ಯಾವುದೇ ಒತ್ತಡಕ್ಕೂ‌ ಮಣಿಯದೆ ‌ಮತದಾರರ ಪಟ್ಟಿ‌ ತಯಾರಿಸಿ

ಜಿಲ್ಲಾ ಸುದ್ದಿ

ಮತದಾರರ ಪಟ್ಟಿ ಚುನಾವಣೆ ಎಂಬ ಮಹಾಮನೆಯ ಹೆಬ್ಬಾಗಿಲು ಇದ್ದಂತೆ ಆದುದರಿಂದ ಮತದಾರರ ಪಟ್ಟಿಯನ್ನು  ಪರಿಪೂರ್ಣವಾಗಿ ಪರಿಷ್ಕರಿಸಿದ್ದಲ್ಲಿ ಚುನಾವಣೆ ಪೂರ್ವದ ಶೇಕಡಾ 70ರಷ್ಟು ಚುನಾವಣಾ ಕಾರ್ಯ ಸುಸೂತ್ರವಾಗಿ ಮುಗಿದಿರುತ್ತದೆ. ಆದ್ದರಿಂದ ಚುನಾವಣಾ ಪರಿಷ್ಕರಣ ಕಾರ್ಯಕ್ಕೆ ಭಾಗಿಯಾಗಿರುವಂತ ಎಲ್ಲಾ ಮತಗಟ್ಟೆ ಅಧಿಕಾರಿಗಳು ಚುನಾವಣಾ ಪಟ್ಟಿಯಲ್ಲಿರುವಂತ ಲೋಪ ದೋಷಗಳನ್ನು ಪರಿಪೂರ್ಣವಾಗಿ ಸರಿಪಡಿಸಿ ಸ್ವಚ್ಛ ಮತ್ತು ದೋಷರಹಿತ ಚುನಾವಣಾ ಪಟ್ಟಿಯನ್ನು ತಯಾರಿಸಬೇಕೆಂದು ತಹಶೀಲ್ದಾರ್ ಎನ್ ರಘುಮೂರ್ತಿ ಕರೆ ನೀಡಿದರು

 

 

 

ಅವರು ಇಂದು ಚಳ್ಳಕೆರೆ ತಾಲೂಕು ಪಂಚಾಯತಿಯಲ್ಲಿ ಚಳ್ಳಕೆರೆ ನಗರ ಮತ್ತು ಕಸಬಾ ಹೋಬಳಿಯ ಬಿ ಎಲ್ ಓ ಗಳಿಗೆ ಗರುಡ ಮೊಬೈಲ್ ಆಪ್ ಮೂಲಕ ತರಬೇತಿಯನ್ನು ಉದ್ದೇಶಿಸಿ ಮಾತನಾಡಿ ಮತದಾರ ಪಟ್ಟಿಗೆ ಸಂಬಂಧಿಸಿದಂತೆ ಯಾವುದೇ ಒತ್ತಡ ಬಂದರೂ  ಒತ್ತಡಕ್ಕೆ ಮಣಿಯದೆ ಪರಿಪೂರ್ಣ ಮತದಾರರ ಪಟ್ಟಿ ತಯಾರಿಸಬೇಕು ಸ್ಥಳೀಯವಾಗಿರುವಂತಹ ಮತದಾರರ ಪರಿಚಯವು ಬಿ ಎಲ್ ಓ ಗಳಿಗಿರುವುದರಿಂದ ಮತದಾರರ ಸೇರ್ಪಡೆ ತಿದ್ದುಪಡಿ ಮತದಾರರ ಗೆ ಸಂಬಂಧಿಸಿದ ನಮೂನೆ 6 7 8 8(a)ಗೆ ಸಂಬಂಧಿಸಿದ ನಮೂನೆಗಳನ್ನು ಮನೆ ಮನೆಗೆ ತೆರಳಿ ಪರಿಶೀಲಿಸಿ ಮತದಾರ ಪಟ್ಟಿಯನ್ನು   ಆ ಖೈರುಗೊಳಿಸಬೇಕೆಂದು ಮತ್ತು ಇಂದಿನ ತರಬೇತಿಯಲ್ಲಿ ನೀಡುವಂತಹ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರು ಮತ್ತು ಬಿ ಎಲ್ ಓ ಗಳು ಕೂಡ ಇವತ್ತಿನ ಪರಿಸ್ಥಿತಿಗೆ ಅಪ್ಡೇಟ್ ಆಗಬೇಕೆಂದು ಸಲಹೆ ನೀಡಿದರು ಎಚ್ಪಿಸಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕರಾದಂತಹ ಎ ಎಸ್ ಸತೀಶ್ ಕಸಬಾ ರಾಜಶ್ವ ನಿರೀಕ್ಷಕ ಲಿಂಗೇಗೌಡ ಗ್ರಾಮ ಲೆಕ್ಕಾಧಿಕಾರಿ ಪ್ರಕಾಶ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *