ಭಾರತದಲ್ಲಿ ಮಂಕಿ ಪಾಕ್ಸ್ ಗೆ ಮೊದಲ ಬಲಿ

ಆರೋಗ್ಯ

BREKING NEWS:

ಭಾರತದಲ್ಲಿ ಮಂಕಿ ಪಾಕ್ಸ್ ಗೆ ಮೊದಲ ಬಲಿ

ಕೇರಳದ ತ್ರಿಶೂರ್‌ನಲ್ಲಿ ಶನಿವಾರ ಮೃತಪಟ್ಟ 22 ವರ್ಷದ ಯುವಕ ಮೃತ ಪಟ್ಟಿದ್ದು, ಅವನಿಗೆ ಮಂಕಿಪಾಕ್ಸ್‌ ಇತ್ತು ಎನ್ನುವುದು ಈಗ ದೃಢಪಟ್ಟಿದೆ. ಇದರಿಂದ ಭಾರತದಲ್ಲಿ ಮಂಕಿಪಾಕ್ಸ್‌ಗೆ ಬಲಿಯಾದ ಮೊದಲ ಪ್ರಕರಣ ಎಂದು ಹೇಳಲಾಗಿದೆ.

 

 

 

ತ್ರಿಶೂರ್‌ ಜಿಲ್ಲೆಯ ಪುಣ್ಣಿಯೂರ್‌ನ ಯುವಕ ಜು.22ರಂದು ಯುನೈಟೆಡ್‌ ಅರಬ್‌ ಎಮಿರೇಟ್ಸ್‌(ಯುಎಇ)ನಿಂದ ಕೇರಳಕ್ಕೆ ಬಂದಿದ್ದ, ಭಾರತಕ್ಕೆ ಬರುವ ಮುನ್ನಾ ದಿನ ಆತ ಮಂಕಿಪಾಕ್ಸ್‌ ಸೋಂಕು ಪರೀಕ್ಷೆಗೆ ಒಳಗಾಗಿದ್ದ. ಊರಿಗೆ ಮರಳಿದ ಬಳಿಕ ಅವನಿಗೆ ವೈರಲ್‌ ಜ್ವರ ಕಾಣಿಸಿಕೊಂಡಿತ್ತು. ಆದರೆ, ಮಂಕಿಪಾಕ್ಸ್‌ನ ಇತರೆ ಯಾವುದೇ ಬಾಹ್ಯ ಲಕ್ಷಣಗಳು ಕಂಡು ಬಂದಿರಲಿಲ್ಲ. ಯುಎಇಯಿಂದ ಬರುವಾಗ ಮಂಕಿಪಾಕ್ಸ್ ಪರೀಕ್ಷೆಯನ್ನು ಮಾಡಿಸಿಕೊಂಡು‌ ಬಂದಿದ್ದು, ಇದೀಗ ಆತನಿಗೆ ಮಂಕಿಪಾಕ್ಸ್‌ ಪಾಸಿಟಿವ್‌ ಆಗಿರುವುದನ್ನು ದೃಢಪಡಿಸಿದೆ. ಆದರೆ, ಶಂಕಿತ ರೋಗಿಯ ಸಾವಿಗೆ ನಿಖರ ಕಾರಣವೇನು ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಹೇಳಿದ್ದಾರೆ.

ಈ ಸೋಂಕಿನಲ್ಲಿ ಸಾವಿನ ಪ್ರಮಾಣ ಬಹಳ ಕಡಿಮೆ ಇದೆ, ಆದರೆ ಸೋಂಕು ಹರಡುವಿಕೆ ಹೆಚ್ಚಿರುವ ಕಾರಣ ಆತನ ಸಂಪರ್ಕದಲ್ಲಿದ್ದವರೆಲ್ಲರನ್ನೂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *