಾಮದ ಶ್ರೀಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳ ಮೂಲ ಸೌಕರ್ಯಕ್ಕೆ ಕೊರತೆಯಾಗದಂತೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಹೇಳಿದರು.
ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಾಯಕನಹಟ್ಟಿ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಜಾತ್ರೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾರ್ಚ್ 3 ರಿಂದ 13ರ ವರೆಗೆ ಶ್ರೀಗುರು ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಮಾರ್ಚ್ 10 ರಂದು ಜರುಗುವ ದೊಡ್ಡ ರಥೋತ್ಸವಕ್ಕೆ ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ಸುಮಾರು 4 ಲಕ್ಷಕ್ಕೂ ಅಧಿಕ ಭಕ್ತಾಧಿಗಳು ಭಾಗವಹಿಸಲಿದ್ದಾರೆ. ಈ ಹಿನ್ನಲೆಯಲ್ಲಿ ಕುಡಿಯುವ ನೀರು, ಆರೋಗ್ಯ, ನೈರ್ಮಲ್ಯ, ಸಮರ್ಪಕ ವಿದ್ಯುತ್ ವ್ಯವಸ್ಥೆ, ಬಂದೋಬಸ್ತ್, ಸಾರಿಗೆ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಬೇಕು. ಭಕ್ತಾಧಿಗಳಿಗೆ ಕಿರಿಕಿರಿ ಹಾಗೂ ಕಿರುಕುಳವಾಗಬಾರದು. ಜನರು ಸಂತೋಷದಿಂದ ಜಾತ್ರೆಯಲ್ಲಿ ಭಾಗವಹಿಸುವಂತಾಗಬೇಕು ಎಂದರು.
40 ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ: ಈ ಬಾರಿಯ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರ ಬಳಕೆ ಹಾಗೂ ಕುಡಿಯವ ನೀರು ಸರಬರಾಜು ಮಾಡಲು 40  ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ. 6 ಕಡೆಗಳಲ್ಲಿ ಬೋರ್ ವೆಲ್‍ಗಳನ್ನು ಗುರುತಿಸಲಾಗಿದೆ. ನೀರು ಸಾಗಣಿಕೆ ನಡೆಸುವ ಟ್ಯಾಂಕರ್‍ಗಳನ್ನು ಸ್ವಚ್ಛಗೊಳಿಸಿ, ನೈರ್ಮಲೀಕರಣಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ ಎಂದು ನಾಯಕನಹಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಸಭೆಗೆ ಮಾಹಿತಿ ನೀಡಿದರು.
ಈ ಬೋರ್‍ವೆಲ್‍ಗಳ ನೀರು ಕುಡಿಯಲು ಯೋಗ್ಯವಾಗಿದೇ ಎಂದು ಪರಿಶೀಲಿಸಿ ವರದಿ ನೀಡಲು ಆರೋಗ್ಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಸರ್ಕಾರಿ ಕಚೇರಿ ಶೌಚಾಲಯಗಳು ಸಾರ್ವಜನಿಕರ ಬಳಕೆಗೆ ಲಭ್ಯ: ನಾಯಕನಟ್ಟಿ ಪಟ್ಟಣದ 5 ಕಡೆ ತಾತ್ಕಾಲಿಕವಾಗಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲು ಕ್ರಮವಹಿಸಬೇಕು. ಇದರೊಂದಿಗೆ ಜಾತ್ರಾ ಮಹೋತ್ಸವ ಜರುಗುವ ದಿನಗಳಂದು ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳ ಶೌಚಾಲಯಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತವಾಗಿರಿಸಲು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ಸೂಚನೆ ನೀಡಿದರು.
