ಬುಡಕಟ್ಟು ತಾಯಿ ಗೌರ ಸಮುದ್ರ ಮಾರಮ್ಮನ ಜಾತ್ರೆ ಅದ್ದೂರಿಯಾಗಿ‌ ಆಚರಿಸಿ

ರಾಜ್ಯ

ಜಗನ್ಮಾತೆ ಗೌರ ಸಮುದ್ರ ಮಾರಮ್ಮ ದೇವಿಯ 2022 23ನೇ ಸಾಲಿನ ಜಾತ್ರಾ ಮಹೋತ್ಸವವನ್ನು  ವೈಭವವಾಗಿ ಅದ್ದೂರಿಯಾಗಿ ವೈಶಿಷ್ಟ್ಯವಾಗಿ ಭಕ್ತರ ಭಾವನೆಗಳನ್ನು ಗೌರವಿಸುವ ರೀತಿಯಲ್ಲಿ   ಆಚರಣೆ ಮಾಡಬೇಕೆಂದು ಚಳ್ಳಕೆರೆ ತಹಶಲ್ದಾರ್ ಎನ್ ರಘುಮೂರ್ತಿಯವರಿಗೆ ಕರ್ನಾಟಕ ಸರ್ಕಾರದ ಸಾರಿಗೆ ಮತ್ತು ಬುಡಕಟ್ಟು ಕಲ್ಯಾಣ ಸಚಿವರಾದ ಬಿ ಶ್ರೀರಾಮುಲು ರವರು ಸೂಚಿಸಿದರು .

 

 

 

ಅವರು ಇಂದು ಗೌರಸಮುದ್ರ ಜಗನ್ಮಾತೆ ಶ್ರೀ ಮಾರಮ್ಮ ದೇವಸ್ಥಾನದ ಆವರಣದಲ್ಲಿ 2022 23ನೇ ಸಾಲಿನ ಜಾತ್ರಾ ಮಹೋತ್ಸವದ ಆಚರಣೆಯ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿ ಕಳೆದ ಎರಡು ವರ್ಷಗಳಿಂದ ಕೋವಿಡ್  ಕಾರಣದಿಂದ ದೇವಿಯ ಜಾತ್ರೆಯನ್ನು ಭಕ್ತಾದಿಗಳ ಭಾವನೆಗಳಿಗೆ ಪೂರಕವಾಗಿ ಆಚರಿಸಿಲ್ಲ ನೋವಿದೆ, ಆದರೆ ಈ ಬಾರಿ ಎಲ್ಲ ಜನ ಶೇಕಡ 100ರಷ್ಟು ಲಸಿಕೆಯನ್ನು ಕೇಂದ್ರ ಸರ್ಕಾರದ ಆಶಯದಂತೆ ಹಾಕಿಸಲಾಗಿದೆ ಅಗತ್ಯವಿರುವ ಜನರಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಇದರಿಂದ ನನ್ನ ಜನರು ಕ್ಷೇಮದಿಂದಿದ್ದಾರೆ ಆದರೂ ಈ ಜಾತ್ರಾ ಸಮಯದಲ್ಲಿ ನಾಲ್ಕು ವಿಶೇಷ ಕೌಂಟರ್ ಗಳನ್ನು ಆರಂಭಿಸಿ ಇಲ್ಲಿಯೂ ಅಗತ್ಯವಿರುವ ಜನರಿಗೆ ವ್ಯಾಕ್ಸಿನ್ ಸ್ಥಾಪಿಸುವುದರೊಂದಿಗೆ ಈ ವರ್ಷದ ಜಾತ್ರಾ ಮಹೋತ್ಸವವನ್ನು ಅಗತ್ಯವಿರುವಂತಹ ಮೂಲಭೂತ ಸೌಕರ್ಯಗಳನ್ನು ನಾಗರಿಕರಿಗೆ ಮತ್ತು ಭಕ್ತಾದಿಗಳಿಗೆ ಒದಗಿಸಿ ಸಾರಿಗೆ ಆರೋಗ್ಯ ಕುಡಿಯುವ ನೀರು ಮತ್ತು ಪೊಲೀಸ್ ಬಂದೋಬಸ್ತ್ ಇವುಗಳನ್ನು ಸಂಬಂಧಿಸಿದ ಇಲಾಖೆಗಳೊಂದಿಗೆ ಸಮನ್ವಯ ಮಾಡಿಕೊಂಡು ಹಾಗೆ ಜಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಚಳ್ಳಕೆರೆ ತಹಶಿಲ್ದಾರ್ ಮತ್ತು ತಾಲೂಕು ದಂಡಾಧಿಕಾರಿಗಳಾದ ರಘು ಮೂರ್ತಿ ಇವರಿಗೆ ಸೂಚಿಸಿದರು ವಿಧಾನಪರಿಷತ್ ಸದಸ್ಯರಾದಂತ ನವೀನ್ ರವರು ಮಾತನಾಡಿ ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿ ಗಳು ತಹಶೀಸಿಲ್ದಾರ್ ರರೊಂದಿಗೆ ಸಹಕರಿಸಿ ಮೂಲಭೂತ ಸೌಕರ್ಯಗಳಲ್ಲಿ ಯಾವುದೇ ಕೊರತೆ ಯಾಗದಂತೆ ಜಾತ್ರೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು ಗೌರಸಮುದ್ರ ಗ್ರಾಮ ಪಂಚಾಯಿತಿಯ ಸದಸ್ಯರುಗಳು ವಿವಿಧ ಬೇಡಿಕೆಗಳ ಪಟ್ಟಿಯನ್ನು ಸನ್ಮಾನ್ಯ ಸಚಿವರಿಗೆ ಸಲ್ಲಿಸಿದರು ಕೋವಿಡ್ ಪೂರ್ಣಗೊಂಡ ನಂತರ ನಾಯಕನಹಟ್ಟಿ ಶ್ರೀ ತಿಪ್ಪೇರುದ್ರಸ್ವಾಮಿ ಜಾತ್ರಾ ಮಹೋತ್ಸವವನ್ನು ಅದ್ದೂರಿಯಾಗಿ ಮಾಡಿದ್ದು ಅದರಂತೆ ಕುಡಿಯುವ ನೀರು ಸಾರಿಗೆ ಶುಚಿತ್ವ ಆರೋಗ್ಯ ಸೇವೆಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಯಾವುದೇ ಕೊರತೆಯಾಗದ ರೀತಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಒಂದೆರಡು ಬಾರಿ ಸಭೆ ನಡೆಸಿ ಕಾಲಕಾಲಕ್ಕೆ ಯಾವ ಕೆಲಸಗಳು ಯಾವುದೇ ಲೋಪ ಉಂಟಾಗದ ಹಾಗೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗುವುದೆಂಬ ಅಂಶವನ್ನು ಸಚಿವರಿಗೆ ತಿಳಿಸಿದರು. ಸಮಾರಂಭದಲ್ಲಿ ತಹಶೀಲ್ದಾರ್ ರಘುಮೂರ್ತಿ ಪೊಲೀಸ್ ಉಪ ಅಧೀಕ್ಷಕ ರಮೇಶ್ ಸಹಾಯಕ ಕಾರ್ಯ ಪಾಲಕ ಅಭಿಯಂತರರಾದ ಶ್ರೀಮತಿ ಕಾವ್ಯ ದಯಾನಂದ ಸ್ವಾಮಿ ಆರಕ್ಷಕ ವೃತ್ತ ನಿರೀಕ್ಷಕ ಶಫಿವುಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಶಿರೇಖಾ ಇತರೆ ತಾಲೂಕು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿ ಜಾಹೀರಾತಿಗೆ ಸಂಪರ್ಕಿಸಿ: 8660924503

Leave a Reply

Your email address will not be published. Required fields are marked *