152 ಆರೋಗ್ಯ ಸಿಬ್ಬಂದಿ ನೇಮಕ: ಜಾತ್ರ ಮಹೋತ್ಸವದ ಅಂಗವಾಗಿ ಆರೋಗ್ಯ ಇಲಾಖೆಯಿಂದ 152 ಆರೋಗ್ಯ ಸಿಬ್ಬಂದಿಗಳನ್ನು  ಕರ್ತವ್ಯಕ್ಕೆ ನಿಯೋಜಿಸಲಾಗುವುದು. ಇದರಲ್ಲಿ 16 ಜನರ ವೈದ್ಯಾಧಿಕಾರಿಗಳು ಇರಲಿದ್ದಾರೆ. 4 ಕಡೆ ತಾತ್ಕಾಲಿಕವಾಗಿ ಕ್ಲಿನಿಕ್‍ಗಳನ್ನು ತೆರಯಲಾಗುವುದು. ಆಹಾರ ಹಾಗೂ ನೈರ್ಮಲ್ಯ ಮೇಲ್ವಿಚಾರಣೆಗಾಗಿ 8 ತಂಡಗಳು, ತುರ್ತು ಸೇವೆಗಳಿಗಾಗಿ 4 ಆಂಬ್ಯುಲೆನ್ಸ್, ಕೋವಿಡ್ ಲಸಿಕಾ ಕೇಂದ್ರ ಹಾಗೂ ಆರೋಗ್ಯ ಇಲಾಖೆ ಶಿಕ್ಷಣ, ಮಾಹಿತಿ ಸಂವಹನ ಮಳಿಗೆಯನ್ನು ಜಾತ್ರೆಯಲ್ಲಿ ತೆರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಂಗನಾಥ್ ಸಭೆಯಲ್ಲಿ ಮಾಹಿತಿ ನೀಡಿದರು.
ಸಿಸಿ ಟಿವಿ ಕಣ್ಗಾವಲು: ಜಾತ್ರಾ ಮಹೋತ್ಸವದ ಬಂದೋಬಸ್ತ್‍ಗಾಗಿ 2550 ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು. ಯಾವುದೇ ಅಹಿತಕರ ಘಟನೆ, ಕಳ್ಳತನ ಸಂಭವಿಸದಂತೆ ತಡೆಯಲು ಪಟ್ಟಣದ 30 ಕಡೆ ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. 3 ಕಡೆ ವಾಚ್ ಟವರ್, 22 ಕಡೆ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.
ಆಟೋದರ ನಿಗದಿ: ನಾಯಕನಹಟ್ಟಿ ಸಂಪರ್ಕಿಸುವ ಏಳು ಕಡೆಗಳಲ್ಲಿ ಚೆಕ್ ಪೋಸ್ಟ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಸಾರ್ವಜನಿಕರ ಅನುಕೂಲಕ್ಕಾಗಿ ಆಟೋಗಳು ಸಂಚರಿಸಿವೆ. ಗ್ರಾಹಕರಿಗೆ ಹೊರೆಯಾಗದಂತೆ ಆಟೋ ಚಾಲಕರೊಂದಿಗೆ ಸಮಾಲೋಚಿಸಿ ನಿರ್ದಿಷ್ಟ ದರವೊಂದನ್ನು ನಿಗದಿಪಡಿಸಲು ಕ್ರಮಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಯಿತು.
ಮುಕ್ತಿ ಬಾವುಟ ಹರಾಜು ಕೂಗಲು ನೋಂದಣಿ: ಮಾರ್ಚ್ 10 ರಂದು ಜರುಗುವ ದೊಡ್ಡ ರಥೋತ್ಸವಕ್ಕೂ ಮುನ್ನ ಜರುಗವ ಮುಕ್ತಿ ಬಾವುಟ ಹರಾಜಿನಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಳ್ಳಬೇಕು. ನೊಂದಣಿ ಸಮಯದಲ್ಲಿ ಬ್ಯಾಂಕ್ ಚೆಕ್‍ಬುಕ್ ಹಾಳೆಯೊಂದನ್ನು ದೇವಸ್ಥಾನದ ಸಮಿತಿಗೆ ನೀಡಬೇಕು. ಹರಾಜು ಕೂಗಿ ಮುಕ್ತಿ ಬಾವುಟ ಪಡೆದವರು ಮೂರು ತಿಂಗಳ ಒಳಗಾಗಿ ಹಣ ಸಂದಾಯ ಮಾಡುವಂತೆ ನಿಯಮಗಳನ್ನು ರೂಪಿಸಲು ಸಭೆಯಲ್ಲಿ ಚರ್ಚಿಸಲಾಯಿತು.
ಪ್ರಾಣಿಬಲಿ ಹಾಗೂ ಮದ್ಯ ಮಾರಾಟ ನಿಷೇಧ: ಜಾತ್ರಾ ಮಹೋತ್ಸವದಲ್ಲಿ ಕಡ್ಡಾಯವಾಗಿ ಪ್ರಾಣಿಬಲಿಯಂತಹ ಆಚರಣೆಗಳನ್ನು ನಿಷೇಧಿಸಲಾಗಿದೆ. ಪೊಲೀಸ್, ಪಟ್ಟಣ ಪಂಚಾಯತಿ ಹಾಗೂ ಪಶು ಇಲಾಖೆ ಅಧಿಕಾರಿಗಳು ಸನ್ನದ್ದವಾಗಿದ್ದು, ಪ್ರಾಣಿಬಲಿ ನೀಡುವುದನ್ನು ತಡೆಗಟ್ಟಬೇಕು ಎಂದು ಅಪರ ಜಿಲ್ಲಾಧಿಕಾರಿ ಟಿ.ಜವರೇಗೌಡ ತಿಳಿಸಿದರು.
ನಾಯಕನಹಟ್ಟಿ ಪಟ್ಟಣ ಮೂರು ಕಿ.ಮೀ. ವ್ಯಾಪ್ತಿಯ ಎಲ್ಲಾ ಮದ್ಯದ ಅಂಗಡಿಗಳನ್ನು ಮುಚ್ಚಲು ಹಾಗೂ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ತಡೆಗಟ್ಟಬೇಕು. ಪೊಲೀಸ್ ಚೆಕ್ ಪೋಸ್ಟ್‍ಗಳಲಿ ಇವುಗಳ ಕುರಿತು ಜಾಗೃತಿ ವಹಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಚಳ್ಳಕೆರೆ ತಹಶೀಲ್ದಾರ್ ರೆಹಮಾನ್ ಪಾಷಾ, ನಾಯಕನಹಟ್ಟಿ ಪಟ್ಟಣ ಪಂಚಾಯತಿ ಅಧಿಕಾರಿ ಲೀಲಾವತಿ, ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿ ಗಂಗಾಧರಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

Share. Facebook Twitter Pinterest LinkedIn Tumblr WhatsApp Email
Previous Articleರಾಜಕೀಯ ಕೆಸರಿನ ಗದ್ದೆ ಕೆಸರು ಅಂಟಿಸಿಕೊಳ್ಳದೆ ಉತ್ತಮ ಕೆಲಸ ಮಾಡಬೇಕು
Next Article ಸಿಲಿಂಡರ್ ಸ್ಪೋಟಕ್ಕೆ ಬೆಚ್ಚಿ ಬಿದ್ದ ಗೊಲ್ಲರ ಹಟ್ಟಿ
D Kumaraswamy
  • Tumblr

Related Posts

ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು

January 11, 2026

ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ

January 8, 2026

ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ

January 6, 2026

ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ

December 20, 2025
Leave A Reply Cancel Reply

Recent Posts
  • ತಮಟಕಲ್ಲು ಬಳಿ ಭೀಕರ ಅಪಘಾತ ಇಬ್ಬರು ಸಾವು
  • ಲಾರಿ ಕಾರು ನಡುವೆ ಭೀಕರ ಅಪಘಾತ ನಾಲ್ವರ ಸಾವು
  • ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಕ್ಕೆಒಳ ಮೀಸಲು ಸೌಲಭ್ಯ ಪಡೆದ ಮೊದಲ ವಿದ್ಯಾರ್ಥಿಗಳಿಂದ ಸಿಎಂ ಗೆ ಕೃತಜ್ಞತೆ
  • ಮರ್ಯಾದೆಗೇಡು ಹತ್ಯೆ ಜಿಎಸ್ ಮಂಜುನಾಥ್ ಸಾಂತ್ವಾನ
  • ನನ್ನಮೇಲಿನ ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿಯಾಗುತ್ತೇನೆ: ಶಾಸಕ ಡಾ. ಎಂ. ಚಂದ್ರಪ್ಪ
  • ಸರ್ಕಾರಿ ಗುಡ್ಡಕ್ಕೆ ಶಾಸಕ ಕನ್ನ; ಹೊಳಲ್ಕೆರೆ ಶಾಸಕ ಚಂದ್ರಪ್ಪ ವಿರುದ್ಧ ಆಂಜನೇಯ ಗಂಭೀರ ಆರೋಪ
Categories
  • Business
  • Politics
  • ಆರೋಗ್ಯ
  • ಕ್ರೀಡೆ
  • ಕ್ರೈಂ
  • ಜಿಲ್ಲಾ ಸುದ್ದಿ
  • ದೇಶ
  • ರಾಜಕೀಯ
  • ರಾಜ್ಯ
  • ಸಿನೆಮಾ
ADVERTISEMENT
Samyukta Vaani
Facebook X (Twitter) Instagram YouTube WhatsApp
© 2026 SAMYUKTAVAANI Designed by WEBGAUGE.

Type above and press Enter to search. Press Esc to cancel.